Advertisement

ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಉಪಸ್ಥಿತಿಯಿಂದ ಬಿಜೆಪಿಗೆ ಭಯ ಶುರುವಾಗಿದೆ:ಡೆರೆಕ್ ಓ ಬ್ರಾಯನ್

04:23 PM Oct 18, 2021 | Team Udayavani |

ಪಣಜಿ: ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಉಪಸ್ಥಿತಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಅಸಮರ್ಥರಾಗಿದ್ದಾರೆ ತೃಣಮೂಲ ಕಾಂಗ್ರೇಸ್‍ನ ಸಂಸದ ಹಾಗೂ ರಾಷ್ಟ್ರೀಯ ನಾಯಕ ಡೆರೆಕ್ ಓ ಬ್ರಾಯನ್ ಠೀಕಾ ಪ್ರಹಾರ ನಡೆಸಿದರು.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಹಾಕಿದ್ದ ಬ್ಯಾನರ್ಸ್, ಪೋಸ್ಟರ್ ನ್ನು ತೆಗೆದು ಆ ಜಾಗದಲ್ಲಿ ಬಿಜೆಪಿ ತಮ್ಮ ಬ್ಯಾನರ್ಸ ಪೋಸ್ಟರ್ಸ್ ಹಾಕುತ್ತಿದೆ. ತೃಣಮೂಲ ಕಾಂಗ್ರೇಸ್ ಬಂದಿದ್ದರಿಂದ ಗೋವಾದಲ್ಲಿ ಬಿಜೆಪಿ ಭಯಭೀತಗೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಪೋಸ್ಟರ್ ತೆಗೆದ ಮಾತ್ರ ನಮ್ಮ ಶಕ್ತಿ ಕುಂದುವುದಿಲ್ಲ. 2022 ರ ವಿಧಾನಸಭಾ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಹೋರಾಟ ನಡೆಸಲಿದ್ದೇವೆ ಎಂದರು.

ನಮ್ಮ ಪೋಸ್ಟರ್ ಹೋಲ್ಡಿಂಗ್ಸ್  ತೆಗೆದುಹಾಕಿ ಆ ಜಾಗದಲ್ಲಿ ಬಿಜೆಪಿಯ ಮಾಸ್ಟರ್ ಅಮಿತ್ ಶಾ ರವರ ಪೋಸ್ಟರ್ ಹಾಕಿರುವುದರಿಂದ ನಮಗೆ ಯಾವ ವ್ಯತ್ಯಾಸವೂ ಆಗುವುದಿಲ್ಲ. ಗೋವಾ ರಾಜ್ಯದ ಜನರು ಕಳೆದ ನಾಲ್ಕು ವರ್ಷ ಬಿಜೆಪಿಯಿಂದ ಅನುಭವಿಸಿದ ದುಃಖವನ್ನು ಕಷ್ಟವನ್ನು ಮರೆಯುವುದಿಲ್ಲ. ಗೋವಾದ ಜನತೆ ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡೂ ಪಕ್ಷಗಳ ಬೇಲೆ ಬೇಸರಗೊಂಡಿದ್ದಾರೆ. ಇದರಿಂದಾಗಿ ಪ್ರಸಕ್ತ ಬಾರಿ ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಜನತೆ ಅವಕಾಶ ನೀಡಲಿದ್ದಾರೆ ಎಂದು ಡೆರೆಕ್ ಓ ಬ್ರಾಯನ್ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next