Advertisement
ಬಿಹಾರ ಮತ್ತು ಉ.ಪ್ರದೇಶದ ಕಾರ್ಮಿಕರು ನಮ್ಮ ರಾಜ್ಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಕಾರಣ, ಸ್ಥಳೀಯರಿಗೆ ಉದ್ಯೋಗ ದೊರಕುತ್ತಿಲ್ಲ ಎಂದು ಹೇಳಿ ಈ ಹಿಂದೆಯೇ ಕಮಲ್‌ನಾಥ್ ವಿವಾದ ಸೃಷ್ಟಿಸಿದ್ದರು. ಈಗ ವ್ಯಾಪಕ ವಿರೋಧದ ನಡುವೆಯೇ ಈ ನಿಯಮ ಜಾರಿಗೆ ತಂದಿದ್ದಾರೆ. ಹೊಸ ಕೈಗಾರಿಕಾ ನೀತಿಯ ಅನ್ವಯ ಈ ನಿಯಮ ಪ್ರಕಟಿಸಲಾಗಿದೆ. ಮಧ್ಯಪ್ರದೇಶ ಸರಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರೆ ಉದ್ದಿಮೆಗಳು ಈ ನಿಯಮವನ್ನು ಪಾಲಿಸಬೇಕು. ಈ ಬಗ್ಗೆ ಚರ್ಚೆ ನಡೆಸಲು ಫೆ. 19ರಂದು ಸಿಎಂ ಕಮಲ್‌ನಾಥ್ ಉದ್ಯಮ ಕ್ಷೇತ್ರಗಳ ಮುಖ್ಯಸ್ಥರ ಜತೆಗೆ ಮಾತುಕತೆ ನಡೆಸಲಿದ್ದಾರೆ. Advertisement
ಮ.ಪ್ರ. ಶೇ.70ರಷ್ಟು ಉದ್ಯೋಗ ಸ್ಥಳೀಯರಿಗೇ ಮೀಸಲು
12:30 AM Feb 06, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.