Advertisement

ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ : ಸಂಸದ ಡಿ.ಕೆ.ಸುರೇಶ್ ಆರೋಪ

05:46 PM Oct 12, 2021 | Team Udayavani |

ಮಡಿಕೇರಿ: ರಾಷ್ಟ್ರದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಾ ಬಂದಿರುವ ರಾಷ್ಟ್ರೀಯ ಕಾಂಗ್ರೆಸ್‌ನ ಏಳು ದಶಕಗಳ ಆಡಳಿತದ ಅಭಿವೃದ್ಧಿ ಪರ ಕಾರ್ಯಗಳನ್ನು ಈಗಿನ ಬಿಜೆಪಿ ಸರ್ಕಾರ ಮಾರಾಟ ಮಾಡುವ ಮೂಲಕ ಬದುಕು ನಡೆಸುತ್ತಿದೆಯೆಂದು ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.

Advertisement

ನಗರದ ಕ್ರಿಸ್ಟಲ್ ಕೊರ್ಟ್ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಮಿಥುನ್ ಗೌಡ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಧಾನಮಂತ್ರಿಗಳಿಗೆ ಸುಳ್ಳುಗಳೇ ಮಾನದಂಡವಾಗಿದ್ದು, ಬಣ್ಣ ಬದಲಿಸುವ ಗೋಸುಂಬೆ ಮಾದರಿಯ ಆಡಳಿತ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣಗಳು, ಬಂದರುಗಳು, ಹೆದ್ದಾರಿಗಳು, ಜೀವವಿಮಾ ಕಂಪೆನಿಗಳನ್ನು ಇಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾರಾಟ ಮಾಡಲು ಹೊರಟಿದೆ. ಏಳು ದಶಕಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ದ ಪರಿಣಾಮವಾಗಿ ಇಂದು ಭಾರತ ವಿಶ್ವದಲ್ಲಿಯೇ 3 ನೇ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿಗಣಿಸಲ್ಪಟ್ಟಿದೆ ಹೊರತು 7 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನನ್ನೂ ಮಾಡಿಲ್ಲವೆಂದು ಆರೋಪಿಸಿದರು.

ಆತ್ಮನಿರ್ಭರ ಭಾರತ ಹೆಸರಿನ ಯೋಜನೆ ಸುಳ್ಳಿನ ಕಂತೆಯಾಗಿದ್ದು, ಘೋಷಣೆಯಾದ 22 ಸಾವಿರ ಕೋಟಿ ರೂ.ಗಳಲ್ಲಿ 22 ಪೈಸೆ ಕೂಡ ಬಿಡುಗಡೆಯಾಗಿಲ್ಲವೆಂದು ವ್ಯಂಗ್ಯವಾಡಿದರು.

Advertisement

ಕೊಡಗಿನ ಸಮಸ್ಯೆಗಳಿಗೆ ಸ್ಪಂದಿಸಿಲ್ಲ:

ಆತ್ಮನಿರ್ಭರದ ಬಗ್ಗೆ ಮಾತನಾಡುವ ಸರ್ಕಾರ ಸಂಕಷ್ಟದಲ್ಲಿರುವ ಕಾಫಿ ಕ್ಷೇತ್ರವನ್ನು ಈ ಯೋಜನೆಯ ವ್ಯಾಪ್ತಿಗೆ ಯಾಕೆ ತರಲಿಲ್ಲ ಎಂದು ಪ್ರಶ್ನಿಸಿದ ಅವರು, ನಿರಂತರವಾಗಿ ಬಿಜೆಪಿಯನ್ನೇ ಗೆಲ್ಲಿಸುತ್ತಾ ಬರುತ್ತಿದ್ದರೂ ಕೊಡಗಿನ ಸಮಸ್ಯೆಗಳಿಗೆ ಸ್ಥಳೀಯ ಹಾಗೂ ಕೇಂದ್ರದ ಮುಖಂಡರುಗಳು ಸ್ಪಂದಿಸಿಲ್ಲವೆAದು ಟೀಕಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇದ್ದರೂ ಕೊಡಗಿನ ಸಂಕಷ್ಟಗಳಿಗೆ ಕಾರಣವಾಗುತ್ತಿರುವ ಡಾ.ಕಸ್ತೂರಿ ರಂಗನ್ ವರದಿಯ ಬಗ್ಗೆ ಮೌನಕ್ಕೆ ಶರಣಾಗಿರುವುದು ಯಾಕೆ ಎಂದು ಜಿಲ್ಲೆಯ ಜನ ಜನಪ್ರತಿನಿಧಿಗಳ ಬಳಿ ಪ್ರಶ್ನಿಸಬೇಕು ಎಂದು ಡಿ.ಕೆ.ಸುರೇಶ್ ತಿಳಿಸಿದರು.

ಕಾಂಗ್ರ್ರೆಸ್ ನ್ನು ಸೋಲಿಸಲು ಸಾಧ್ಯವಿಲ್ಲ:

ಕಾಂಗ್ರೆಸ್ ಪಕ್ಷವನ್ನು ಇತರರಿಂದ ಸೋಲಿಸಲು ಎಂದಿಗೂ ಸಾಧ್ಯವಿಲ್ಲ. ಪಕ್ಷದ ನಾಯಕರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾರ್ಯಕರ್ತರ ಭಾವನೆಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸುವ ಮೂಲಕ ಕಾಂಗ್ರೆಸ್ ನ್ನು ಗೆಲ್ಲಿಸಿ. 2023 ರಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆೆಯ ಎರಡು ಸ್ಥಾನಗಳಲ್ಲು ಕಾಂಗ್ರೆಸ್ ಗೆ ಗೆಲುವು ತಂದುಕೊಡುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ಸಿಗರು ಶ್ರಮಿಸಬೇಕೆಂದರು.

ಸುಳ್ಳುಗಳನ್ನು ನಂಬಬೇಡಿ:

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ವೈಫಲ್ಯಗಳನ್ನು ಮರೆ ಮಾಚಲು ಆತ್ಮನಿರ್ಭರ್, ಸರ್ಜಿಕಲ್ ಸ್ಟ್ರೈಕ್ ಮೊದಲಾದ ಸುಳ್ಳುಗಳನ್ನು ಹೇಳುತ್ತಾ ಬರುತ್ತಿದೆ. ಇದನ್ನು ಜನತೆ ನಂಬಬಾರದೆAದು ಕರೆ ನೀಡಿದರು.

ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸ್ವಾತಂತ್ರ್ಯ ನಂತರ ಭಾರತ ಜಾತ್ಯತೀತ ನಿಲುವನ್ನು ತಳೆಯುವ ಮೂಲಕ ಅಭಿವೃದ್ಧಿ ಪಥದಲ್ಲಿ ಮುನ್ನಡೆಯನ್ನು ಸಾಧಿಸಿತು, ಮತೀಯ ಆಧಾರಿತ ಆಡಳಿತದಿಂದ ಪಾಕಿಸ್ತಾನ ಅಧೋಗತಿಯನ್ನು ಕಾಣುತ್ತಿದೆ ಎಂದರು.

ಈಗಿನ ಬಿಜೆಪಿ ನೇತೃತ್ವದ ಸರ್ಕಾರ ಧರ್ಮ ಆಧಾರದ ರಾಜಕಾರಣ ಮಾಡುತ್ತಿರುವುದರಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುವಂತ್ತಾಗಿದೆ ಎಂದು ಟೀಕಿಸಿದರು.

ಪ್ರಸ್ತುತ ದೇಶದಲ್ಲಿ ಚುನಾಯಿತ ನಿರಂಕುಶ ಆಡಳಿತ ಇರುವುದಾಗಿ ಗಂಭೀರ ಆರೋಪ ಮಾಡಿದ ಅವರು, ಜನತೆ ಇದನ್ನು ಅರಿತು ಮುನ್ನಡೆಯುವ ಅಗತ್ಯವಿದೆ ಎಂದರು.

ಇದನ್ನೂ ಓದಿ: ಕುದ್ರೋಳಿಗೆ ಸಿಎಂ ಬೊಮ್ಮಾಯಿ ಭೇಟಿ; 3 – 7 ಗಂಟೆವರೆಗೆ ಭಕ್ತರ ಭೇಟಿಗೆ ಅವಕಾಶವಿಲ್ಲ

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಮಾತನಾಡಿ ಬಿಜೆಪಿ ನೇತೃತ್ವದ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವೈಫಲ್ಯತೆಯನ್ನು ಕಾಣುತ್ತಿದ್ದು, ನಿರುದ್ಯೋಗ ಸಮಸ್ಯೆ ಯುವ ಸಮೂಹವನ್ನು ಕಾಡುತ್ತಿದೆ ಎಂದು ತಿಳಿಸಿದರು.

ಅಧಿಕಾರ ಸ್ವೀಕಾರ:

ಕೊಡಗು ಜಿಲ್ಲಾ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಮಿಥುನ್ ಗೌಡ ನಾಯಕರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜಉತ್ತಪ್ಪ, ಕೆಪಿಸಿಸಿ ವಕ್ತಾರ ಎ.ಎಸ್.ಪೊನ್ನಣ್ಣ, ಹೆಚ್.ಎಸ್.ಚಂದ್ರಮೌಳಿ, ಕೆ.ಪಿ.ಚಂದ್ರಕಲಾ, ಟಿ.ಪಿ.ರಮೇಶ್, ಸುರಯ್ಯಾ ಅಬ್ರಾರ್ ಮೊದಲಾದವರು ಉಪಸ್ಥಿತರಿದ್ದರು

ಬಣ್ಣ ಬದಲಾಯಿಸುವ ಪ್ರಧಾನಿ : ಡಿಕೆಎಸ್ ಲೇವಡಿ

ಮಡಿಕೇರಿ: ಏನೋ ಮಾಡಿಬಿಡುತ್ತೇನೆಂದು ಹೊರಟ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿನಿತ್ಯ ಬಿಳಿ ಬಟ್ಟೆಯಿಂದ ಕೆಂಪು ಬಟ್ಟೆ… ಹೀಗೆ ಬಟ್ಟೆಯ ಬಣ್ಣ ಬದಲಾಯಿಸುತ್ತಿರುವುದನ್ನು ಬಿಟ್ಟರೆ ಮತ್ತೇನನ್ನು ಮಾಡಿಲ್ಲವೆಂದು ಸಂಸದ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ.

ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಸುಂಬೆ ಬಣ್ಣ ಬದಲಿಸುವಂತೆ ಮೋದಿ ಅವರು ತಮ್ಮ ಆಡಳಿತ ನಡೆಸುತ್ತಿದ್ದಾರೆ. ಜನ ಸಾಮಾನ್ಯರಿಗೆ, ಯುವ ಸಮೂಹಕ್ಕೆ, ಕೃಷಿಕರಿಗೆ ಉಪಯುಕ್ತವಾಗುವ ಒಂದೇ ಒಂದು ಕಾರ್ಯಕ್ರಮವನ್ನೂ ಅವರು ನೀಡಿಲ್ಲವೆಂದು ಟೀಕಿಸಿದರು. ಆತ್ಮನಿರ್ಭರ, ಸ್ವಚ್ಛ ಭಾರತ್ ಬಗ್ಗೆ ಮಾತನಾಡುವ ಮೋದಿ ಅದನ್ನು ಎಲ್ಲಿ ಸಾಧಿಸಿದ್ದಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನಕಲಿ ನೋಟು ಮುದ್ರಣ, ಭಯೋತ್ಪಾದನೆ…ಹಣಕ್ಕೆ ಬಾಯಿಬಿಡುವ ಸರ್ವಾಧಿಕಾರಿ ಕಿಮ್‌!

ಬೆಳೆದ ಬೆಳೆಗೆ ಸೂಕ್ತ ಧಾರಣೆ ಇಲ್ಲದೆ ಕೃಷಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಿದ್ದೂ ಬೆಳೆದ ಫಸಲಿಗೆ ಸೂಕ್ತ ಪ್ರೋತ್ಸಾಹ ಧನವಾಗಲಿ, ಬ್ಯಾಂಕ್ ನೆರವಾಗಲಿ ಬಿಜೆಪಿ ಸರ್ಕಾರಗಳಿಂದ ದೊರಕುತ್ತಿಲ್ಲ. ಇಂತಹ ವಿಚಾರಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತಿಳಿಸಬೇಕು. ಜನರ ಗಂಭೀರ ಸಮಸ್ಯೆಗಳತ್ತ ಗಮನ ಹರಿಸದ ಬಿಜೆಪಿ ಸರ್ಕಾರ  ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆಯೆಂದು ಆರೋಪಿಸಿದರು.

ಕೇವಲ ‘ರಾಮ’ನನ್ನು ನೆನೆಯುವವರು ಮಾತ್ರವೇ ಹಿಂದುಗಳೇ ಎಂದು ಪ್ರಶ್ನಿಸಿದ ಅವರು, ಕೊಡಗಿನ ಕಾವೇರಿ, ಗ್ರಾಮೀಣ ಭಾಗಗಳಲ್ಲಿನ ಮಾರಮ್ಮ ದೇವರುಗಳು ಯಾವ ಧರ್ಮಕ್ಕೆ ಸೇರಿವೆಯೆಂದು ಮಾರ್ಮಿಕವಾಗಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next