Advertisement
ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ ನೀವು ಹೇಳಿದ ಕಡೆಗೆ ಊಟ- ಉಪಹಾರ ತಂದುಕೊಡುವ ರೀತಿಯಲ್ಲೆ ಒಂದೇ ಒಂದು ಮೊಬೈಲ್ ಕರೆ ಮಾಡಿದರೆ ಸಾಕು, ಟೈಲರ್ ಶ್ರೀಧರ್ ತಮ್ಮ ತ್ರಿಚಕ್ರ ವಾಹನದ ಹೊಲಿಗೆ ಯಂತ್ರದೊಂದಿಗೆ ನಿಮ್ಮ ಮನೆಬಾಗಿಲ ಮುಂದೆ ದರ್ಶನ ಕೊಡುತ್ತಾರೆ. ಆಲ್‌ಟ್ರೇಷನ್‌ಗೆ ಸಂಬಂಧಿಸಿದ ಎಲ್ಲಾ ಕೆಲಸವನ್ನೂ ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸಿ, ಹೊರಡುತ್ತಾರೆ.
Related Articles
ಶ್ರೀಧರ್ ಅವರು ಈ ಮೊದಲು ಕುಳಿತಲ್ಲೇ ಟೈಲರಿಂಗ್ ಮಾಡುತ್ತಿದ್ದರು. ಯಾಕೋ ದುಡಿಮೆಯಲ್ಲಿ ನಷ್ಟ ಕಂಡರಂತೆ. ಆಗ ಸಹೋದರ, ಸ್ನೇಹಿತರ ಸಲಹೆ ಮೇರೆಗೆ ಸಂಚಾರಿ ಹೊಲಿಗೆ ಯಂತ್ರವನ್ನಿಟ್ಟುಕೊಂಡು, ಸಂಚಾರಿ ಟೈಲರಿಂಗ್ ಆರಂಭಿಸಿದರು. ಆ ಐಡಿಯಾ ಕ್ಲಿಕ್ ಆಯಿತು.
Advertisement
ಮೊದ ಮೊದಲು ಕಲ್ಯಾಣ ನಗರದ 1ನೇ ಹಂತ, 2ನೇ ಹಂತಗಳಲ್ಲಿ ಈ ಕೆಲಸ ಆರಂಭಿಸಿದರು. ಆನಂತರ ಲಿಂಗರಾಜಪುರ, ಹೆಬ್ಟಾಳಕ್ಕೂ ಕೆಲಸವನ್ನು ವಿಸ್ತರಿಸಿಕೊಂಡರು. ಬಿಟಿಎಂ ಲೇಔಟ್, ಕೋರಮಂಗಲ, ರಿಚ¾ಂಡ್ ಟೌನ್ ಸೇರಿದಂತೆ ಇನ್ನಿತರ ಕಡೆಗಳಿಗೂ ಹೋಗಿಬಂದರು. ಹತ್ತು ವರ್ಷದಿಂದ ಈ ಕೆಲಸದಲ್ಲಿ ನಿತರರಾಗಿದ್ದು ಬದುಕಿನಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.
ರಜೆ ದಿನಗಳಲ್ಲಿ ಟೆಕ್ಕಿಗಳ ಮನೆಗೆ
ಸಾಫ್ಟ್ವೇರ್ ಕ್ಷೇತ್ರದಲ್ಲಿರು ವವರೂ ಶ್ರೀಧರ್ ಅವರ ಟೈಲರ್ ಕೆಲಸಕ್ಕೆ ಮಾರು ಹೋಗಿದ್ದಾರೆ. ಇವರ ವೀಕೆಂಡ್, ಟೆಕ್ಕಿಗಳ ಕೆಲಸಕ್ಕಾಗಿಯೇ ಫಿಕ್ಸ್ ಆಗಿದೆ. ಒಂದು ದಿನಕ್ಕೆ ಸುಮಾರು 500 ರೂ.ದಿಂದ 600 ರೂ. ಸಂಪಾದಿಸುವ ಇವರು, ಓಡಾಡಿ ಕೊಂಡು ಮಾಡುವ ಈ ಕೆಲಸದಲ್ಲಿ ಸಂತೃಪ್ತರಾಗಿದ್ದಾರೆ.
ಆನ್ ಲೈನ್‌ನಲ್ಲಿ ಬುಕ್ಮಾಡಿದರೆ ನೀವು ಹೇಳಿದ ಕಡೆಗೆ ಊಟ- ಉಪಹಾರ ತಂದುಕೊಡುವ ರೀತಿಯಲ್ಲೆ ಒಂದೇ ಒಂದು ಮೊಬೈಲ್ ಕರೆ ಮಾಡಿದರೆ ಸಾಕು, ಟೈಲರ್ ಶ್ರೀಧರ್ ತಮ್ಮ ತ್ರಿಚಕ್ರ ವಾಹನದ ಹೊಲಿಗೆ ಯಂತ್ರದೊಂದಿಗೆ ನಿಮ್ಮ ಮನೆಬಾಗಿಲಿಗೆ ಬಂದು ಕೆಲಸ ಒಂದು ಕರೆಗೆ ಶ್ರೀಧರ್ ಹಾಜರ್ ಮಾಡಿಕೊಡುತ್ತಾರೆ… ಓಡಾಟದ ಟೈಲರಿಂಗ್‌ನಿಂದ ಸಾಕಷ್ಟು ಜನರಿಗೆ ಪರಿಚಿತನಾಗಿದ್ದೇನೆ. ಬೆಂಗಳೂರು ನಗರದಲ್ಲಿ ಸಂಚಾರಿ ಹೊಲಿಗೆ ಯಂತ್ರದ ಕೆಲಸಕ್ಕೆ ಸಾಕಷ್ಟು ಬೇಡಿಕೆ ಇದೆ. ನಗರದಲ್ಲಿರುವ ಹಲವು ಟೈಲರ್‌ಗಳು ನಷ್ಟದಲ್ಲಿ ಜೀವನ ಕಳೆಯುತ್ತಿದ್ದಾರೆ. ಅಂಥವರು ಹೆಚ್ಚಿನ ಸಂಖ್ಯೆಯಲ್ಲಿ ಈ ಹಾದಿಗೆ ಬರಬೇಕು.
ಶ್ರೀಧರ್, ಸಂಚಾರಿ ಟೈಲರ್ ದೇವೇಶ ಸೂರಗುಪ್ಪ