Advertisement

ಭಾರತ್ ಜೋಡೋ ದಲ್ಲಿ ತಂಗಿಗೆ ಬಿಲ್ಗಾರಿಕೆ ತರಬೇತಿ ನೀಡಿದ ರಾಹುಲ್; ವಿಡಿಯೋ ವೈರಲ್

05:59 PM Nov 24, 2022 | Team Udayavani |

ಮಧ್ಯಪ್ರದೇಶ : ಉತ್ತರ ಪ್ರದೇಶದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮೊದಲ ಬಾರಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಅವರು ತಮ್ಮ ಪತಿ ಮತ್ತು ಪುತ್ರನೊಂದಿಗೆ ಗುರುವಾರ ಇಲ್ಲಿ ಮೊದಲ ಬಾರಿಗೆ ತಮ್ಮ ಸಹೋದರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡರು.

Advertisement

ಮಧ್ಯಪ್ರದೇಶದ ಯಾತ್ರೆಯ ಎರಡನೇ ದಿನದಂದು ರಾಹುಲ್ ಗಾಂಧಿ ಅವರು ಖಾಂಡ್ವಾ ಜಿಲ್ಲೆಯ ಬೋರ್ಗಾಂವ್‌ನಿಂದ ಪಾದಯಾತ್ರೆ ಆರಂಭಿಸಿದರು. ಪ್ರಿಯಾಂಕಾ ಗಾಂಧಿ, ಅವರ ಪತಿ ರಾಬರ್ಟ್ ವಾದ್ರಾ ಮತ್ತು ಮಗ ರೆಹಾನ್ ಅವರು ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದರು.

ಬಿಲ್ಗಾರಿಕೆ ತರಬೇತಿ
ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ವಿಡಿಯೋವನ್ನು ಟ್ವೀಟ್ ಮಾಡಿ “ಆರಂಭವು ತೀವ್ರವಾಗಿದೆ..” ಎಂದು ಬರೆದುಕೊಂಡಿದೆ. ಈ ವಿಡಿಯೋದ ಲ್ಲಿ, ಪ್ರಿಯಾಂಕಾ ಗಾಂಧಿ ಕೈಯಲ್ಲಿ ಬಿಲ್ಲು ಮತ್ತು ಬಾಣವನ್ನು ಹಿಡಿದು ಮುಂದಿನ ಗುರಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ, ರಾಹುಲ್ ಗಾಂಧಿ ಅವರ ಪಕ್ಕದಲ್ಲಿ ನಿಂತಿದ್ದಾರೆ ಮತ್ತು ಅವರು ಬಾಣಗಳನ್ನು ಹೊಡೆಯುವ ಮೂಲಕ ಪ್ರಿಯಾಂಕಾ ಗಾಂಧಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ನಂತರ ಮುಂದಿನ ದೃಶ್ಯದಲ್ಲಿ ಸ್ವತಃ ರಾಹುಲ್ ಗಾಂಧಿ ಕೈಯಲ್ಲಿ ಬಿಲ್ಲು ಹಿಡಿದು ಬಾಣ ಹೊಡೆಯುವುದು ಕಂಡು ಬಂದಿದೆ. ಇತರ ನಾಯಕರೂ ಬಾಣ ಹೊಡೆದು ಯಾತ್ರೆಯಲ್ಲಿ ಹುಮ್ಮಸ್ಸು ಮೂಡಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಮತ್ತು ಅವರ ಸಹೋದರಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು ಮತ್ತು ಅವರ ಬಳಿಗೆ ಬರಲು ಪ್ರಯತ್ನಿಸಿದರು, ಆದರೆ ಅದನ್ನು ತಡೆಯಲು ಪೊಲೀಸರು ತೀವ್ರ ಪ್ರಯತ್ನಗಳನ್ನು ಮಾಡುತ್ತಿರುವುದು ಕಂಡು ಬಂದಿತು.

Advertisement

ಸಚಿನ್ ಪೈಲಟ್ ಭಾಗಿ
ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕೂಡ ಹೆಜ್ಜೆ ಹಾಕಿದರು. ಡಿಸೆಂಬರ್ 4 ರಂದು ಮಧ್ಯಪ್ರದೇಶದಿಂದ 380 ಕಿ.ಮೀ ಕ್ರಮಿಸಿದ ನಂತರ ಯಾತ್ರೆ ರಾಜಸ್ಥಾನವನ್ನು ಪ್ರವೇಶಿಸಲಿದೆ.

ರಾಹುಲ್ ಗಾಂಧಿ ಯಾತ್ರೆಯ ಪ್ರವೇಶಕ್ಕೂ ಮುನ್ನ ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆಯ ಬೇಡಿಕೆಗಳು ಮತ್ತೆ ಎದ್ದಿರುವ ಸಮಯದಲ್ಲಿ ಪೈಲಟ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next