Advertisement

ವಿಐಎಸ್‌ಎಲ್‌ ಕಾರ್ಖಾನೆ ಪುನಶ್ಚೇತನಕ್ಕೆ ಮನವಿ 

08:43 PM Mar 10, 2021 | Team Udayavani |

ಶಿವಮೊಗ್ಗ: ಭದ್ರಾವತಿಯ ವಿ.ಐ.ಎಸ್‌.ಎಲ್‌. ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನುಪುನರುಜ್ಜೀವನ ಗೊಳಿಸಲು ಹಾಗೂ ಜಿಲ್ಲೆಯ ವಿವಿಧ ಆದ್ಯತಾ ಕ್ಷೇತ್ರಗಳಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವ ಮೂಲಕ ಯುವ ಸಮೂಹಕ್ಕೆಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಲ್ಲಿ ಮನವಿಮಾಡಿದ್ದಾರೆ.

Advertisement

ಮಂಗಳವಾರ ದೆಹಲಿಯಲ್ಲಿ ಕೇಂದ್ರಹಣಕಾಸು ಸಚಿವೆ ನಿರ್ಮಲಾ ಸೀತಾರಾವåನ್‌ಅವರನ್ನು ಭೇಟಿ ಮಾಡಿ ಸಮಾಲೋಚನೆನಡೆಸಿದ ಅವರು, ಪ್ರಸ್ತುತ ಭದ್ರಾವತಿಯಲ್ಲಿಸ್ಥಗಿತಗೊಂಡಿರುವ ಕಾರ್ಖಾನೆಯು ಹೆಚ್ಚಿನಮೌಲ್ಯವುಳ್ಳ ಆತ್ಯಾಧುನಿಕ ತಂತ್ರಜ್ಞಾನಾಧಾರಿತಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು,ಈ ಕೈಗಾರಿಕೆಯನ್ನು ಲಾಭದಾಯಕವಾಗಿ ನಡೆಸಲು ಇನ್ನಷ್ಟು ಅತ್ಯಾಧುನಿಕವಾದ ಯಂತ್ರೋಪಕರಣಗಳು ಸೇರಿದಂತೆ ವಿವಿಧಅವಶ್ಯಕ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ ಎಂದರು

ಈ ಕೈಗಾರಿಕೆಯಲ್ಲಿನ ಉಕ್ಕು ಉತ್ಪಾದನಾಘಟಕಗಳಲ್ಲಿ ಬಂಡವಾಳ ಹೂಡಿಕೆ ಮಾಡಿ,ಹೆಚ್ಚಿನ ಮೌಲ್ಯವುಳ್ಳ ಉತ್ಪನ್ನಗಳ ಉತ್ಪಾದನೆಹೆಚ್ಚಿಸುವ ಅವಶ್ಯಕತೆ ಇದೆ. ಮಧ್ಯಮಹಾಗೂ ದೀರ್ಘ‌ಕಾಲದ ಅವ ಧಿಯಲ್ಲಿ,ಉಕ್ಕು ಉತ್ಪಾದನೆಯ ಪ್ರಕ್ರಿಯೆಯನ್ನುಆಧುನಿಕ ವ್ಯವಸ್ಥೆಗೆ ಪೂರಕವಾಗಿ ನವೀಕರಿಸಿ,ಸಿಂಟರ್‌ ಪ್ಲಾಂಟ್‌, ಕೋಕ್‌ ಓವನ್‌ ಹಾಗೂಆಧುನೀಕರಿಸಿದ ಸ್ಟೀಲ್‌ ಕರಗುವ ಘಟಕದಸೌಲಭ್ಯಗಳನ್ನು ನೀಡುವುದರ ಮೂಲಕ ಪ್ರತಿಸ್ಪರ್ಧಿಗಳಲ್ಲಿ ಲಭ್ಯವಿರುವ ಮಟ್ಟಕ್ಕೆ ವಿ.ಐ.ಎಸ್‌.ಎಲ್‌. ಘಟಕವನ್ನು ಕೊಂಡೊಯ್ಯುವಅಗತ್ಯವಿದೆ. ಖಾಸಗಿ ಬಂಡವಾಳಗಾರರನ್ನುಆಕರ್ಷಿಸಿ ವಿ.ಐ.ಎಸ್‌.ಎಲ್‌. ಅನ್ನು ಪುನರ್‌ಆರಂಭ ಮಾಡಲು ಕೇಂದ್ರ ಸಚಿವೆ ನಿರ್ಮಲಾಸೀತಾರಾಮನ್‌ ಅವರಲ್ಲಿ ಮನವಿ ಮಾಡಿದರು.ಈ ಬಗ್ಗೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆಎಂದು ತಿಳಿಸಿದ್ದಾರೆ

ಅಂತೆಯೇ ಜಿಲ್ಲೆಯಲ್ಲಿ ಎಲ್‌.ಇ.ಡಿ. ಬಲ್ಬ್,ಟೆಕ್ಸ್‌ಟೈಲ್‌ ಪಾರ್ಕ್‌, ಆಹಾರ ಸಂಸ್ಕರಣಾಘಟಕಗಳು ಮತ್ತು ಇ.ಎಸ್‌.ಡಿ.ಎಂ. ಕೈಗಾರಿಕಾಕೇಂದ್ರಗಳ ಮುಖಾಂತರ ಉದ್ಯೋಗ ಅವಕಾಶಗಳನ್ನು ಸೃಷ್ಟಿ ಮಾಡಲೂ ಸಹ ಮನವಿಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next