Advertisement

ಹಿಂದೂ ಧರ್ಮಕ್ಕೆ ಅವಮಾನಿಸುವುದು ಫ್ಯಾಷನ್ ಆಗಿದೆ : ‘ಪೊಗರು’ ವಿರುದ್ಧ ಸಂಸದೆ ಶೋಭಾ ಕಿಡಿ  

04:36 PM Feb 23, 2021 | Team Udayavani |

ಬೆಂಗಳೂರು: ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಹಾಕಿ, ಮರು ಸೆನ್ಸಾರ್ ಆಗೋವರೆಗೆ ಚಿತ್ರಮಂದಿರಗಳಲ್ಲಿ ‘ಪೊಗರು’ ಚಿತ್ರದ ಪ್ರದರ್ಶನ ನಿಲ್ಲಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

Advertisement

ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನಕಾರಿ ದೃಶ್ಯಗಳ ಆರೋಪದ ವಿವಾದದ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕರಂದ್ಲಾಜೆ, ಹಿಂದೂಗಳನ್ನು ಅವಮಾನಿಸುವುದು, ಹಿಂದೂಗಳ ಭಾವನೆಗೆ ಧಕ್ಕೆ ತರುವುದು ಫ್ಯಾಷನ್ ಆಗಿದೆ. ಇದೇ ರೀತಿ ಬೇರೆ ಧರ್ಮಗಳನ್ನು ಅಪಮಾನ ಮಾಡುವ ಧೈರ್ಯ ನಿಮಗಿದೆಯೇ? ಹಿಂದೂ ಧರ್ಮಗಳ ಭಾವನೆಗೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಇಂದು ( ಫೆ.23 ) ಮಾಧ್ಯಮಗೋಷ್ಟಿ ನಡೆಸಿ ಬ್ರಾಹ್ಮಣ ಸಮುದಾಯದ ಕ್ಷಮೆ ಕೋರಿರುವ ನಿರ್ದೇಶಕ ನಂದ ಕಿಶೋರ್, ವಿವಾದಿತ 14 ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಆ ದೃಶ್ಯಗಳನ್ನು ರಿಮೂವ್ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಫೆ.19 ರಂದು ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರಕ್ಕೆ ವಿವಾದ ಅಂಟಿಕೊಂಡಿದೆ. ಚಿತ್ರದಲ್ಲಿ ಬ್ರಾಹ್ಮಣರಿಗೆ ಅಪಮಾನಗೊಳಿಸುವ ದೃಶ್ಯಗಳನ್ನು ತೆಗೆದು ಹಾಕುವಂತೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ಕೂಡ ವ್ಯಕ್ತವಾಗಿತ್ತು. ಈಗ ನಿರ್ದೇಶಕರು ಕ್ಷಮೆ ಕೋರುವ ಮೂಲಕ ವಿವಾದಕ್ಕೆ ತೆರೆ ಬಿದ್ದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next