ವಿಜಯಪುರ: ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರದಿರಲು ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರ ಬಿಡುಗಡೆಯಾಗದೆ ಇರುವುದೇ ಮುಖ್ಯ ಕಾರಣ. ಕೋವಿಡ್, ಕ್ವಾರಂಟೈನ್, ಲಾಕ್‌ಡೌನ್ ಚಿತ್ರ್ಯೋದ್ಯಮದ ಮೇಲೆ ಕರಿನೆರಳ ಛಾಯೆ ತೋರಿದರೆ, ಚಿತ್ರಮಂದಿರಗಳು ತಿಂಗಳುಗಟ್ಟಲೆ ಮುಚ್ಚಿದ ಬಾಗಿಲು ತೆರೆಯದೆ ಬಿಕೋ ಎಂದವು.
ಸಿಬ್ಬಂದಿ ಜೀವನಕ್ಕೆ ಆಸರೆ, ಭದ್ರತೆ: ವಿಜಯಪುರದ ಶ್ರೀ ಗೌರಿಶಂಕರ್ ಮತ್ತುಶ್ರೀ ಸಂಗಮೇಶ್ವರ ಚಿತ್ರಮಂದಿರದ ಮಾಲೀಕರಾದ ಎಂ.ಸತೀಶ್ ಕುಮಾರ್ ತಮ್ಮ ಚಿತ್ರಮಂದಿರದ ಸಿಬ್ಬಂದಿಗಳಿಗೆ ಅಷ್ಟೂ ತಿಂಗಳು ಸಂಬಳ ನೀಡಿ, ಆಹಾರ ಧಾನ್ಯದ ಕಿಟ್ ನೀಡಿ, ಭವಿಷ್ಯದ ಬಗ್ಗೆ ಇದ್ದ ಅಂಜಿಕೆಯನ್ನು ಹೋಗಲಾಡಿಸಿದರು. ಯಾರನ್ನೂ ಕೆಲಸದಿಂದ ತೆಗೆಯಲಿಲ್ಲ.
ಸ್ಟಾರ್ ನಟರ ಚಿತ್ರಕ್ಕೆ ಕಾತರ: ಈಗ ಮತ್ತೆ ಚಿತ್ರಮಂದಿರಗಳು ಆರಂಭವಾಗಿವೆ. ಸರ್ಕಾರ ಇತ್ತೀಚೆಗಷ್ಟೇ ಚಿತ್ರಮಂದಿರಗಳಿಗೂ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದೆ. ಶ್ರೀ ಸಂಗಮೇಶ್ವರ ಚಿತ್ರಮಂದಿರದಲ್ಲಿ 480 ಆಸನಗಳಿವೆ. ಗೌರಿ ಶಂಕರ ಚಿತ್ರ ಮಂದಿರದಲ್ಲಿ 660 ಆಸನಗಳಿವೆ. ಚಿತ್ರಮಂದಿ ರಗಳಿಗೂ ಲಾಕ್ ಡೌನ್ ತೆರವಿನ ಮುಕ್ತಿ ಸಿಕ್ಕಿದರೂ ಪ್ರೇಕ್ಷಕರ ಸಂಖ್ಯೆ ಕಡಿಮೆಯೇ ಇದ್ದು, ಸ್ಟಾರ್ ನಟರ ಚಿತ್ರ ಬಿಡುಗಡೆಯಾದರೆ ಮಾತ್ರ ಚಿತ್ರಮಂದಿರ ಭರ್ತಿಯಾಗುವುದು.
ಪೊಗರು ಬಳಿಕ ರಾಬರ್ಟ್ ಎಂಟ್ರಿ: ಇದೇ ಫೆ.19 ರಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಚಿತ್ರ””ಪೊಗರು” ಗೌರಿಶಂಕರ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ದರ್ಶನ್ ಅಭಿನಯದ ರಾಬರ್ಟ್ ಸಹ ಬಿಡು ಗಡೆಯಾಗಲಿದ್ದು, ಚಿತ್ರಮಂದಿರ ಸಂಪೂ ರ್ಣ ಸ್ಯಾನಿಟೈಸ್‌ಗೊಂಡಿದೆ. ಥರ್ಮ ಲ್ ಸ್ಕ್ಯಾನಿಂಗ್, ಸಾನಿಟೈಸ್, ವ್ಯವಸ್ಥೆ ಹಾಗೂ ಪ್ರೇಕ್ಷಕರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಚಿತ್ರಮಂದಿರದ ಮಾಲೀಕರಾದ ಎಂ. ಸತೀಶ್ ಕುಮಾರ್ ತಿಳಿಸಿದ್ದಾರೆ.
ಸಿಬ್ಬಂದಿಗೆ ಆಸರೆ:
ಚಿತ್ರಮಂದಿರದ ಸಿಬ್ಬಂದಿ ಕಾದು ಕಾದು ಕೆಲವರು ಹಳ್ಳಿಯ ದಾರಿ ಹಿಡಿದು ವ್ಯವಸಾಯದ ಮೊರೆ ಹೋದರೆ, ಬೇರೆ ಯಾವ ಪರ್ಯಾಯ ವೂ ಇಲ್ಲದ ಸಿಬ್ಬಂದಿಗಳನ್ನು ಚಿತ್ರಮಂದಿರದಮಾಲೀಕರಾದ ಎಂ.ಸತೀಶ್ ಕುಮಾರ್ ಕೈ ಬಿಡಲಿಲ್ಲ. ಅವರ ಜೀವನಕ್ಕೆ ಆಸರೆಯಾಗಿ ನಿಂತರು.
ಚಿತ್ರಮಂದಿರ ಪ್ರೇಕ್ಷಕರಿಲ್ಲದೇ ಸೊರಗಲು ನಾಯಕರೇ ಕಾರಣ. ವರ್ಷಕ್ಕೆ ಎರಡು ಸಿನಿಮಾ ನೀಡುತ್ತಿದ್ದ ನಾಯಕರು 6 ಚಿತ್ರಗಳಿಗೆ ಮುಂಗಡ ಪಡೆದು 3 ವರ್ಷಕ್ಕೆ ಒಂದು ಚಿತ್ರ ನೀಡುತ್ತಿದ್ದಾರೆ. ಉದಾಹರಣೆಗೆ ರಾಕಿಂಗ್ ಸ್ಟಾರ್ ಯಶ್ ಚಿತ್ರ ವರ್ಷಕ್ಕೆ ಎರಡು ಬಂದರೆ ವರ್ಷವಿಡೀ ಚಿತ್ರಮಂದಿರ ತುಂಬಿರುತ್ತದೆ. ನಾಯಕರ ನಿಲುವಿನಿಂದ ಅಭಿಮಾನಿ ಬಳಗ ಮತ್ತು ಚಿತ್ರಮಂದಿರ ಸೊರಗುತ್ತಿದೆ.
-ಎಂ.ಸತೀಶ್ ಕುಮಾರ್, ವಿಜಯಪುರದ ಶ್ರೀ ಗೌರಿಶಂಕರ್, ಶ್ರೀ ಸಂಗಮೇಶ್ವರ ಚಿತ್ರಮಂದಿರದ ಮಾಲೀಕರು, ವಿಜಯಪುರ