Advertisement
ಮಾ. 2ರಂದು ಸಂಜೆ ಬೊರಿವಲಿ ಪಶ್ಚಿಮದ ಪುಷ್ಪಾಂಜಲಿ ಗಾರ್ಡನ್‌ನಲ್ಲಿ ಸಂಸದ ಗೋಪಾಲ್ ಶೆಟ್ಟಿ ಅವರ ತುಳು-ಕನ್ನಡಿಗರ ಅಭಿಮಾನಿ ಬಳಗವು ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಸಾರಥ್ಯ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಗೋಪಾಲ್ ಶೆಟ್ಟಿ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಸಂಸದ ಗೋಪಾಲ್ ಸಿ. ಶೆಟ್ಟಿ ದಂಪತಿಯನ್ನು ಸಮ್ಮಾನಿಸಿ ಅಭಿನಂದಿಸಿ ಮಾತನಾಡಿದ ಅವರು, ಇದೊಂದು ಅಪೂರ್ವ ಸಮಾರಂಭವಾಗಿದ್ದು, ಗೋಪಾಲ್ ಶೆಟ್ಟಿ ಅವರು ಭವಿಷ್ಯದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಸ್ಥಾನಕ್ಕೆ ಏರಲಿ ಎಂದು ಶುಭಹಾರೈಸಿದರು.
Related Articles
Advertisement
ಗೋಪಾಲ್ ಶೆಟ್ಟಿ ಅವರ ಮಾತೃಶ್ರೀ ಗುಲಾಬಿ ಸಿ. ಶೆಟ್ಟಿ, ಮಕ್ಕಳಾದ ರಾಕೇಶ್ ಜಿ. ಶೆಟ್ಟಿ, ಐಶ್ವರ್ಯಾ ಆರ್. ಶೆಟ್ಟಿ, ಜ್ಯೋತಿ ಎಸ್. ಶೆಟ್ಟಿ, ಸುದರ್ಶನ್ ಶೆಟ್ಟಿ, ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಇದರ ಗೌರವಾಧ್ಯಕ್ಷ ಡಾ| ಶಂಕರ್ ಬಿ. ಶೆಟ್ಟಿ ವಿರಾರ್, ಸುರೇಶ್ ಶೆಟ್ಟಿ ಗುರ್ಮೆ, ಕೆ. ರಘುರಾಮ ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ, ಸಂಘಟಕರಾದ ರವೀಂದ್ರ ಎಸ್. ಶೆಟ್ಟಿ, ಭಾಸ್ಕರ ಎಂ. ಸಾಲ್ಯಾನ್, ಗಂಗಾಧರ ಜೆ. ಪೂಜಾರಿ, ರಜಿತ್ ಎಂ. ಸುವರ್ಣ, ಮಂಜುನಾಥ್ ಬನ್ನೂರು, ಪ್ರವೀಣ್ ಎ. ಶೆಟ್ಟಿ ಶಿಮಂತೂರು, ಪ್ರಕಾಶ್ ಎ. ಶೆಟ್ಟಿ, ವಿಜಯಕುಮಾರ್ ಶೆಟ್ಟಿ ತೋನ್ಸೆ, ಎಂ. ಕೃಷ್ಣ ಶೆಟ್ಟಿ ಚಾರ್‌ಕೋಪ್, ದಿವಾಕರ ಶೆಟ್ಟಿ ಅಡ್ಯಾರ್, ವೇಣುಗೋಪಾಲ್ ಶೆಟ್ಟಿ ಸೇರಿದಂತೆ ಸಾವಿರಾರು ತುಳು ಕನ್ನಡಿಗರು ಭಾಗವಹಿಸಿದ್ದು, ಮಹಾನಗರದಲ್ಲಿನ ಹೊಟೇಲ್ ಉದ್ಯಮಿಗಳು, ನೂರಾರು ತುಳು ಕನ್ನಡಿಗ ಸಂಘ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡು ಸಂಸದರಿಗೆ ಪುಷ್ಪಗುತ್ಛವನ್ನಿತ್ತು ಅಭಿನಂದನೆ ಸಲ್ಲಿಸಿ ಶುಭಹಾರೈಸಿದರು.
ಬ್ರಾಹ್ಮಣ ಪುರೋಹಿತರ ವೇದಘೋಷದೊಂದಿಗೆ ಸಮಾರಂಭ ಪ್ರಾರಂಭಗೊಂಡಿತು. ಬ್ರಹ್ಮಕುಮಾರಿ ನೀತಾ ಅನುಗ್ರಹಿಸಿದರು. ಪುಲ್ವಾಮಾ ವಿಧ್ವಂಸಕ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಮೇಣದ ಬತ್ತಿಯನ್ನು ಹಚ್ಚಿಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಸಾಕ್ಷ್ಯಚಿತ್ರ ಪ್ರದರ್ಶನದ ಮೂಲಕ ಗೋಪಾಲ ಶೆಟ್ಟಿ ಅವರ ಸುಮಾರು ಮೂರು ದಶಕಗಳ ರಾಜಕೀಯ ನಡೆಯ ಸಿಂಹಾವಲೋಕನದ ನಡೆಯಿತು. ಕಾರ್ಯಕ್ರಮದ ಪ್ರಧಾನ ಸಂಯೋಜಕ ಎರ್ಮಾಳ್ ಹರೀಶ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಪಕ್ಕಳ, ಅಮೃತಾ ಶೆಟ್ಟಿ, ರಘುನಾಥ್ ಎನ್. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ಶೆಟ್ಟಿ ಪೊಯಿಸರ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಗಮ್ ಉಪಾಧ್ಯಾಯ ನಿರ್ದೇಶನದಲ್ಲಿ ಸಂಗಮ್ ಸ್ವರ್ ಮುಂಬಯಿ ತಂಡದಿಂದ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು.
ಸ್ಥಳೀಯ ಡೊನ್‌ಬೊಸ್ಕೊ ಸರ್ಕಲ್‌ನಿಂದ ಭವ್ಯ ಮೆರವಣಿಗೆಯಲ್ಲಿ ಚೆಂಡೆ, ವಾದ್ಯ, ಬ್ಯಾಂಡುಗಳ ನಿನಾದದಲ್ಲಿ ಸಾಂಸ್ಕೃತಿಕ ವೈಭವದೊಂದಿಗೆ, ಶ್ವೇತ-ಅಶ್ವಗಳ ರಥದ ಚ್ಯಾರಿಯಟ್‌ನಲ್ಲಿ ಕೂರಲು ನಿರಾಕರಿಸಿದ ಸಂಸದ ಗೋಪಾಲ್ ಶೆಟ್ಟಿ, ಮಾತೆ ಭಾರತಾಂಬೆ ಮತ್ತು ಪಾಕಿಸ್ಥಾನದಿಂದ ಮುಕ್ತನಾದ ರಾಷ್ಟ್ರದ ಯೋಧ ಅಭಿನಂದನ್ ವರ್ಧಮಾನ್ ಅವರ ಭಾವಚಿತ್ರಗಳನ್ನು ರಥದಲ್ಲಿರಿಸಿ ಜನಸ್ತೋಮದ ಮಧ್ಯ ನಡಿಗೆಯಲ್ಲೇ ಸಾಗಿದ ಗೋಪಾಲ್ ಶೆಟ್ಟಿ ಅವರನ್ನು ಸಾಂಪ್ರದಾಯಿಕವಾಗಿ ಮೈದಾನಕ್ಕೆ ಬರಮಾಡಿಕೊಳ್ಳಲಾಯಿತು.
ನನಗೆ ಪ್ರತಿಯೊಂದು ಕೆಲಸವು ತ್ವರಿತವಾಗಿ ಆಗಬೇಕು. ನೋಡಿದವರಿಗೆ ಒಳ್ಳೆಯದಾಗಿ ಕಾಣಬೇಕು. ಯಾವುದೇ ಕಾರ್ಯಕ್ರಮ ಕನಿಷ್ಠಾವಧಿಯಲ್ಲಿ ಚಿಕ್ಕ ಮತ್ತು ಚೊಕ್ಕವಾಗಿ ನಡೆದರೇನೇ ಚೆಂದ. ಇಲ್ಲವಾದರೆ ಅಂದ ಕೆಡುತ್ತ¤ದೆ. ನಾನು ರಾಜಕೀಯಕ್ಕೆ ಬಂದದ್ದು ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲೇ ಹೊರತು ಹುದ್ದೆಗಳನ್ನು ಅಲಂಕರಿಸಲು ಅಲ್ಲ. ಕಾರಣ ನಾನೋರ್ವ ಸೌಲಭ್ಯ ವಂಚಿತನಾಗಿದ್ದು ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ಕಚೇರಿಗೆ ಹೋಗಿದ್ದೆ. ಅಲ್ಲಿ ನನ್ನ ಮಾತನಾಡುವ ಪರಿ, ಹಾವ ಭಾವ, ಸಂಭಾಷಣೆ ತಿಳಿದ ಧುರೀಣರು ನನ್ನನ್ನೇ ರಾಜಕೀಯದತ್ತ ಸೆಳೆದರು. ಹಾಗೇ ರಾಜಕೀಯಕ್ಕೆ ಬಂದ ನಾನು ನಗರ ಸೇವಕನಾಗಿ, ಶಾಸಕನಾಗಿ, ಸಂಸದನಾಗಿ ಬೆಳೆದೆ. ಈಗ ಎಲ್ಲರೂ ನನಗೆ ಸಚಿವರಾಗಲು ಹೇಳುತ್ತಾರೆ ಆದರೆ ನನಗೆ ಮಂತ್ರಿ ಪದವಿಯಲ್ಲಿ ಆಸೆಯಿಲ್ಲ. ಮತ್ತೂಮ್ಮೆ ಸಂಸದನಾಗುವ ಅವಕಾಶ ದೊರೆತರೆ ಅದನ್ನು ಸ್ವೀಕರಿಸುತ್ತಾ ಜನ ಸಾಮಾನ್ಯರ ಸೇವೆ ಮಾಡುತ್ತೇನೆ. ಇದರಲ್ಲೇ ನನಗೆ ತುಂಬಾ ಖುಷಿ ದೊರಕುತ್ತದೆ. ಸಾಮಾನ್ಯ ಮನೆತನದ ನನ್ನನ್ನು ಗಲ್ಲಿಯಿಂದ ಡೆಲ್ಲಿಯವರೆಗೆ ಮುನ್ನಡೆಸಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಕಾರ್ಯಕ್ರಮವನ್ನು ಆಯೋಜಿಸಿದ ಎರ್ಮಾಳ್ ಹರೀಶ್ ಶೆಟ್ಟಿ ಮತ್ತು ಸಂಘಟಕರಿಗೆ, ತುಳು ಕನ್ನಡಿಗರಿಗೆ ನಾನು ಸದಾ ಆಭಾರಿಯಾಗಿರುವೆ– ಸಂಸದ ಗೋಪಾಲ್ ಸಿ. ಶೆಟ್ಟಿ,
ಸಮ್ಮಾನಿತರು ಚಿತ್ರ-ವರದಿ: ರೋನ್ಸ್ ಬಂಟ್ವಾಳ್