Advertisement

ಬಾಯಿಗೆ ಆ್ಯಸಿಡ್‌ ಸುರಿದು ಬೀದಿ ನಾಯಿಗಳ ಕೊಂದ ದುಷ್ಟರು : ಆರೋಪಿಗಳ ವಿರುದ್ಧ ಪ್ರಕರಣ ದಾಖಲು

08:14 PM Sep 04, 2021 | Team Udayavani |

ಭೋಪಾಲ್‌ : ಬೀದಿ ನಾಯಿಗಳ ಬಾಯಿಗೆ ಆ್ಯಸಿಡ್‌ ಸುರಿಯುವ ಮೂಲಕ ಐದು ನಾಯಿಗಳನ್ನು ಕೊಂದಿರುವ ಘಟನೆ ಮಧ್ಯ ಪ್ರದೇಶದ ಉಜೈನ್ ನಲ್ಲಿ ನಡೆದಿದೆ.

Advertisement

ನಾಘ್ಜಿರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಾಯಿಗಳ ನರನಾಟ ನೋಡಿದ ಜನರು ಅವುಗಳನ್ನು ಪಶು  ಆಸ್ಪತ್ರೆಗೆ ದಾಖಲಿಸಿದಾರೂ ಚಿಕಿತ್ಸೆ ಫ‌ಲಕಾರಿಯಾಗದೇ ಅವು ಸಾವನ್ನಪ್ಪಿವೆ.

ಈ ವಿಚಾರವಾಗಿ “ಪೀಪಲ್‌ ಆರ್‌ ಅನಿಮಲ್ಸ್‌’ ಎಂಬ ಸಂಘಟನೆಯ ಸದಸ್ಯರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆಕ್ಷನ್‌ 428 (ಪ್ರಾಣಿಗಳ ಜತೆ ಅಸಭ್ಯ ವರ್ತನೆ) ಮತ್ತು ಕೆಲವು ಐಪಿಎಸ್‌ ಸೆಕ್ಷನ್‌ ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬಂಟ್ವಾಳ: ಆಟ ಆಡುವ ವೇಳೆ ಕಾಲು ಜಾರಿ ಕೋರೆ ಗುಂಡಿಗೆ ಬಿದ್ದು ಬಾಲಕ ಸಾವು

Advertisement

Udayavani is now on Telegram. Click here to join our channel and stay updated with the latest news.

Next