Advertisement
ನೆಗ್ರಾನ್‌ನ ದ್ರಾಕ್ಷಿ ತೋಟದಲ್ಲಿ ಅಗೆಯುವಾಗ ಮೊದಲಿಗೆ ಚಿಕ್ಕ ಮೊಸಾಯಿಕ್ ಚೂರುಗಳು ಸಿಕ್ಕವು. ಅನಂತರ ಪುರಾತ್ತತ್ವ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸಿ ಈ ಬಗ್ಗೆ ಅದೇ ಜಾಗದಲ್ಲಿ ಇನ್ನಷ್ಟು ದೂರ ಅಗೆದಾಗ ಅವರಿಗೆ ಆಶ್ಚರ್ಯ ಉಂಟಾಗಿತ್ತು. ನೆಲದಲ್ಲಿ ಸಮತಟ್ಟಾಗಿ ಮೊಸಾಯಿಕ್ ಗಳನ್ನು ಜೋಡಿಸಿಡಲಾಗಿತ್ತು. ಆ ಮೊಸಾಯಿಕ್ ಗಳೂ ಕೂಡಾ ಸುಂದರ ಚಿತ್ರಗಳನ್ನು ಒಳಗೊಂಡಿದ್ದು, ವರ್ಣರಂಜಿತ ವಿವರಣೆಗಳನ್ನು ಒಳಗೊಂಡಿದೆ. ಶತಮಾನದಷ್ಟು ಹಳೆಯದೆನ್ನಬಹುದಾದ ಈ ಮೊಸಾಯಿಕ್ ಗಳನ್ನು ಸಂಪೂರ್ಣವಾಗಿ ಸಂರಕ್ಷಿಸಿಡಲಾಗಿದೆ.
ಹೌದೆನ್ನುತ್ತಾರೆ ಇಲ್ಲಿನ ಪುರಾತತ್ವ ವಿದ್ವಾಂಸರು. ಈ ಮೊಸಾಯಿಕ್‌ಗಳು ಶತಮಾನಕ್ಕಿಂತಲೂ ಹೆಚ್ಚು ಹಳೆಯದಾಗಿದೆ ಅನ್ನುವುದರಲ್ಲಿ ಸಂಶಯವಿಲ್ಲ. ರೋಮ್‌ನಲ್ಲಿದ್ದ ಪ್ರಾಚೀನರ ಮನೆಗಳಲ್ಲಿ ಮೊಸಾಯಿಕ್‌ಗಳ ಬಳಕೆ ಸಾಮಾನ್ಯವಾಗಿತ್ತು. ಆದರೆ ಇವು ಇಲ್ಲೇ ತಯಾರಾಗಿದೆ ಎನ್ನುವುದಕ್ಕೆ ನಿಖರ ಉತ್ತರ ಹೇಳಲಾಗದು. ಪ್ರಾಚೀನ ನಿರ್ಮಾಣದ ನಿಖರ ವಿಸ್ತರಣೆ ಮತ್ತು ಅಂತಹ ಸ್ಥಳವನ್ನು ಗುರುತಿಸುವುದು ತಂಡದ ಉದ್ದೇಶವಾಗಿತ್ತು ಎಂದು ಪುರಾತತ್ವ ತಜ್ಞರು ತಿಳಿಸಿದ್ದಾರೆ.