ಹೊಸ ಕನಸು… ಹೊಸ ಹುರುಪು… ಹೊಸ ಭರವಸೆ… ಹೊಸ ಗುರಿ… ಹೊಸ ಸಾಹಸ… ಹೀಗೆ ಹೊಸತನವನ್ನು ಹೊತ್ತು ತರುವ ಖುಷಿಯ ಹೊಸ ವರ್ಷ ಮತ್ತೆ ಬಂದಿದೆ. ಇದು 2023ಕ್ಕೆ ವಿದಾಯ ಹೇಳಿ 2024ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವ ಕ್ಷಣ. ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಕ್ಷಣ ಇದಾಗಿದೆ.
ಹೊಸ ವರ್ಷ ಬರೀ ಕ್ಯಾಲೆಂಡರ್ ಬದಲಾಯಿಸುವ ಕ್ಷಣ ಅಲ್ಲ. ನಮ್ಮ ಬದುಕಿನ ಹೊಸ ಹೆಜ್ಜೆಯತ್ತ ಸಾಗುವ ಹೊತ್ತು ಕೂಡ ಹೌದು. ಮತ್ತೆ ನಮಗೆ ಅದೇ 365 ದಿನಗಳು ಸಿಗುತ್ತವೆ. ಈ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ. ಜತೆಗೆ, ಕಳೆದ ವರ್ಷದತ್ತ ಒಮ್ಮೆ ಹಿಂತಿರುಗಿ ನೋಡಿ ಅವಲೋಕನ ಮಾಡಿಕೊಳ್ಳುವುದು ಕೂಡ ಮುಖ್ಯ. ಈ ಕಳೆದ ವರ್ಷದ ನಮ್ಮ ತಪ್ಪುಗಳನ್ನು ಅರಿತುಕೊಳ್ಳಲು, ಆದ ತಪ್ಪನ್ನು ತಿದ್ದಿಕೊಳ್ಳಲು ಅಥವಾ ನಾವು ಭವಿಷ್ಯದಲ್ಲಿ ಇಡಬೇಕಾದ ಹೆಜ್ಜೆಗೆ ದಾರಿಯನ್ನು ತೋರಿಸುವ ಅವಕಾಶದಂತಿರುತ್ತದೆ.
ಕಳೆದ ವರುಷ ಮಾಡಿರುವ ಪ್ರತಿಯೊಂದು ಕೆಲಸವನ್ನು ಈ ಹೊಸವರುಷಕ್ಕೆ ಹೇಗೆ ಮತ್ತಷ್ಟು ಚೆನ್ನಾಗಿ ಮಾಡಿಕೊಂಡು ಹೊಗಬಹುದುವೆಂದು ಅರಿತುಕೊಂಡು, ಹೊಸ ತನದ ಅಭಿಲಾಶೆಯೊಂದಿಗೆ ಮಾಡಿದ ಪ್ರತಿಯೊಂದು ತಪ್ಪು ಒಪ್ಪುಗಳನ್ನು ಸರಿಮಾಡಿಕೊಂಡು ಬರಲು ಒಂದು ಅವಕಾಶವೆಂದು ನಾವು ನೆನದು ಕೊಂಡು ಈ ವರುಷನಮಗೆ ಹೊಸ ತನವನ್ನು ಮರುಕಳಿಸುವಂತೆ ಇರಬೇಕು. ಮಾಡಿರುವ ಪ್ರತಿಯೊಂದು ತಪ್ಪಿನಲ್ಲೂ ಹೊಸತನವನ್ನು ಕಂಡು ಪುನಃ ತಪ್ಪನ್ನು ಮಾಡಲು ಅಸಾಮರ್ಥ್ಯರಾಗಬೇಕು.
ಸ್ನೇಹಿತರೊಂದಿಗೆ ಕಳೆದ ಕ್ಷಣ, ಪ್ರತೀ ಸಲ ಕೂಡ ಮೊದಲ ಕ್ಲಾಸಿಗೆ ಲೇಟ್ ಆಗಿ ಬಂದಾಗ ಶಿಕ್ಷಕರು ಹೇಳುವ ಮಾತುಗಳು, ಆಸಾಯಿನ್ ಮೈಂಟ್ಸ… ಕಂಪ್ಲೀಟ್ ಮಾಡದೇ ಇರುವಾಗ ಶಿಕ್ಷ ಕ ರಿಂದ ಕೇಳುವ ಬೈಗುಳ, ಮನೆಗೆ ಲೇಟಾಗಿ ಹೋದಗ ಅಮ್ಮನಿಂದ ಆಗುವ ಕಿರಿಕಿರಿ, ಕ್ಲಾಸಲ್ಲಿ ಕೂತು ಸ್ನೇಹಿ ತರು ಮಾಡುವ ಉಪಾದ್ರ, ಕ್ಲಾಸ್ ಆಗ್ತಾ ಇರುವಾಗ ಮೆಲ್ಲನೆ ತಿಂಡಿ ತಿನ್ನುವ ಮಜ ಇವೆಲ್ಲಾವೂ ಕೂಡ ಹಾಗೆಯೇ ಇದ್ದು ಮತ್ತಷ್ಟು ಮಜಲಿನೊಂದಿಗೆ ಸಂತೋಷದಿಅದ 2023ಕ್ಕೆ ಗುಡ್ ಬೈ ಹೇಳಿ 2024 ಗೆ ಹಾಯ್ ಮಾಡುವ ಟೈಮ್ ಬಂದಿದೆ ನಮ್ಮೆಲ್ಲಾ ಕಹಿ ಸಿಹಿ ನೆನೆಪುಗಳ ಜತೆಗೆ ಸಂತೋಷದಿ ಅದ 2034
-ಚೈತನ್ಯ ಕೊಟ್ಟಾರಿ
ಎಸ್.ಡಿ.ಎಂ., ಉಜಿರೆ