ಕುಳಗೇರಿ ಕ್ರಾಸ್: ನೆರೆ ಪೀಡಿತ ಗ್ರಾಮಗಳಿಗೆ ಸಂಸದ ಪಿ.ಸಿ. ಗದ್ದಿಗೌಡರ ಭೇಟಿ ನೀಡಿ ಜನರ ಸಮಸ್ಯೆಗಳನ್ನಾಲಿಸಿದರು. ನಂತರ ಮಲಪ್ರಭಾ ನದಿ ಪ್ರವಾಹಕ್ಕೀಡಾದ ಬಾಗಲಕೋಟೆ-ಗದಗ ಸಂಪರ್ಕ ಕಲ್ಪಿಸುವ ಗೋವಿನಕೊಪ್ಪ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು.
ಸದ್ಯದ ಪರಿಸ್ಥಿತಿ ಅವಲೋಕಿಸಿದ ಸಂಸದರು ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ದೂರವಾಣಿ ಮೂಲಕಡಿಸಿಎಂ ಕಾರಜೋಳ ಅವರ ಗಮನಕ್ಕೆ ತಂದರು. ಈಗಿರೋ ಸೇತುವೆ ಜತೆಗೆ ಇನ್ನುಳಿದ ಭಾಗದಲ್ಲು ಸೇತುವೆ ನಿರ್ಮಿಸಲು ಯೋಚಿಸಲಾಗಿದೆ. ಸೇತುವೆ ನಿರ್ಮಾಣಕ್ಕಾಗಿ ಹೆಚ್ಚುವರಿ ಹಣ ಬೇಕಿದೆ ಕಾರಣ ಕೇಂದ್ರಕ್ಕೆ ತಿಳಿಸುತ್ತೇನೆ. ಪ್ರತಿ ಬಾರಿಮಲಪ್ರಭಾ ಪ್ರವಾಹಕ್ಕೆ ಹೆದ್ದಾರಿ ಕಿತ್ತು ಹೋಗಿ ಜನರಿಗೆ ಬಾರಿ ತೊಂದರೆಯಾಗುತ್ತಿದ್ದು, ಸದ್ಯ ಶಾಶ್ವತ ಪರಿಹಾರ ಮಾಡಲಾಗುವುದು ಎಂದರು. ಈ ಬಾರಿ ತಾತ್ಕಾಲಿಕ ರಸ್ತೆ ದುರಸ್ತಿ ಕಾರ್ಯ ಬೇಗ ಮಾಡಿ ವಾಹನಗಳ ಸಂಚಾರ ಸುಗಮಗೊಳಿಸಿ ಎಂದು ಅ ಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಬಾರಿ ಪ್ರವಾಹಕ್ಕೆ ಸೇತುವೆಯ ರಸ್ತೆ ಕಿತ್ತು ಹೋಗುತ್ತಿದೆ. ನಾವು ಸಹ ತಾತ್ಕಾಲಿಕ ದುರಸ್ತಿ ಮಾಡುತ್ತಲೇ ಬಂದಿದ್ದೇವೆ. ಸದ್ಯ ಈ ಬಗ್ಗೆ ಮೇಲಾಧಿಕಾರಿಗಳಿಗೆ ಎಷ್ಟೇ ಹೇಳಿದರು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಾರಿ ಜನಪ್ರತಿನಿ ಧಿಗಳು ಭೇಟಿ ಕೊಟ್ಟಿದ್ದು, ಈ ಬಾರಿಯಾದರೂ ಶಾಶ್ವತ ಪರಿಹಾರ ಕಲ್ಪಿಸಿದರೆ ಸಾಕು ಎಂದು ನರಗುಂದ ಸಹಾಯಕ ಇಂಜಿನಿಯರ್ ಎಇಇ ರಾಜೇಂದ್ರ ಹೇಳಿದರು.
…………………………………………………………………………………………………………………………………………………
ತೊಗರಿ ಬೆಳೆ ಬಾಧೆಗೆ ಪೋಷಕಾಂಶ ನಿರ್ವಹಣೆ :ಬಾಗಲಕೋಟೆ: ಜಿಲ್ಲೆಯಲ್ಲಿ ತೊಗರಿಬೆಳೆಯು ಬೆಳವಣಿಗೆ ಹಂತದಲ್ಲಿದ್ದು, ಈಗ ನಿರಂತರ ಮಳೆಯಿಂದ ಹಾಗೂ ಭೂಮಿಯಲ್ಲಿ ಅತಿಯಾದ ತೇವಾಂಶ ಮತ್ತು ವಾತಾವರಣದಲ್ಲಿ ತಂಪು ಆವರಿಸಿರುವ ಕಾರಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡು ಬಂದಿದೆ.ಸಸಿಗಳ ಬೇರುಗಳ ಚಟುವಟಿಕೆ ನಿಷ್ಕ್ರಿಯಗೊಂಡು ಮತ್ತು ಸೂರ್ಯನಕಿರಣಗಳು ಕೆಳಗಿನ ಎಲೆಗಳ ಮೇಲೆ ಬೀಳದೆ ಇರುವುದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದಕ್ಕೆ ಮಳೆ ನಿಂತ ನಂತರ ಬಿಸಿಲು ಬೀಳುವ ಹಂತದಲ್ಲಿ 3 ರಿಂದ 5 ಗ್ರಾಂ ಕರಗುವಎನ್‌ಪಿಕೆ 19:19:19 ಗೊಬ್ಬರ ಹಾಗೂ 1ಗ್ರಾಂ ಕಾರ್ಬೆಂಡೆಜಿಮ್ 50ಡಬ್ಲೂ ಪ್ರತಿ ಲೀಟರ್ ನೀರಿಗೆ ಬೆರಸಿ ಸಸಿಗೆ ಸಿಂಪಡಿಸಬೇಕು ಎಂದು ಜಿಲ್ಲಾ ಜಂಟಿ ನಿರ್ದೇಶಕಿ ಡಾ|ಚೇತನಾ ಪಾಟೀಲಪ್ರಕಟಣೆಯಲ್ಲಿ ತಿಳಿಸಿದ್ದಾರೆ.