ಮುಂಬಯಿ : ನಾನು 100 ದಿನಗಳಿಗಿಂತ ಹೆಚ್ಚು ಜೈಲಿನಲ್ಲಿ ಕಳೆದಿದ್ದೇನೆ, ನನ್ನ ಅಪರಾಧ ಏನು ಎಂದು ಶಿವಸೇನೆ (ಉದ್ಧವ್ ಬಣ ) ಸಂಸದ ಸಂಜಯ್ ರಾವತ್ ಬುಧವಾರ ಪ್ರಶ್ನಿಸಿದ್ದಾರೆ.
ನಾವು ಪ್ರಕರಣದಲ್ಲಿ ಹೋರಾಡಿದ್ದೇವೆ ಮತ್ತು ನ್ಯಾಯಾಲಯದ ತೀರ್ಪು ಬಂದಿತು. ನಾವೇನೂ ತಪ್ಪು ಮಾಡಿಲ್ಲ. ನಾನು ಯಾರ ವಿರುದ್ಧವೂ ದ್ವೇಷ ಸಾಧಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವಿರುತ್ತದೆ ಎಂದು ಜೈಲಿನಿಂದ ಹೊರಬಂದ ನಂತರ ಹೇಳಿಕೆ ನೀಡಿದ್ದಾರೆ.
ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಹಿರಿಯ ಮುಖಂಡ, ಸಂಜಯ್ ರಾವತ್ ಗೆ ಮೂರು ತಿಂಗಳ ಬಳಿಕ ವಿಶೇಷ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದ ಸಂಬಂಧ ಸಂಜಯ್ ರಾವತ್ ಅವರನ್ನು ಜಾರಿ ನಿರ್ದೇಶನಾಲಯ ಆಗಸ್ಟ್ 1ರಂದು ಬಂಧಿಸಿತ್ತು.