ಧರ್ (ಮಧ್ಯಪ್ರದೇಶ) : ಅನಿವಾರ್ಯತೆ ಆದಾಗ ಪರಿಸ್ಥಿತಿಗೆ ತಕ್ಕಂತೆ ನಾವುಗಳು ಹೊಂದಿಕೊಂಡು ಹೋಗಬೇಕು ಎನ್ನುವುದಕ್ಕೆ ಮಧ್ಯ ಪ್ರದೇಶದ ಧರ್ ಪ್ರದೇಶದ ಈ ಇಂಜಿನಿಯ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಕಷ್ಟ ಕಾಲದಲ್ಲಿ ತಮ್ಮ ಜ್ಞಾನ ಮತ್ತು ಸೃಜನಾತ್ಮಕತೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ತೋರಿಸಿಕೊಟ್ಟಿದ್ದಾರೆ.
ಸದ್ಯ ಕೋವಿಡ್ ಸೋಂಕಿತರು ಆಸ್ಪತ್ರೆಗೆ ಹೋಗಬೇಕಾದಾಗ ಆ್ಯಂಬುಲೆನ್ಸ್ ಕೊರತೆಯನ್ನು ಹೆದರಿಸುತ್ತಿದ್ದಾರೆ. ಇದೇ ಕಾರಣಕ್ಕೆ ತಮ್ಮಲ್ಲಿರುವ ಗಾಡಿಗಳನ್ನೇ ಆ್ಯಂಬುಲೆನ್ಸ್ ರೀತಿ ಮಾಡಿಕೊಂಡು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡಿದ್ದಾರೆ.
ಮಧ್ಯಪ್ರದೇಶದ ಯುವ ಇಂಜಿನಿಯರ್ ಒಬ್ಬರು ತಮ್ಮ ದ್ವಿಚಕ್ರವಾಹನವನ್ನು ಮಾರ್ಪಾಡು ಮಾಡಿ ಆ್ಯಂಬುಲೆನ್ಸ್ ರೀತಿ ತಯಾರು ಮಾಡಿದ್ದಾರೆ. ಹಳೆದ ಬಿಡಿ ಭಾಗಗಳನ್ನು ಬಳಕೆ ಮಾಡಿಕೊಂಡು ಈ ರೀತಿಯ ಮಿನಿ ಆ್ಯಂಬುಲೆನ್ಸ್ ಅನ್ನು ತಯಾರಿ ಮಾಡಿದ್ದಾರೆ.
ಕೇವಲ 20-25,000 ರೂ.ಗಳೊಂದಿಗೆ ಆ್ಯಂಬುಲೆನ್ಸ್ ಅನ್ನು ತಯಾರಿ ಮಾಡಿ ಅದರಲ್ಲಿ ಆಮ್ಲಜನಕ ಸಿಲಿಂಡರ್ ಮತ್ತು ರೋಗಿಗಳಿಗೆ ಅಗತ್ಯವಾದ ಔಷಧಿಯನ್ನು ಅಳವಡಿಸಲಾಗಿದೆ. ರೋಗಿಯ ಹೊರತಾಗಿಯೂ ಇಬ್ಬರು ಈ ಮಿನಿ ಆಂಬುಲೆನ್ಸ್ ನಲ್ಲಿ ಆರಾಮವಾಗಿ ಕುಳಿತುಕೊಳ್ಳಬಹುದು ಎಂದು ಎಂಜಿನಿಯರ್ ಹೇಳಿದ್ದಾರೆ.
ಕಳೆದ ದಿನಗಳಲ್ಲಿ ಸುದ್ದಿಯೊಂದು ಹರಿದಾಡಿದ್ದು, ಕೇವಲ ಮೂರು ಕಿ.ಮೀ ಕರೆದೊಯ್ಯಲು ಆ್ಯಂಬುಲೆನ್ಸ್ ನಲ್ಲಿ 10,000 ಬಾಡಿಗೆ ಕೇಳಲಾಗಿದೆ. ಇದರಿಂದ ಬೇಸರಗೊಂಡ ಇಂಜಿನಿಯರ್ ಈ ರೀತಿ ಗಾಡಿಯನ್ನು ಸಿದ್ಧ ಮಾಡಿದ್ದಾರೆ. ಅಲ್ಲದೆ ಸ್ಥಳೀಯರಿಂದ ಮೆಚ್ಚಗೆ ಪಡೆದಿದ್ದಾರೆ.