Advertisement
ತುಮಕೂರು: ಕೋವಿಡ್ -19ನಿಂದಾಗಿ ಸ್ಥಗಿತ ಗೊಂಡಿದ್ದ ಸಿನಿಮಾ ಮಂದಿರಗಳಲ್ಲಿ ಶೋ ಆರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಳೆದ ಆರೇಳು ತಿಂಗಳಿನಿಂದ ಚಟುವಟಿಕೆ ಇಲ್ಲದೇ ಧೂಳಿಡಿದಿದ್ದ ಚಿತ್ರಮಂದಿರಗಳ ಸ್ವಚ್ಛತಾ ಕಾರ್ಯ ಆರಂಭಿಸಿ ಸಿನಿ ಮಂದಿರಗಳನ್ನು ಆರಂಭಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅ.15 ರ ನಂತರ ಚಿತ್ರ ಪ್ರದರ್ಶನ ಆರಂಭ ವಾದರೆ ಯಾವ ಹೊಸಚಿತ್ರ ಬಿಡುಗಡೆಯಾಗುತ್ತದೆ ಎನ್ನುವ ಕುತೂಹಲ ಚಿತ್ರ ಪ್ರೇಮಿಗಳಲ್ಲಿ ಮೂಡಿದೆ.
Related Articles
Advertisement
ಅದರಂತೆ ಚಿತ್ರಮಂದಿರಗಳಿಗೆ ಶೇ.50 ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಬೇಕು, ಇಬ್ಬರ ಮಧ್ಯ ಒಂದು ಸೀಟು ಖಾಲಿ ಬಿಟ್ಟು ಕುಳಿತು ಕೊಳ್ಳುವ ವ್ಯವಸ್ಥೆ ಮಾಡಬೇಕು, ಸಿನಿಮಾಕ್ಕೆ ಹೋಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಲೇ ಬೇಕು, ಜೊತೆಗೆ ಸ್ಯಾನಿಟೈಸರ್ ಮಾಡಿ ಕೊಳ್ಳಬೇಕು, ಟಿಕೆಟ್ ಖರೀದಿಗೆ ಡಿಜಿಟಲ್ ಪೇಮೆಂಟ್ ಮಾಡಿ ಜನಜಂಗುಳಿ ತಪ್ಪಿಸಬೇಕು. ಸಿನಿಮಾ ಮಂದಿರಗಳ ಎಸಿ ಟೆಂಪರೇಚರ್ 24 ರಿಂದ 30 ಡಿಗ್ರಿ ಸೆಲ್ಸಿಯಸ್ ನಿಗದಿ ಮಾಡಬೇಕು, ಚಿತ್ರಮಂದಿರಕ್ಕೆ ಎಲ್ಲರನ್ನೂ ಒಟ್ಟಿಗೆ ಬರುವಂತಿಲ್ಲ, ಸಿನಿಮಾ ಮುಗಿದ ಮೇಲೆ ಎಲ್ಲರನ್ನೂ ಒಟ್ಟಿಗೆ ಆಚೆ ಕಳುಹಿಸುವಂತಿಲ್ಲ, ಚಿತ್ರಮಂದಿರಗಳಲ್ಲಿ ಇಂಟರ್ವಲ್ ಸಮಯ ಹೆಚ್ಚು ಮಾಡಬೇಕು, ಚಿತ್ರಮಂದಿರದ ಒಳಗಡೆ ಪುಡ್ ಸ್ಟಾಲ್ ಹೆಚ್ಚು ಮಾಡಬೇಕು, ಚಿತ್ರಮಂದಿರಗಳಲ್ಲಿ ಇಡೀ ದಿನ ಟಿಕೆಟ್ ಮಾರಾಟ, ಅಡ್ವಾನ್ಸ್ ಬುಕ್ಕಿಂಗ್‌ಗೆ ಅವಕಾಶ ಮಾಡಬೇಕು. ಬುಕ್ಕಿಂಗ್ ಮಾಡುವವರ ದೂರವಾಣಿ ಸಂಖ್ಯೆ ಪಡೆಯಬೇಕು ಇದು ಸರ್ಕಾರದ ನಿಯಮದಲ್ಲಿ ಇರುವುದರಿಂದ ಚಿತ್ರಮಂದಿರದ ಮಾಲೀಕರು ತಮ್ಮ ಚಿತ್ರಮಂದಿರಗಳಲ್ಲಿ ಸರ್ಕಾರದಮಾರ್ಗಸೂಚಿಯನ್ನು ಚಾಚೂತಪ್ಪದೇ ಪಾಲಿಸಲು ಸನ್ನದ್ಧರಾಗಿದ್ದಾರೆ.
ಸ್ವಚ್ಛವಾಗುತ್ತಿವೆ ಚಿತ್ರ ಮಂದಿರಗಳು: ಅ.15 ರ ನಂತರ ಸಿನಿಮಾ ಮಂದಿರ ಆರಂಭ ವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಚಿತ್ರಮಂದಿರಗಳ ಸ್ವಚ್ಛತಾ ಕಾರ್ಯ ಭರ ದಿಂದ ನಡೆದಿದೆ. ಕಳೆದ ಏಳುತಿಂಗಳಿನಿಂದ ಪ್ರದರ್ಶನ ವಿಲ್ಲದೇ ಬಾಗಿಲು ಹಾಕಿದ್ದ ಚಿತ್ರ ಮಂದಿರಗಳು ಈಗ ಬಾಗಿಲು ಓಪನ್ ಮಾಡಿ ಸ್ವಚ್ಛತಾ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಧೂಳು ಹಿಡಿದಿದ್ದ ಚಿತ್ರ ಮಂದಿರದ ಸೀಟುಗಳನ್ನು ನೀಟಾಗಿ ತೊಳೆದು ಸ್ವಚ್ಛ ಮಾಡಿದ್ದಾರೆ. ಒಂದು ಸೀಟು ಬಿಟ್ಟು ಒಂದು ಸೀಟಿಗೆ ಕೂರಿಸಲು ಸಿದ್ಧ ಮಾಡಿ ಕೊಂಡಿದ್ದಾರೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಅಲ್ಲಲ್ಲಿ ಬ್ಯಾರಿ ಕೇಟ್ ಹಾಕಲು ಸಿದ್ಧತೆ ಮಾಡಿ ಕೊಂಡಿದ್ದಾರೆ.
ಚಿತ್ರ ಮಂದಿರಕ್ಕೆ ಗುಂಪು ಗುಂಪಾಗಿ ಬರ ಬಾರದು ಎನ್ನುವ ಉದ್ದೇಶ ದಿಂದ ಬಾಕ್ಸ್‌ಗಳನ್ನು ಮಾಡುತ್ತಿದ್ದು ಒಬ್ಬರು ಬಂದ ಮೇಲೆ ಒಬ್ಬರು ಬರುವಂತೆ ವ್ಯವಸ್ಥೆ ಮಾಡುತ್ತಿದ್ದಾರೆ. ಈವರೆಗೂ ಕೆಲಸವಿಲ್ಲದೇ ಇದ್ದ ಸಿನಿ ಮಂದಿರಗಳ ಸಿಬ್ಬಂದಿ ಸಂತಸ ಗೊಂಡಿದ್ದು ಸದ್ಯ ಸಿನಿಮಾ ಆರಂಭ ಆದರೆ ನಮ್ಮ ಜೀವನ ಉತ್ತಮವಾಗುತ್ತದೆ ಎನ್ನುವ ಆಶಾಭಾವನೆಯಲ್ಲಿ ಇದ್ದಾರೆ.
ಜಿಲ್ಲೆಯಲ್ಲಿ 28 ಚಿತ್ರಮಂದಿರಗಳು : ಜಿಲ್ಲೆಯಲ್ಲಿ28 ಚಿತ್ರಮಂದಿರಗಳಿದ್ದು ನಗರದಲ್ಲಿ ಆರು ಚಿತ್ರಮಂದಿರಗಳು ಸಿನಿಮಾ ಪ್ರದರ್ಶನಕ್ಕೆಸನ್ನದ್ಧವಾಗಿವೆ, ಸೋಮವಾರ ಚಿತ್ರಮಂದಿರಗಳ ಸ್ವತ್ಛತಾಕಾರ್ಯವನ್ನುಕಾರ್ಮಿಕರು ಮಾಡಿದ್ದು, ಎಲ್ಲಾ ಸೀಟುಗಳನ್ನುತೊಳೆಯಲಾಗಿದೆ. ಇಡೀ ಚಿತ್ರ ಮಂದಿರವನ್ನು ಸ್ಯಾನಿಟೈಸ್ ಮಾಡಲಾಗಿದೆ. ಇಬ್ಬರ ಮಧ್ಯ ಒಂದು ಸೀಟು ಬಿಡಲು ಸಿದ್ಧತೆ ಮಾಡಿ ಕೊಂಡಿದ್ದಾರೆ. ಒಟ್ಟಾರೆ ಇಡೀ ಜಿಲ್ಲೆಯಚಿತ್ರ ಮಂದಿರದ ಮಾಲೀಕರು ಚಿತ್ರಮಂದಿರಗಳನ್ನು ಪ್ರದರ್ಶನಕ್ಕೆ ಯೋಗ್ಯಗೊಳಿಸಿದ್ದಾರೆ.
ಚಿತ್ರಮಂದಿರವನ್ನೂ ಅ.15ರ ನಂತರ ಪ್ರಾರಂಭ ಮಾಡಲು ಸರ್ಕಾರ ತಿಳಿಸಿದೆ ನಮಗೆ ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಅನುಸರಿಸುತ್ತಿದ್ದೇವೆ.ಚಿತ್ರಮಂದಿರಗಳನ್ನು ಸ್ವಚ್ಛಮಾಡಿದ್ದೇವೆ, ಚಿತ್ರ ಪ್ರದರ್ಶನ ಅ.16 ರಿಂದ ಆರಂಭ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದೇವೆ, ನಮ್ಮ ಸಿಬ್ಬಂದಿ ಆರೋಗ್ಯವೂ ಮುಖ್ಯ ಅದಕ್ಕೂ ಮುಂಜಾಗ್ರತಾಕ್ರಮಕೈಗೊಂಡಿದ್ದೇವೆ. – ಭರತ್, ವ್ಯವಸ್ಥಾಪಕ ಕೃಷ್ಣ ಚಿತ್ರ ಮಂದಿರ, ತುಮಕೂರು.
ಸಿನಿಮಾ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಚಿತ್ರಮಂದಿರ ಸ್ವತ್ಛಮಾಡಿದ್ದೇವೆ. ಒಳ್ಳೆಯ ಸಿನಿಮಾ ಬಿಡುಗಡೆಯಾದರೆ ಅನುಕೂಲವಾಗುತ್ತದೆ. ಹಳೆ ಸಿನಿಮಾ ಹಾಕಿದರೆ ಜನ ಬರಲ್ಲ, ಹೊಸ ಸಿನಿಮಾ ಬಿಡುಗಡೆ ಬಗ್ಗೆ ಇನ್ನೂ ಯಾವುದೇ ಖಾತರಿ ಇಲ್ಲ,ಕನ್ನಡ ಬಿಟ್ಟರೆ ಬೇರೆ ಸಿನಿಮಾ ಹಾಕಲ್ಲ, ಈಗ ಟಾಕೀಸ್ ಚಿತ್ರ ಪ್ರದರ್ಶನಕ್ಕೆ ರೆಡಿ ಮಾಡಿದ್ದೇವೆ. ಒಂದು ಸೀಟು ಬಿಟ್ಟು ಒಂದು ಸೀಟಿಗೆ ಟೇಪ್ ಹಾಕಬೇಕು ಅಷ್ಟೇ ಉಳಿದಂತೆ ಎಲ್ಲವೂ ಸಿದ್ಧವಾಗಿದೆ. ಆದರೆ ಚಿತ್ರ ಬಿಡುಗಡೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. –ರುದ್ರೇಶ್, ಮಾಲೀಕರು, ಗಾಯತ್ರಿ ಚಿತ್ರಮಂದಿರ
–ಚಿ.ನಿ.ಪುರುಷೋತ್ತಮ್