Advertisement

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದರೆ ಪ್ರಬಂಧ ಬರೆಯುವ ಶಿಕ್ಷೆ

10:10 AM Jan 18, 2020 | keerthan |

ಭೋಪಾಲ್: ದೇಶದಲ್ಲಿ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯ ನಂತರ ಶಿಕ್ಷೆಯ ಪ್ರಮಾಣ ಹೆಚ್ಚಾಗಿರುವುದು, ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನೀವು ಓದಿರುತ್ತೀರಿ. ಆದರೆ ಈ ಶಿಕ್ಷೆಯ ಪಟ್ಟಿಯಲ್ಲಿ ಹೊಸತೊಂದು ಬಗೆಯ ಶಿಕ್ಷೆಯನ್ನು ಭೋಪಾಲ್ ಪೊಲೀಸರು ಆರಂಭಿಸಿದ್ದಾರೆ. ಅದುವೇ ಪ್ರಬಂಧ ಬರೆಯುವ ಶಿಕ್ಷೆ.

Advertisement

ಹೌದು. ಭೋಪಾಲ್ ಪೊಲೀಸರು ಹೆಲ್ಮೆಟ್ ಧರಿಸದೇ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರರಿಗೆ ಪ್ರಬಂಧ ಬರೆಯುವ ಶಿಕ್ಷೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಸವಾರ ಯಾಕೆ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಗಳನ್ನು ನೀಡಿ ಸುಮಾರು ನೂರು ಶಬ್ಧದ ಪ್ರಬಂಧ ಬರೆಯಬೇಕು.

ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ಇಂದು ವಾರದ ಮಟ್ಟಿಗೆ ಈ ಪ್ರಯೋಗವನ್ನು ಮಾಡಲಾಗಿದೆ. ಸುಮಾರು 150 ಕ್ಕೂ ಹೆಚ್ಚಯ ಬೈಕ್ ಸವಾರರು ಈ ಪ್ರಬಂಧ ಶಿಕ್ಷೆಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next