Advertisement

ಕೋವಿಡ್ ನಿಯಮ ಪಾಲಿಸಿ ಮದುವೆಯಾದ ಜೋಡಿಗೆ ವಿಶೇಷ ಗಿಫ್ಟ್ ಕೊಡ್ತಾರೆ ಈ ಪೊಲೀಸ್ ಅಧಿಕಾರಿ..!

07:15 PM Apr 26, 2021 | Team Udayavani |

ಭೋಪಾಲ್ : ಕೋವಿಡ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಜನರಲ್ಲಿ ಮುಂಜಾಗ್ರತೆಯನ್ನು ಬೆಳೆಸಲು ಸಾಕಷ್ಟು ಉಪಾಯಗಳನ್ನು ಅನುಸರಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಕೋವಿಡ್ ನಿಯಮಾವಳಿಯಲ್ಲಿ ಕೇವಲ ಹತ್ತು ಜನ ಸಮ್ಮುಖದಲ್ಲಿ ಮದುವೆಯಾದರೆ ಅಂತಹ ವಧು ಮತ್ತು ವರರನ್ನು ತಮ್ಮ ಮನೆಗೆ ಕರೆಸಿ ವಿಶೇಷ ಭೋಜನೆ ನೀಡುವುದಾಗಿ ಹೇಳಿದ್ದಾರೆ.

Advertisement

ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮನೋಜ್‌ ಕುಮಾರ್ ಸಿಂಗ್‌ ಈ ರೀತಿಯಾಗಿ ಪ್ರಕಟಣೆ ಹೊರಡಿಸಿದ್ದಾರೆ. 10 ಅಥವಾ ಅದಕ್ಕಿಂತ ಕಡಿಮೆ ಜನರ ಸಮ್ಮುಖದಲ್ಲಿ ಮದುವೆಯಾಗುವ ವಧು-ವರರಿಗೆ ಈ ಆತಿಥ್ಯ ನೀಡುವುದಾಗಿ ಮನೋಜ್‌ ಕುಮಾರ್ ಸೋಮವಾರ ತಿಳಿಸಿದ್ದಾರೆ.

ಇವರು ಈ ನಿರ್ಧಾರಕ್ಕೆ ಬರಲು ಒಂದು ಕಾರಣ ಇದೆ. ಕಳೆದ ವಾರ ಬಿಂಧ್‌ ಜಿಲ್ಲೆಯ ಕುರ್ತಾರ ಗ್ರಾಮದಲ್ಲಿ ನಡೆದ ಒಂದು ಮದುವೆಯಲ್ಲಿ ಜನರು ಮಾಸ್ಕ್‌ ಧರಿಸದೇ, ವ್ಯಕ್ತಿಗತ ಅಂತರ ಕಾಪಾಡದೇ ಮನಬಂದಂತೆ ನೃತ್ಯ ಮಾಡಿದ್ದರು. ಇದನ್ನು ಗಮನಿಸಿದ ಮನೋಜ್ ಈ ರೀತಿಯ ಘಟನೆಗಳು ಮತ್ತೆ ಜರುಗದಂತೆ ಎಚ್ಚರವಹಿಸಲು ತೀರ್ಮಾನಿಸಿ, ಈ ಹೊಸ ಯೋಜನೆ ಮಾಡಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ವಧು ಮತ್ತು ವರರರಿಗೆ ಪೊಲೀಸ್ ವರಿಷ್ಠಾಧಿಕಾರಿ ನೆನಪಿನ ಕಾಣಿಕೆಯನ್ನೂ ನೀಡುತ್ತಾರೆ ಎಂದು ಮೂಲಗಳು ತಿಳಿಸಿವೆ.

ಇದೇ ಏಪ್ರಿಲ್ 30ರಂದು ಎರಡು ಜೋಡಿಗಳು ವಿವಾಹವಾಗುತ್ತಿದ್ದಾರೆ. ನಾನು ಹೇಳಿದ ನಂತರ ಅವರು ಅತಿಥಿಗಳ ಸಂಖ್ಯೆಯನ್ನು 10ಕ್ಕೆ ಮಿತಿಗೊಳಿಸಲು ಯೋಚಿಸಿದ್ದಾರೆ. ಅವರು ಹಾಗೆ ಮಾಡಿದರೆ, ನನ್ನ ಮನೆಯಲ್ಲೇ ಅವರಿಗೆ ಔತಣ ಕೂಟ ಏರ್ಪಡಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next