ಬೆಂಗಳೂರು: ಸಿನಿಮಾವೊಂದರ ಸಕ್ಸಸ್‌ನ ಸಂಭ್ರಮಿ ಸಲು ಮುಂಜಾನೆವರೆಗೆ ಪಬ್‌ನಲ್ಲಿ ಅವಕಾಶ ಮಾಡಿ ಕೊಟ್ಟ ಆರೋಪದ ಮೇರೆಗೆ ಪಬ್‌ನ ಮಾಲೀಕ ಸೇರಿ ಇಬ್ಬರ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಶವಂತಪುರದ ಒರಾಯನ್ ಮಾಲ್ ಮುಂಭಾಗದಲ್ಲಿರುವ ಜೆಟ್‌ಲ್ಯಾಗ್ ಪಬ್‌ನ ಮಾಲೀಕರಾದ ಶಶಿರೇಖಾ ಜಗದೀಶ್ ಮತ್ತು ಪಬ್‌ನ ಮ್ಯಾನೇಜರ್ ಪ್ರಶಾಂತ್ ಎಂಬುವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಈ ಬೆನ್ನಲ್ಲೇ ಪಬ್‌ನ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ಕೊಡಲಾಗಿದೆ. ಇತ್ತೀಚೆಗೆ ಕನ್ನಡ ಸಿನಿಮಾವೊಂದು ಭಾರೀ ಯಶಸ್ಸು ಕಂಡಿತ್ತು. ಈ ಹಿನ್ನೆಲೆಯಲ್ಲಿ ಜೆಟ್‌ಲ್ಯಾಗ್ ಪಬ್‌ನಲ್ಲಿ ಜ.3 ರಂದು ಆ ಸಿನಿಮಾದ ಸ್ಟಾರ್ ನಟ, ನಟಿಯರು ಹಾಗೂ ಇತರೆ ಸ್ಟಾರ್ ಕಲಾವಿದರಿಗಾಗಿ ಪಾರ್ಟಿ ಆಯೋಜಿಸಲಾಗಿತ್ತು. ಅಂದು ರಾತ್ರಿ 8 ಗಂಟೆಗೆ ಆಯೋಜನೆಗೊಂಡ ಪಾರ್ಟಿ ಜ.4ರ ಮುಂಜಾನೆ 3.30ರವರೆಗೆ ನಡೆದಿತ್ತು. ಈ ವೇಳೆ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಮುಂಜಾನೆ ವರೆಗೆ ಮದ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕೂ ಮೊದಲು 12.45ರ ಸುಮಾರಿಗೆ ಬೀಟ್‌ನಲ್ಲಿದ್ದ ಪಿಎಸ್‌ಐ ಹಾಗೂ ಹೊಯ್ಸಳ ಸಿಬ್ಬಂದಿ ಪಬ್‌ಗ ಭೇಟಿ ನೀಡಿ ತಡರಾತ್ರಿ 1 ಗಂಟೆಗೆ ಪಬ್ ಮುಚ್ಚುವಂತೆ ಸೂಚಿಸಿ ತೆರಳಿದ್ದಾರೆ.
ಆದರೂ, ಮುಂಜಾನೆ 3.30ರವರೆಗೆ ಗ್ರಾಹಕರಿಗೆ ಸೇವೆ ಒದಗಿಸಲಾಗಿದೆ. ಈ ಮಾಹಿತಿ ಮೇರೆಗೆ ಪಿಎಸ್‌ಐ ಕೂಡಲೇ ಪಬ್‌ಗ ಭೇಟಿ ನೀಡಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮಾಲೀಕರು ಹಾಗೂ ಮ್ಯಾನೇಜರ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಕರ್ತವ್ಯಲೋಪ ಕಂಡು ಬಂದರೆ ಕ್ರಮ: ತಮ್ಮ ಸಿಬ್ಬಂದಿ ತಡರಾತ್ರಿಯೇ ಪಬ್‌ಗ ಭೇಟಿ ನೀಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ, ಮುಂಜಾನೆವರೆಗೆ ಪಬ್ ಕಾರ್ಯನಿರ್ವಹಿಸಿದೆ. ಹೀಗಾಗಿ, ಆ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದ ಬೀಟ್ ಸಿಬ್ಬಂದಿ ಹಾಗೂ ಪಿಎಸ್‌ಐ ವಿರುದ್ಧ ತನಿಖೆಗೆ ಸೂಚಿಸಲಾಗಿದೆ. ಒಂದು ವೇಳೆ ಕರ್ತವ್ಯ ಲೋಪ ಕಂಡು ಬಂದರೆ ಶಿಸ್ತು ಕ್ರಮಕೈಗೊಳ್ಳಲಾಗುತ್ತದೆ ಎಂದು ಉತ್ತರ ವಿಭಾಗ ಡಿಸಿಪಿ ಸೈದುಲ್ಲಾ ಅಡಾವತ್ ತಿಳಿಸಿದರು.
ಪ್ರಾಥಮಿಕ ಮಾಹಿತಿ ಪ್ರಕಾರ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಅಥವಾ ಮಾರಾಟ ಮಾಡಿರುವುದು ಕಂಡು ಬಂದಿಲ್ಲ. ಮದ್ಯ ಮಾರಾಟ ಮಾಡಲಾಗಿದೆ. ಜತೆಗೆ ಅವಧಿ ಮೀರಿ ಪಬ್ ಕಾರ್ಯಾಚರಣೆ ನಡೆಸಿದೆ ಎಂಬ ಆರೋಪದ ಮೇಲೆ ಕೇಸ್ ದಾಖಲಸಲಾಗಿದೆ.
●ಸೈದುಲ್ಲಾ ಅಡಾವತ್, ಉತ್ತರ ವಿಭಾಗ ಡಿಸಿಪಿ.