Advertisement

Jagadish Shettar; ಬೆಳಗಾವಿಯ ಬಾಡಿಗೆ ಮನೆ ಖಾಲಿ ಮಾಡಿದ ಸಂಸದ ಶೆಟ್ಟರ್‌

10:04 PM Aug 13, 2024 | Team Udayavani |

ಬೆಳಗಾವಿ: ಸಂಸತ್‌ ಚುನಾವಣೆ ವೇಳೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆ ಜಗದೀಶ ಶೆಟ್ಟರ್‌ ಅವರು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ಬಾಡಿಗೆ ಪಡೆದಿದ್ದ ಮನೆ ಈಗ ಖಾಲಿ ಮಾಡಿದ್ದಾರೆ.

Advertisement

ಈ ಮನೆಯನ್ನು ಮಾಲೀಕ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ. ಚುನಾವಣಾ ಸಮಯದಲ್ಲಿ ಶೆಟ್ಟರ್‌, ಕುಟುಂಬ ಸಮೇತರಾಗಿ ಇದೇ ಮನೆಯಲ್ಲಿ ವಾಸವಾಗಿದ್ದರು.

ಆದರೆ, ಈಗ ಮನೆ ಖಾಲಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶೆಟ್ಟರ್‌, ಬೆಳಗಾವಿಯಲ್ಲಿ ಸ್ವಂತ ಜಾಗ ಖರೀದಿ ಮಾಡುತ್ತಿದ್ದೇವೆ. ಮನೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next