Advertisement

ವಿಶ್ವದಾಖಲೆಯತ್ತ  ಬೆಟದೂರಿನ ಯುವತಿ ಚಿತ್ತ

04:25 PM Dec 06, 2020 | Adarsha |

ಹುಬ್ಬಳ್ಳಿ: ಪುರುಷರಿಗಷ್ಟೇ ಸೀಮಿತ ಎನ್ನುವಂತಿರುವ ಫ್ಲೇರಿಂಗ್‌ ಹಾಗೂ ಜಗಲಿಂಗ್‌ನಲ್ಲಿ ಗ್ರಾಮೀಣ ಭಾಗದ ಯುವತಿಯೊಬ್ಬರು ಕೌಶಲ ಕರಗತ ಮಾಡಿಕೊಂಡಿದ್ದಲ್ಲದೆ ವಿಶ್ವದಾಖಲೆಗೆ ಮುಂದಾಗಿದ್ದು, ಸ್ವಿಡ್ಜರ್‌ ಲ್ಯಾಂಡ್‌ನಲ್ಲಿ ನಡೆಯಲಿರುವ ವಿಶ್ವದಾಖಲೆ ಸ್ಪರ್ಧೆಗೆ ತೆರಳಲು ಆರ್ಥಿಕ ಸಮಸ್ಯೆ ಎದುರಾಗಿದೆ.

Advertisement

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ವೀರಯೋಧ ಹನುಮಂತಪ್ಪ ಕೊಪ್ಪದ ಸ್ವಗ್ರಾಮ ಬೆಟದೂ ರಿನ ಪ್ರತಿಭೆ ಕವಿತಾ ಮೇದಾರ ಇಂತಹ ಮಹತ್ಸಾಧನೆ ಮೂಲಕ ಮತ್ತೂಮ್ಮೆ ಬೆಟದೂರು ದೇಶದ ಗಮನ ಸೆಳೆ ಯುವ ಕಾರ್ಯಕ್ಕೆ ಮುಂದಾಗಿದೆ. ಬಿ ಕಾಂ ಪದವೀಧರೆಯಾಗಿರುವ ಕವಿತಾ ಏನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಪುರುಷರಿಗೆ ಸೀಮಿತ ಎನ್ನುವಂತಿ ರುವ ಫ್ಲೇರಿಂಗ್‌ ಹಾಗೂ ಜಗಲಿಂಗ್‌  ತರಬೇತಿ ಪಡೆ ದಿದ್ದಾರೆ.

ತಮ್ಮ ಮಾವಂದಿರ ಸಹಕಾರದೊಂದಿಗೆ ಪುಣೆಯಲ್ಲಿ ಸುಮಾರು ಒಂದು ವರ್ಷದವರೆಗೆ ತರಬೇತಿ ಪಡೆದು ಕಳೆದ ಮೂರು ವರ್ಷಗಳಿಂದ ಸಾಧನೆ ಯಲ್ಲಿ ತೊಡಗಿದ್ದಾರೆ.ದೇಶದಲ್ಲೇ ಫ್ಲೇರಿಂಗ್‌ ಮತ್ತು ಜಗಲಿಂಗ್‌ಮಾಡುವ ಏಕೈಕ ಮಹಿಳಾ ಪ್ರತಿಭೆ ಕವಿತಾ ಮೇದಾರ ಎಂಬುದು ಹೆಮ್ಮೆಯ ವಿಷಯ.

ಫ್ಲೇರಿಂಗ್‌ ಮತ್ತು ಜಗಲಿಂಗ್‌ನ್ನು 1 ನಿಮಿಷಕ್ಕೆ 120 ಬಾರಿ ಮಾಡುವ ಮೂಲಕ ವಿಶ್ವದಾಖಲೆ ಹಂಬಲ ಹೊಂದಿದ್ದಾರೆ. ಅದಕ್ಕಾಗಿ ಸ್ವಿಡ್ಜರ್‌ ಲ್ಯಾಂಡ್‌ಗೆ ತೆರಳಬೇಕಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 1.50 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚವಾಗಲಿದ್ದು, ಅದನ್ನು ಭರಿಸಲಾಗದೆ ಮುಂದೇನು ಎನ್ನುವ ಚಿಂತೆಯಲ್ಲಿದ್ದಾರೆ.

ಇದನ್ನೂ ಓದಿ:ಶೌಚಾಲಯ ಇದ್ದರಷ್ಟೇ ಚುನಾವಣೆ ಸ್ಪರ್ಧೆಗೆ ಅವಕಾಶ

Advertisement

ರೈತಾಪಿ ಕುಂಟುಬದಿಂದ ಬಂದ ನಾನು ಕಳೆದ ಮೂರು ವರ್ಷಗಳಿಂದ ಫ್ಲೇರಿಂಗ್‌ ಹಾಗೂ ಜಗಲಿಂಗ್‌ನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಒಂದು ವರ್ಷ ಪುಣೆಯಲ್ಲಿ ತರಬೇತಿ ಪಡೆದಿದ್ದೇನೆ. ಕೋವಿಡ್ ಸಮಯದಲ್ಲೂ ತರಬೇತಿಗೆ ಉತ್ತಮ ಅವಕಾಶ ಸಿಕ್ಕಿತು. ಈಗ ವಿಶ್ವ ದಾಖಲೆಗೆ ಅನುಮೋದನೆ ದೊರೆಯಬೇಕಿದೆ. ನಂತರ ಅದಕ್ಕೆ ಇರುವ ಶುಲ್ಕ ಭರಿಸಿ ಸ್ವಿಡ್ಜರ್‌ ಲ್ಯಾಂಡ್‌ನಲ್ಲಿ ನಡೆ ಯುವ ಸ್ಪರ್ಧೆಗೆ ತೆರಳಬೇಕಿದೆ.

ಕವಿತಾ ಮೇದಾರ,

ಪ್ಲೇರಿಂಗ್‌ ಮತ್ತು ಜಗಲಿಂಗ್‌ ಸ್ಪರ್ಧಾಳು

Advertisement

Udayavani is now on Telegram. Click here to join our channel and stay updated with the latest news.

Next