Advertisement

ಚಿತ್ರರಂಗದಲ್ಲಿ 30 ವರ್ಷ: ನನ್ನ ಹಸಿವು ತಣಿಯುವುದಿಲ್ಲ; ಅಜಯ್ ದೇವಗನ್

06:15 PM Nov 22, 2021 | Team Udayavani |

ಮುಂಬಯಿ: ಸೂಪರ್‌ಸ್ಟಾರ್ ಅಜಯ್ ದೇವಗನ್ ಸೋಮವಾರ ಹಿಂದಿ ಚಲನಚಿತ್ರೋದ್ಯಮದಲ್ಲಿ 30 ವರ್ಷಗಳನ್ನು ಪೂರೈಸಿದ್ದಾರೆ.

Advertisement

ಸಿನಿಮಾ ಜಗತ್ತಿನಲ್ಲಿ ನನ್ನ ಸುಸ್ಥಿರತೆಗೆ ಪ್ರಮುಖ ಅಂಶವೆಂದರೆ ಚಲನಚಿತ್ರಗಳ ಮೇಲಿನ ಉತ್ಸಾಹ ಮತ್ತು ವಿಕಸನಗೊಳ್ಳಲು ನನ್ನ ಹಠಮಾರಿತನವೇ ಕಾರಣ ಎಂದು ಅವರು ಹೇಳಿದರು.

52 ರ ಹರೆಯದ ಅಜಯ್ ಅವರು ನವೆಂಬರ್ 22, 1991 ರಂದು ಬಿಡುಗಡೆಯಾದ “ಫೂಲ್ ಔರ್ ಕಾಂಟೆ” ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಕುಕು ಕೊಹ್ಲಿ-ನಿರ್ದೇಶನದ ರೋಮ್ಯಾಂಟಿಕ್-ಆಕ್ಷನ್ ಚಿತ್ರ ಹಿಟ್ ಆಗಿ ಚಿತ್ರದಲ್ಲಿ ದೇವಗನ್ ಅವರಿಗೆ ಜನಪ್ರಿಯತೆ ತಂದಿತ್ತು. ಚಿತ್ರದಲ್ಲಿ ಎರಡು ಬೈಕ್ ಗಳಲ್ಲಿ ಸಮತೋಲನ ಮಾಡಿ ಸಾಹಸ ಮೆರೆಯುವ ಸನ್ನಿವೇಶವನ್ನು ಅವರ ದಿವಂಗತ ತಂದೆ ಮತ್ತು ಹಿರಿಯ ಆಕ್ಷನ್ ಕೊರಿಯೋಗ್ರಾಫರ್ ವೀರು ದೇವಗನ್ ವಿನ್ಯಾಸಗೊಳಿಸಿದ್ದರು.

ಸರ್ವೈವಲ್ ಆಫ್ ದಿ ಫಿಟೆಸ್ಟ್. ಇದನ್ನು ಸಾಮಾನ್ಯವಾಗಿ ಹೇಳಲಾಗುತ್ತದೆ, 30 ವರ್ಷಗಳ ಕಾಲ ರಂಗದಲ್ಲಿ ಉಳಿಯಬೇಕಾದರೆ ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಬೇಕು. ವಿರಾಮವನ್ನು ಹುಡುಕಬಾರದು ಎಂದು ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿರುವ ನಟ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Advertisement

ಸಿನಿಮಾದ ಮೇಲಿನ ಉತ್ಸಾಹವು ಅವರನ್ನು ಪ್ರತಿ ನಿಮಿಷವೂ ಮುಂದುವರಿಯುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

ಸಿನಿಮಾದ ಪ್ರತಿಯೊಂದು ಅಂಶವೂ ಸಂತೋಷಕರ, ಆನಂದದಾಯಕ ಮತ್ತು ಪಾಲಿಸಬೇಕಾದದ್ದು. ಭಾವನೆಯಿಂದ ತಂತ್ರಜ್ಞಾನದವರೆಗೆ, ಸಿನಿಮಾ ನಿರಂತರವಾಗಿ ವಿಕಸನಗೊಳ್ಳುತ್ತಿದೆ ಮತ್ತು ಇದಕ್ಕಾಗಿ ನನ್ನ ಹಸಿವು ತಣಿಯುವುದಿಲ್ಲ”ಎಂದು ಅವರು ಹೇಳಿದರು.

‘ಶೀರ್ಷಿಕೆಯನ್ನು ಇನ್ನೂ ಅಂತಿಮಗೊಳಿಸದ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ಸೆಟ್ಟೇರಲಿದೆ “ಸಿಂಗಮ್ 3” ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಉಳಿದ ಯೋಜನೆಗಳಾದ ‘ರೇಡ್ 2’, ‘ಚಾಣಕ್ಯ’, ‘ಗೋಲ್ಮಾಲ್ 5′ ಕುರಿತು ಯಾವುದೇ  ಟೈಮ್‌ಲೈನ್‌ಗಳಿಲ್ಲ. ಆ ಚಲನಚಿತ್ರಗಳು ನಡೆಯುತ್ತವೆ ಎಂದು ನನಗೆ ತಿಳಿದಿದೆ. ಕೋವಿಡ್ ನಾವೆಲ್ಲರೂ ಒಂದೆರಡು ವರ್ಷಗಳನ್ನು ಕಳೆದುಕೊಳ್ಳುವಂತೆ ಮಾಡಿತು’ ಎಂದು ಅಜಯ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next