Advertisement

Manipal ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಾನವ ಎದೆಹಾಲು ನಿಧಿ ಉದ್ಘಾಟನೆ

11:51 PM Jun 11, 2024 | Team Udayavani |

ಮಣಿಪಾಲ: ಉಡುಪಿಯ ಮೊದಲ ಮಾನವ ಎದೆಹಾಲು ನಿಧಿ (ಹ್ಯೂಮನ್‌ ಬ್ರೆಸ್ಟ್‌ ಮಿಲ್ಕ್ ಬ್ಯಾಂಕ್‌) “ಮಣಿಪಾಲ ಮಾತೃ-ಅಮೃತ್‌ ಮಿಲ್ಕ್ ಬ್ಯಾಂಕ್‌’ ಅನ್ನು ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌. ಉದ್ಘಾಟಿಸಿದರು.

Advertisement

ತಾಯಿಯ ಎದೆ ಹಾಲು ಶಿಶುಗಳಿಗೆ ಅಮೃತ -ಔಷಧವಿದ್ದಂತೆ. ನವಜಾತ ಶಿಶುಗಳು ತಮ್ಮ ಆರಂಭಿಕ ದಿನಗಳಲ್ಲಿ ಎದೆಹಾಲನ್ನು ಪಡೆಯುವುದು ನಿರ್ಣಾಯಕವಾಗಿದೆ. ಇದು ಶಿಶುಗಳ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಐ.ಪಿ. ಗಡಾದ್‌, ನವಜಾತಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥೆ ಡಾ| ಶೀಲಾ ಎಸ್‌. ಮಥಾಯಿ ಉಪಸ್ಥಿತರಿದ್ದರು. ಮಣಿಪಾಲ ಕೆಎಂಸಿ ಡೀನ್‌ ಡಾ| ಪದ್ಮರಾಜ್‌ ಹೆಗ್ಡೆ ಸ್ವಾಗತಿಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ವಂದಿಸಿದರು. ಡಾ| ಶ್ರುತಿ ಕೆ.ಭಾರದ್ವಾಜ್‌ ನಿರೂಪಿಸಿದರು.

ಮಿಲ್ಕ್ ಬ್ಯಾಂಕ್‌ ಜಿಲ್ಲೆಯಲ್ಲಿಯೇ ಮೊದಲನೆಯದ್ದು. ಇದು ಮಣಿಪಾಲದ ನವಜಾತಶಾಸ್ತ್ರ ವಿಭಾಗದಲ್ಲಿದ್ದು ನವಜಾತ ಶಿಶುಗಳಿಗೆ ತೀವ್ರ ನಿಗಾ ಘಟಕದ ಮೂಲಕ ಚಿಕಿತ್ಸೆ ನೀಡುತ್ತಿದೆ. ಹಲವಾರು ರಾಜ್ಯ, ಜಿಲ್ಲೆಗಳ ಅನಾರೋಗ್ಯ ಮತ್ತು ಪ್ರಸವಪೂರ್ವ ಶಿಶುಗಳಿಗೆ ಆರೈಕೆ ಪೂರೈಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next