Advertisement

ಪೆಟ್ರೋಲ್ ದರ ಶತಕದ ಗಡಿ ಮೀರಿದ್ದೇ ಮೋದಿ ಸರ್ಕಾರದ ಸಾಧನೆ: ಸಂಸದ ಸೈಯದ್ ನಾಸೀರ್ ಹುಸೇನ್

01:57 PM Jul 07, 2021 | Team Udayavani |

ವಿಜಯಪುರ: ದೇಶದಲ್ಲಿ ನಡೆಯುತ್ತಿರುವ ಆಡಳಿತದ ದುರವಸ್ಥೆ, ಜನಸಾಮಾನ್ಯರು, ರೈತರು ತತ್ತರಿಸಿದ್ದಾರೆ. ಉತ್ತಮ ಆಡಳಿತ ನೀಡಿದ ಯುಪಿಎ ಸರ್ಕಾರದ ದಶಕದ ಆಡಳಿತ ಟೀಕಿಸಿ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರು ಮೋದಿ‌ ಸರ್ಕಾರದ ದುರಾಡಳಿತದ ವಿರುದ್ಧ ಮೌನ ವಹಿಸಿದ್ದೇಕೆ ಎಂದು ಕಾಂಗ್ರೆಸ್ ಸಂಸದ  ಸೈಯದ್ ನಾಸೀರ್ ಹುಸೇನ್ ಟೀಕಾ ಪ್ರಹಾರ ನಡೆಸಿದ್ದಾರೆ.

Advertisement

ಬುಧವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದಕ್ಷಿಣ ಏಷ್ಯಾದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ರಾಷ್ಟ್ರಗಳಲ್ಲಿ 60-65 ರೂ. ಲೀಟರ್ ಪೆಟ್ರೋಲ್ ದರ ಇದ್ದರೂ, ಭಾರತದಲ್ಲಿ ದರ ಶತಕದ ಗಡಿ ಮೀರಿದ್ದೇ ಮೋದಿ ಸರ್ಕಾರದ ಏಳು ವರ್ಷಗಳ ಸಾಧನೆ ಎಂದು ಟೀಕಿಸಿದರು.

ಇದನ್ನೂ ಓದಿ: ಬಂಟ್ವಾಳ: ಬೈಕ್ ಗೆ ಢಿಕ್ಕಿ ಹೊಡೆದ ಲಾರಿ: ಬೈಕ್ ಸವಾರ ಸಾವು ; ಲಾರಿಯೊಂದಿಗೆ ಪರಾರಿಯಾದ ಚಾಲಕ

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂಧನ, ಅನಿಲ ಬೆಲೆ ಏರಿಸಿ ಬಡವರು, ಜನಸಾಮಾನ್ಯರ ಪಾಲಿಗೆ ಮಾರಕ ನಡೆ ಪ್ರದರ್ಶಿದೆ. ರೈತ ವಿರೋಧಿ ಕಾಯ್ದೆ ಜಾರಿಗೆ ತಂದ ಕ್ರಮವನ್ನು ವಿರೋಧಿಸಿದ ನಾನು ಸೇರಿದಂತೆ ಕಾಂಗ್ರೆಸ್ ಸಂಸದರನ್ನು ಸದನದಿಂದ ಅಮಾನತು ಮಾಡುವಂಥ ಕ್ರಮ ಕೈಗೊಳ್ಳಲಾಯಿತು ಎಂದು ಟೀಕಿಸಿದರು.

ರಾಜ್ಯದಲ್ಲೂ ಬಿಜೆಪಿ ಸರ್ಕಾರದ ಕಾರ್ಯ ವೈಖರಿ ದುರಾಡಳಿತದಿಂದ ಕೂಡಿದೆ. ಕೋವಿಡ್ ಲಾಕ್ ಡೌನ್ ಹೇರಿದ ಸರ್ಕಾರ ಕಷ್ಟದಲ್ಲಿ ಜನರ ನೆರವಿಗೆ ಧಾವಿಸುವ ಕೆಲಸ ಮಾಡಲಿಲ್ಲ ಎಂದು ದೂರಿದರು.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರಗಲ ದುರಾಡಳಿತ ವಿರೋಧಿಸಿ ಕಾಂಗ್ರೆಸ್ ಪಕ್ಷ ಜನ ಜಾಗೃತಿಗಾಗಿ ಸೈಕಲ್ ಜಾಥಾ ಹಮ್ಮಿಕೊಂಡಿದೆ ಎಂದರು.

ಶಾಸಕ ಆರ್.ಬಿ.ತಿಮ್ಮಾಪುರ, ಮಾಜಿ ಶಾಸಕ ವಿಠ್ಠಲ ಕಟಕದೋಂಡ, ರಾಜು, ಶರಣಪ್ಪ ಸುಣಗಾರ, ಅಬ್ದುಲ್ ಹಮೀದ್ ಮುಶ್ರೀಫ್, ವಿದ್ಯಾರಾಣಿ ತುಂಗಳ ಇತರರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next