ಮರಳವಾಡಿ: ತಂದೆ, ತಾತ, ಮಗ, ಹೆಂಡತಿ ಎಲ್ಲರಿಗೂ ಮತ ಕೊಟ್ಟಿದ್ದಿರೀ. ಈ ಬಾರಿ ಬದಲಾವಣೆ ತನ್ನಿ ಎಂದು ಸಂಸದ ಡಿ.ಕೆ.ಸುರೇಶ್ ಪರೋಕ್ಷವಾಗಿ ಜೆಡಿಎಸ್‌ಗೆ ಮತ ಕೊಟ್ಟಿದ್ದು ಸಾಕು ಕಾಂಗ್ರೆಸ್ ಮತ ಕೊಡಿ ಎಂದು ಕರೆ ನೀಡಿದರು.
ತಾಲೂಕಿನ ಮರಳವಾಡಿಯ ಹನುಮಂತಪುರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರಿಗೂ ಮತದಾತ ಮಾಡಿದ್ದಿರಿ ಅದನ್ನು ಗಮನದಲ್ಲಿಟ್ಟುಕೊಂಡು ಬಾರಿ ಬದಲಾವಣೆ ತರಬೇಕು. ಹಾರೋಹಳ್ಳಿ ಮತ್ತು ಮರಳವಾಡಿ ಕಾರ್ಯಕರ್ತರು ಮುಖಂಡರ ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ ನೀವೆಲ್ಲರೂ ಸಹ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಇನ್ನು 38 ದಿನಗಳ ಕಾಲ ಹಗಲು ರಾತ್ರಿ ಕೆಲಸ ಮಾಡಿದರೆ ಮುಂದಿನ ಐದು ವರ್ಷಗಳ ಕಾಲ ನಿಮ್ಮ ಊರಿನ ಸೇವಕರಾಗಿ ಪ್ರಾಮಾಣಿಕವಾಗಿ ಜನರ ಬದುಕನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಮುಖಂಡ ಕೀರಣ ಗೆರೆ ಜಗದೀಶ್, ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಈಶ್ವರ್, ವೆಂಕಟೇಶ್, ಸ್ವಾಮಿ, ಶಿವ, ರಾಜೇಶ್, ಕುಮಾರ್, ಸಿದ್ದೇಶ್, ಪ್ರಶಾಂತ್, ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಿ : ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟುಕೊಂಡು ಸಾಕಷ್ಟು ಜನ ಸೇರ್ಪಡೆಗೊಂಡಿದ್ದಾರೆ. ಅವರೆಲ್ಲರ ಕಷ್ಟ ಸುಖ ಗಳನ್ನು ಆಲಿಸಿ ಹಳಬರು ಹೊಸಬರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ಎಲ್ಲರನ್ನೂ ಗೌರವದಿಂದ ಕಾಣಬೇಕು. ಸ್ಥಳೀಯವಾಗಿ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತನ್ನಿ, ನಾವು ಎಲ್ಲವನ್ನು ಸರಿಪಡಿಸುತ್ತೇವೆ. ಕಾರ್ಯಕರ್ತರು ಮುಖಂಡರು ಮನೆ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡುವ ಮೂಲಕ ಡಿ.ಕೆ. ಶಿವಕುಮಾರ್ ಅವರ ಕೈ ಬಲಪಡಿಸಿ ಈ ತಾಲೂಕು ಮತ್ತು ಜಿಲ್ಲೆಯ ಸ್ವಾಭಿಮಾನವನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ : ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೈರೇಗೌಡ, ವೆಂಕಟಪ್ಪ, ಮುತ್ತು, ಕಾಂತರಾಜು, ಗೋವಿಂದಯ್ಯ, ಮೋಟಪ್ಪ, ಕಿರಣ್, ಗೋಪಿ, ಸಂತೋಷ್, ದೇವರಾಜು, ಅಲಿಜಾನ್, ಬೈರ, ತ್ರಿಲೋಕಿ, ಟಿ.ವಿ.ಕುಮಾರ್, ವಜ್ರ ಮುನಯ್ಯ, ಶಿವರಾಜ್ ಅವರಿಗೆ ಸಂಸದ ಡಿ.ಕೆ. ಸುರೇಶ್ ಸಾಲು ಹೊದಿಸಿ ಬರಮಾಡಿಕೊಂಡರು.