Advertisement

ಕರ್ನಾಟಕ ಚುನಾವಣೆ ಸಿದ್ಧಾಂತಗಳ ಯುದ್ಧ : ಮೀರಾ ಕುಮಾರ್‌

07:45 AM May 07, 2018 | |

ಬೆಂಗಳೂರು: ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು 224 ಕ್ಷೇತ್ರಗಳ ವಿಧಾನಸಭೆ ಚುನಾವಣೆ ಮಾತ್ರವಲ್ಲ, ಇದು ಸಿದ್ಧಾಂತಗಳ ನಡುವಿನ ಸಮರವೂ ಹೌದು ಎಂದು ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಹೇಳಿದ್ದಾರೆ.

Advertisement

ದ್ವೇಷದ ಮೂಲಕ ದೇಶ ಒಡೆಯುತ್ತಿರುವ ಶಕ್ತಿಗಳು ಮತ್ತು ಕೋಮುಶಕ್ತಿಗಳ ವಿರುದ್ಧದ ಚುನಾವಣೆ ಇದಾಗಿದೆ. ಜಾತಿ, ಧರ್ಮದ ಮೂಲಕ ಜನರನ್ನು ಒಡೆಯುವವರು ಅಧಿಕಾರಕ್ಕೆ ಬರಬಾರದು. ಕರ್ನಾಟಕದ ಚುನಾವಣೆಯಲ್ಲಿ ಮತದಾರರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ದೇಶದ ಜನ ಗಮನಿಸುತ್ತಿದ್ದಾರೆ ಎಂದರು.

ಭಾರತ ಜಾತ್ಯತೀತ ರಾಷ್ಟ. ಇಲ್ಲಿ ಹಲವು ಜಾತಿ, ಉಪಜಾತಿಗಳಿವೆ. ಆದರೆ ಕೆಲವು ಶಕ್ತಿಗಳು ಸಮಾಜ ಬದಲಾಯಿಸಲು ಹೊರಟಿವೆ. ನಮಗೆ ಚುನಾವಣೆ ಮುಖ್ಯವಲ್ಲ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಮುಖ್ಯ. ಸಮಾಜ ರಕ್ಷಿಸುವವರಿಗೆ ಮತದಾರರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ದಲಿತರ ಮೇಲಿನ ದೌರ್ಜನ್ಯ ತಡೆಗೆ ಜಾತಿ ನಿಂದನೆ ಕಾಯಿದೆ ಬದಲಿಸಲು ಹೊರಟಿದೆ. “ಬೇಟಿ ಬಚಾವೊ-ಬೇಟಿ ಪಡಾವೋ’ ಎನ್ನುತ್ತಿದ್ದಾರೆ. ಆದರೆ ದೇಶದಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ ಇದೆಯೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next