Advertisement
ಬಿಜೆಪಿ ಕಚೇರಿಯಲ್ಲಿ ಸೋಮವಾರ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಬಿಎಂಎಸ್ ರಿಕ್ಷಾ ಚಾಲಕರೊಂದಿಗೆ ಸಂವಾದ ನಡೆಸಿದರು. ನಳಿನ್ ಕುಮಾರ್ ಕಟೀಲು ಅವರು ಮೋದಿ ಸರಕಾರದ ಸಾಧನೆಗಳ ಕುರಿತು ಮತ್ತು ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರು. ಬಳಿಕ ರಿಕ್ಷಾ ಚಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು. ಬಿಎಂಎಸ್‌ಗೆ ಒಂದು ಕಟ್ಟಡ ಆಗಬೇಕು. ಅದಕ್ಕಾಗಿ ನಕ್ಷೆ ತಯಾರಿಸಲಾಗಿದೆ. ನಮ್ಮಲ್ಲಿ ಹಲವರಿಗೆ ಬ್ಯಾಡ್ಜ್ ಸಮಸ್ಯೆ ಇದ್ದು ಇದನ್ನು ನಿವಾರಿಸಬೇಕು. ಪೆಟ್ರೋಲ್ ಸಬ್ಸಿಡಿಯಲ್ಲಿ ಸಿಗಬೇಕು ಎಂದು ಗೋಪಾಲಕೃಷ್ಣ ಹೇಳಿದರು.
ನಳಿನ್ ಕುಮಾರ್ ಕಟೀಲು ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಗೆ ಭೇಟಿ ನೀಡಿ ಮತಯಾಚಿಸಿದರು. ಆಲೆಟ್ಟಿ ಬಾರ್ಪಣೆ ಯುವಕ ಮಂಡಲದ ವಠಾರ ದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿದರು. ಅರಂತೋಡು-ತೊಡಿಕಾನದಲ್ಲಿ ಕಾರ್ಯಕರ್ತರ ಸಭೆ, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಐವರ್ನಾಡು, ಅಜ್ಜಾವರ ಮಂಡೆಕೋಲು, ಜಾಲ್ಸೂರು- ಕನಕಮಜಲಿನ ಸಭೆಯಲ್ಲಿ ಪಾಲ್ಗೊಂಡರು.