Advertisement

ಶಾಲೆಯಲ್ಲಿ ದಲಿತ ಬಾಲಕಿ ರೇಪ್‌; ಇಬ್ಬರು ಶಿಕ್ಷಕರ ಸಹಿತ ಮೂವರು arrest

10:46 AM Jan 22, 2019 | Team Udayavani |

ರಾಯಗಢ : ಹದಿನಾರರ ಹರೆಯದ ದಲಿತ ಬಾಲಕಿಯನ್ನು ಮಧ್ಯಪ್ರದೇಶದ ರಾಯಗಢ ಜಿಲ್ಲೆಯ ಗ್ರಾಮವೊಂದರ ಖಾಸಗಿ ಶಾಲೆಯಲ್ಲಿ ಕಾಮಾಂಧನೊಬ್ಬ ರೇಪ್‌ ಮಾಡಿರುವುದು ವರದಿಯಾಗಿದ.

Advertisement

ಅತ್ಯಾಚಾರಗೈದಿರುವ ಆರೋಪಿ ಅಜೀಂ ಖಾನ್‌ (21) ಮತ್ತು ಅತ್ಯಾಚಾರ ನಡೆಸಲು ಈತನಿಗೆ ನೆರವಾದ ಇಬ್ಬರು ಶಾಲಾ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ರಿತಿಕ್‌ ಕುಶ್ವಾಹಾ (21) ಮತ್ತು ಶ್ಯಾಮ್‌ ಪ್ರಜಾಪತಿ (22) ಎಂದು ಗುರುತಿಸಲಾಗಿದೆ.

ಈ ಇಬ್ಬರು ಶಿಕ್ಷಕರು ದಲಿತ ಬಾಲಕಿ ಮತ್ತು ಖಾನ್‌ ನನ್ನು ಶಾಲಾ ಕೋಣೆಯೊಂದರಲ್ಲಿ ಕೂಡಿ ಹಾಕಿ ಹೊರಗಿನಿಂದ ಬೀಗ ಜಡಿದು ಅತ್ಯಾಚಾರಿಗೆ ನೆರವಾಗಿದ್ದರು. 

ತಾನು ಶಾಲೆ ಮುಗಿದ ಬಳಿಕ  ಸಂದವಾತಾ ಗ್ರಾಮದ ಬಸ್‌ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಆರೋಪಿ ಅತ್ಯಾಚಾರಿ ಖಾನ್‌ ತನಗೆ ಆಮಿಷ ಒಡ್ಡಿ ಶಾಲೆಗೆ ಕರೆದೊಯ್ದನೆಂದು 9ನೇ ತರಗತಿ ಓದುತ್ತಿರುವ ಸಂತ್ರಸ್ತ ದಲಿತ ಬಾಲಕಿ ಹೇಳಿದ್ದಾರೆ. ಆಕೆಯ ಹೆತ್ತವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಅತ್ಯಾಚಾರದ ಈ ಘಟನೆ ಮೊನ್ನೆ ಭಾನುವಾರ ಛಾಪಿಹೆಡಾ ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿರುವುದಾಗಿ ಪ್ರಭಾರ ಠಾಣಾಧಿಕಾರಿ ಸಂಗೀತಾ ಸೋಳಂಕಿ ತಿಳಿಸಿದ್ದಾರೆ. 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next