Advertisement

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

08:59 PM May 02, 2024 | Team Udayavani |

ಬೆಂಗಳೂರು: “ಮಾಜಿ ಪ್ರಧಾನಿಗಳ ಕುಟುಂಬವನ್ನು 420 ಎಂದು ನಾನು ಕರೆಯುವುದಿಲ್ಲ. ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಪೆನ್‌ಡ್ರೈವ್‌ ಈ ಕುಟುಂಬದ ಆಸ್ತಿ, ತೆನೆಹೊತ್ತ ಮಹಿಳೆ ಈಗ ಪೆನ್‌ ಡ್ರೈವ್‌ ಹೊರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದ್ದಕ್ಕೆ ಜನ ಹಾಡಿ, ಹೊಗಳುತ್ತಿದ್ದಾರೆ’ ಎಂದು ಸಂಸದ ಡಿ.ಕೆ. ಸುರೇಶ್‌ ಲೇವಡಿ ಮಾಡಿದರು.

Advertisement

ಸದಾಶಿವನಗರದ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ರಧಾನಿಗಳ ಕುಟುಂಬವನ್ನ ಇಡೀ ಪ್ರಪಂಚ ಕೊಂಡಾಡುತ್ತಿದೆ, ಹೊಗಳುತ್ತಿದೆ. ಜನರು ಹೇಳಿದ ಮಾತನ್ನು ನಾನು ಹೇಳುತ್ತಿದ್ದೇನೆ. ಅವರ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದರೆ ನಾಲ್ಕು ಮಾತು ನಮ್ಮನ್ನು ಬೈದುಕೊಳ್ಳಲಿ ಎಂದರು.

ಮೋದಿ ಅವರು ಕರ್ನಾಟಕದ ಬೇರೆ, ಬೇರೆ ವಿಚಾರಗಳನ್ನು ತೆಗೆದುಕೊಂಡು ರಾಜ್ಯದ ಮಾನ ಹರಾಜು ಹಾಕುತ್ತಾರೆ. ಆದರೆ, ಈ ವಿಚಾರದ ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. “ನನ್ನನ್ನು ಕೆಣಕಿದ್ದಾರೆ ನಾನು ಸುಮ್ಮನೆ ಇರುವುದಿಲ್ಲ’ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ ಅವರಿಗೆ ದೇವರು ಒಳ್ಳೆಯದು ಮಾಡಲಿ. ನಾವೆಲ್ಲಿ ಕೆಣಕಿದ್ದೇವೆ, ಅವರ ಮೈತ್ರಿ ಪಕ್ಷದವರೇ ಅವರನ್ನು ಕೆಣಕಿರುವುದು, ಅವರಿಂದಲೇ ಎಲ್ಲಾ ಬಿಡುಗಡೆಯಾಗಿರುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next