ಭೋಪಾಲ್: ಇತಿಹಾಸದಲ್ಲೇ ಮೊದಲ ಬಾರಿಗೆ ಮಧ್ಯ ಪ್ರದೇಶ ಸರ್ಕಾರ ಪೇಪರು ರಹಿತ ಬಜೆಟ್ ಮಂಡಿಸಲಿದೆ. ಸೋಮವಾರದಿಂದ ಮಧ್ಯ ಪ್ರದೇಶ ಅಧಿವೇಶನ ಪ್ರಾರಂಭವಾಗಲಿದ್ದು ಮಾರ್ಚ್ 1 ರಂದು ರಾಜ್ಯ ವಿತ್ತ ಸಚಿವ ಜಗದೀಶ್ ದೇವ್ರ ಪೇಪರ್‌ಲೆಸ್ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್‌ನ ಒಂದು ಪ್ರತಿಯನ್ನು ಮಾತ್ರ ಸದನದಲ್ಲಿ ಇಡಲಿದ್ದು ಉಳಿದಂತೆ ಎಲ್ಲಾ ಶಾಸಕರಿಗೂ ಟ್ಯಾಬ್ ನೀಡಿ ಅದರಲ್ಲೇ ಬಜೆಟ್ ಪ್ರತಿ ಓದಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಎಲ್ಲಾ ಶಾಸಕರಿಗೂ ಬಜೆಟ್ ಪ್ರತಿಯನ್ನು ಟ್ಯಾಬ್‌ನಲ್ಲಿ ಹೇಗೆ ಓದುವುದು ಎಂಬುದರ ಬಗ್ಗೆ ಈಗಾಗಲೇ ಅಧಿಕಾರಿಗಳು ತರಬೇತಿ ನೀಡಿದ್ದಾರೆ. ಅಲ್ಲದೆ ಅಧಿಕಾರಿಗಳಿಗೆ ಮತ್ತು ಪತ್ರಕರ್ತರಿಗೆ ಬಜೆಟ್ ಪ್ರತಿ ಇರುವ ಪೆನ್‌ಡ್ರೈವ್ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮಧ್ಯ ಪ್ರದೇಶ ರಾಜ್ಯಪಾಲ ಮಂಗೂಭಾಯಿ ಪಟೇಲ್ ಸದನದಲ್ಲಿ ಭಾಷಣ ಮಾಡಿದ್ದಾರೆ.
ಇದನ್ನೂ ಓದಿ:
ಹತ್ಯೆ ಕೇಸ್ ಆರೋಪಿಯನ್ನು ಎನ್ ಕೌಂಟರ್ ಮಾಡಿದ ಉತ್ತರಪ್ರದೇಶ ಪೊಲೀಸರು