Advertisement

ಸಂಸದರು, ಸಚಿವರು ರಾಜೀನಾಮೆ ನೀಡಲಿ

12:14 PM Jul 05, 2017 | Team Udayavani |

ಬೆಂಗಳೂರು: ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡದೇ ಇದ್ದಲ್ಲಿ ರಾಜ್ಯದ ಸಂಸದರು ಹಾಗೂ ಕೇಂದ್ರದ ಸಚಿವರು ರಾಜೀನಾಮೆ ನೀಡುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ ಆಗ್ರಹಿಸಿದ್ದಾರೆ.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟಿಗೂ, ತಮಿಳುನಾಡಿಗೂ ಏನೂ ಸಂಬಂಧವಿಲ್ಲ. ವಿದ್ಯುತ್‌ತ್ಛಕ್ತಿ ತಯಾರಿಕೆ ಮತ್ತು ಕುಡಿಯುವ ನೀರು ಉದ್ದೇಶದಿಂದ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಅನುಮತಿ ಕೇಳಲಾಗಿದೆ. ಇದ್ಕಕೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದ್ದು, ಕಾರಣವಿಲ್ಲದೆ ಟೀಕೆ ಮಾಡುತ್ತಿರುವುದು ಸರಿಯಲ್ಲವೆಂದು ತಿಳಿಸಿದರು. ಒಂದು ವೇಳೆ ಕೇಂದ್ರ ಮೇಕೆದಾಟು ಯೋಜನೆಗೆ ಅನುಮತಿ ನೀಡದಿದ್ದಲ್ಲಿ ಸಂಸದರು ರಾಜೀನಾಮೆ ನೀಡಿ, ಕನ್ನಡಿಗರ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.  

ಸ್ಪೀಕರ್‌ ಕೂಡಲೇ ರಾಜೀನಾಮೆ ನೀಡಲಿ: ಹಕ್ಕುಚ್ಯುತಿ ವಿಚಾರದಲ್ಲಿ ಏಕಪಕ್ಷೀಯವಾಗಿ ಪತ್ರಕರ್ತರಿಗೆ ಶಿಕ್ಷೆ ವಿಧಿಸಿರುವ ಸ್ಪೀಕರ್‌ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಸ್ಥಾನದ ಗೌರವ ಉಳಿಸಿ ಎಂದು ವಾಟಾಳ್‌ನಾಗರಾಜ್‌ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರಿಗೆ ಒತ್ತಾಯಿಸಿದ್ದಾರೆ.  ಸ್ಪೀಕರ್‌ ಅವರು ನಡೆದುಕೊಂಡಿರುವ ರೀತಿ ಸರಿಯಲ್ಲ. ಪತ್ರಕರ್ತರನ್ನು ಸದನಕ್ಕೆ ಕರೆಯಿಸಿ ಮಾತುಕತೆ ಮೂಲಕ ಸರಿಪಡಿಸಬಹುದಾದ ವಿಚಾರಕ್ಕೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವುದು ಸಮಂಜಸಲ್ಲ. ಇದು ಮಾಧ್ಯಮಗಳನ್ನು ಹತ್ತಿಕ್ಕಲು ಹೊರಟಂತಿದೆ ಎಂದು ಟೀಕಿಸಿದರು.

ಮಾಧ್ಯಮದವರ ಮೇಲೆ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ಮಾತನಾಡಿರುವ ತಮ್ಮ ವಿರುದ್ಧವೂ ಹಕ್ಕುಚ್ಯುತಿ ಆರೋಪ ಮಾಡಬಹುದು. ಅದಕ್ಕೆ ನಾನು ಸಿದ್ದನಿದ್ದೇನೆ ಎಂದ ಅವರು, ಮಾಧ್ಯಮಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಒಂದೆಡೆ ಮಾಧ್ಯಮ ನಿಯಂತ್ರಣಕ್ಕೆ ಸದನ ಸಮಿತಿ ರಚನೆ, ಮತ್ತೂಂದೆಡೆ ಪತ್ರಕರ್ತರಿಗೆ ಒಂದು ವರ್ಷ ಜೈಲು ಶಿಕ್ಷೆ ನೀಡುವಂತ ಧೋರಣೆ ಖಂಡನೀಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next