Advertisement

Channapatna ಆಸ್ಪತ್ರೆಯಲ್ಲಿ ಸ್ಟೆತೊಸ್ಕೋಪ್‌ ಹಿಡಿದ ಸಂಸದ ಡಾ| ಮಂಜುನಾಥ್‌

12:53 AM Jun 16, 2024 | Team Udayavani |

ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ನೂತನ ಸಂಸದ ಡಾ| ಸಿ.ಎನ್‌.ಮಂಜುನಾಥ್‌ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ದಿಢೀರ್‌ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.

Advertisement

ಸಂಸದರಾದ ಬಳಿಕ ಮೊದಲ ಬಾರಿಗೆ ಚನ್ನಪಟ್ಟಣಕ್ಕೆ ಆಗಮಿಸಿದ್ದ ಡಾ| ಮಂಜುನಾಥ್‌ ಅವರು ಸರಕಾರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಒಳ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಜತೆಗೆ ಸ್ವತಃ ತಾವೇ ಸ್ಟೆತೊಸ್ಕೋಪ್‌ ಹಾಕಿಕೊಂಡು ರೋಗಿಗಳ ನಾಡಿ ಮಿಡಿತ ಹಿಡಿದು ಪರೀಕ್ಷೆ ಮಾಡಿದರು.

ಮೇಲ್ದರ್ಜೆಗೇರಿಸಲು ಪ್ರಯತ್ನ
ಹಾಲಿ ಇರುವ ಆಸ್ಪತ್ರೆಯನ್ನು ಮತ್ತಷ್ಟು ಉತ್ತಮ ದರ್ಜೆಗೇರಿಸಿ, ಆಧುನಿಕ ಸುಸಜ್ಜಿತ ಆಸ್ಪತ್ರೆಯಾಗಿ ಪರಿವರ್ತಿಸಲು ರಾಜ್ಯ ಹಾಗೂ ಕೇಂದ್ರ ಸರಕಾರದೊಡನೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next