Advertisement

4 ದಶಕ ಬಳಿಕ ಈ ಗ್ರಾಮದಲ್ಲಿ ಮದುವೆ

10:47 AM Feb 27, 2017 | Team Udayavani |

ನವದೆಹಲಿ: ಮಧ್ಯಪ್ರದೇಶದ ಗುಮಾರ ಎಂಬ ಗ್ರಾಮ 40 ವರ್ಷಗಳ ಬಳಿಕ ಯುವತಿಯ ಮದುವೆಗೆ ಸಾಕ್ಷಿಯಾಗುತ್ತಿದೆ. ಆಕೆಯ ಹೆಸರು ಆರತಿ ಗುರ್ಜರ್‌. ಗಮನಾರ್ಹ ಅಂಶವೆಂದರೆ ಆಕೆ ಅದೇ ಗ್ರಾಮದಲ್ಲಿ ಹುಟ್ಟಿದವರು. ಈ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಆರತಿ ಮದುವೆಯಾಗುತ್ತಿದ್ದಾರೆ. ವೈದ್ಯೆಯಾಗ­ಬೇಕೆಂದು ಇಚ್ಛೆ ಹೊಂದಿರುವ ಅವರು ಮದುವೆ ನಂತರವೂ ಶಿಕ್ಷಣ ಮುಂದುವರಿಸುವುದಾಗಿ ಹೇಳಿದ್ದಾರೆ. 

Advertisement

ಹೆಣ್ಣು ಮಗು ಭ್ರೂಣ ಹತ್ಯೆಗೆ ಕುಖ್ಯಾತಿ ಗಳಿಸಿರುವ ಈ ಗ್ರಾಮದಲ್ಲಿ ಹೆಣ್ಣು ಮಗು ಹೊಂದಲು ಇಚ್ಛಿಸುತ್ತಿರಲಿಲ್ಲ. 2003ನೇ ಇಸ್ವಿಯ ವರೆಗೆ ಹೆಣ್ಣು ಶಿಶು ಅಥವಾ ಭ್ರೂಣ ಹತ್ಯೆ ಅಲ್ಲಿ ಸಾಮಾನ್ಯ ವಿಚಾರವಾಗಿತ್ತು. ಕೇಂದ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳು ಭ್ರೂಣ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಬಳಿಕ ಸ್ಥಳೀಯರ ಮನಃಸ್ಥಿತಿಯೂ ಬದಲಾಗುತ್ತಾ ಬಂದಿತು ಮಾತ್ರವಲ್ಲದೆ ಭ್ರೂಣ ಹತ್ಯೆಯ ಪ್ರಮಾಣವೂ ಹತೋಟಿಗೆ ಬಂದಿತು. 1995ರಲ್ಲಿ 10:0 ಇದ್ದ ಲಿಂಗಾನುಪಾತ 2001ಕ್ಕೆ 10:2 ಕ್ಕೆ ಏರಿತ್ತು, 2011 ರಲ್ಲಿ 10:7 ಕ್ಕೆ ಏರಿಕೆಯಾಗಿತ್ತು. ಈ ಬೆಳವಣಿಗೆ ಹಳ್ಳಿಯ ಜನರ ಸಂತಸಕ್ಕೆ ಕಾರಣವಾಗಿದೆ. “ಇದು ನಮ್ಮ ಹಳ್ಳಿಯಲ್ಲಿ ನಾನು ನೋಡುತ್ತಿರುವ ಮೊದಲನೇ ಹೆಣ್ಣು ಮಗಳ ಮದುವೆ’ ಎಂದು 16 ವರ್ಷ ವಯಸ್ಸಿನ ಆಕಾಶ್‌ ಗುಜ್ಜಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next