Advertisement

ಟಾಕೀಸ್‌ನೊಳಗೊಂದು ಥ್ರಿಲ್ಲಿಂಗ್‌ ಅನುಭವ!

04:00 PM Apr 17, 2021 | Team Udayavani |

ಒಂದು ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾ ನಿಮ್ಮನ್ನು ಚಿತ್ರಮಂದಿರದಲ್ಲಿ ಹಿಡಿದು ಕೂರಿಸಲು ಮುಖ್ಯವಾಗಿ ಬೇಕಾಗಿರೋದು ಏನು ಎಂದು ಕೇಳಿದರೆ, ಅದಕ್ಕೆ ಸಿಗುವ ಉತ್ತರ ಕ್ಷಣ ಕ್ಷಣದ ಕುತೂಹಲ ಹಾಗೂ ಪ್ರೇಕ್ಷಕರಊಹೆಗೆ ನಿಲುಕದಂತೆ ಸಾಗಬೇಕಾದ ಚಿತ್ರಕಥೆ. ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ವಾರ ತೆರೆಕಂಡಿರುವ ಚಿತ್ರ “ಕೃಷ್ಣ ಟಾಕೀಸ್‌’.

Advertisement

ಇತ್ತೀಚಿನ ದಿನಗಳಲ್ಲಿ ಪಕ್ಕಾ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರಗಳುಬಂದಿರೋದು ಕಡಿಮೆ. ಬಂದ ಕೆಲವೇ ಕೆಲವು ಚಿತ್ರಗಳು ಕೊನೆವರೆಗೂ ಸಸ್ಪೆನ್ಸ್‌ ಕಾಪಾಡಿಕೊಳ್ಳುವಲ್ಲೋ ಅಥವಾನಿರೂಪಣೆಯಲ್ಲೋ ಎಡವಿವೆ. ಆದರೆ, “ಕೃಷ್ಣ ಟಾಕೀಸ್‌’ ಚಿತ್ರ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರವಾಗಿ ಇಷ್ಟವಾಗುತ್ತದೆ. ಪ್ರೇಕ್ಷಕರಕುತೂಹಲವನ್ನು ಕ್ಷಣ ಕ್ಷಣಕ್ಕೂ ಹೆಚ್ಚಿಸುತ್ತಾ ಸಾಗುವ ಮೂಲಕಥ್ರಿಲ್ಲಿಂಗ್‌ ಅನುಭವ ನೀಡುತ್ತದೆ. ಆ ಮಟ್ಟಿಗೆ “ಕೃಷ್ಣ ಟಾಕೀಸ್‌’ಪ್ರಯತ್ನವನ್ನು ಮೆಚ್ಚಬಹುದು. ಈ ಚಿತ್ರದ ಮತ್ತೂಂದು ಪ್ಲಸ್‌ಎಂದರೆ ಪ್ರೇಕ್ಷಕರ ಲೆಕ್ಕಾಚಾರಕ್ಕೆ ನಿಲುಕದಂತೆ ಚಿತ್ರ ಸಾಗುವುದು.

ಸಿನಿಮಾ ನೋಡುಗ ಮುಂದೆ ಹೀಗೆಯೇ ಆಗುತ್ತದೆ ಎಂದುಊಹಿಸಿದರೆ ಅದು ಅಲ್ಲಿಗೆ ಅರ್ಧ ಕುತೂಹಲ ತಣಿದಂತೆ.ಆದರೆ, “ಕೃಷ್ಣ ಟಾಕೀಸ್‌’ ಚಿತ್ರದಲ್ಲಿ ಪ್ರೇಕ್ಷಕ ಒಂದು ಅಂದುಕೊಂಡರೆ, ತೆರೆಮೇಲೆ ಮತ್ತೂಂದು ನಡೆಯುತ್ತದೆ. ಆ ಮಟ್ಟಿಗೆ ನಿರ್ದೇಶಕ ವಿಜಯಾನಂದ್‌ ಚಿತ್ರಕಥೆಯಲ್ಲಿ “ಆಟ’ವಾಡಿದ್ದಾರೆ. ಮುಂದೇನಾಗಬಹುದು ಎಂಬ ಕುತೂಹಲವನ್ನು ಕ್ಲೈಮ್ಯಾಕ್ಸ್‌ವರೆಗೆ ಕಾಯ್ದುಕೊಂಡು ಬರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ ಈ ಚಿತ್ರದಲ್ಲಿ ತುಂಬಾ ಸನ್ನಿವೇಶಗಳು, ಘಟನೆಗಳು ಬರುತ್ತವೆ.

ಒಂದಕ್ಕೊಂದು ಲಿಂಕ್‌ ಇದ್ದಂತೆ ಕಾಣುತ್ತವೆ ಕೂಡಾ. ಅವೆಲ್ಲವನ್ನು ಯಾವುದೇಗೊಂದಲವಿಲ್ಲದಂತೆ ಜೋಡಿಸುವ ಮೂಲಕಚಿತ್ರಮಂದಿರದೊಳಗೊಂದು ಥ್ರಿಲ್ಲಿಂಗ್‌ಅನುಭವ ಸಿಗುವಂತೆ ಮಾಡಿದ್ದಾರೆ ನಿರ್ದೇಶಕರು. ಚಿತ್ರದ ಮೊದಲರ್ಧದಲ್ಲಿಹೆಚ್ಚು ಕಥೆ, ಕುತೂಹಲ ಬಿಟ್ಟುಕೊಡದೇ ಸಾಗುವ ನಿರ್ದೇಶಕರು, ದ್ವಿತೀಯಾರ್ಧದಲ್ಲಿ ಪ್ರೇಕ್ಷಕರನ್ನು ಕುತೂಹಲದಿಂದ ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಯಕ ಅಜೇಯ್‌ ರಾವ್‌ ಅವರಿಗೆ ಇದು ಹೊಸ ಬಗೆಯ ಸಿನಿಮಾ. ಲವರ್‌ಬಾಯ್‌ ಆಗಿಕಾಣಿಸಿಕೊಳ್ಳುತ್ತಿದ್ದ ಅಜೇಯ್‌ ಅವರಿಗೆ ಈ ಚಿತ್ರದಲ್ಲಿ ವಿಭಿನ್ನವಾದಪಾತ್ರ ಸಿಕ್ಕಿದೆ. ಅದನ್ನು ಅಷ್ಟೇ ಚೆನ್ನಾಗಿ ನಿಭಾಯಿಸಿದ್ದಾರೆ ಕೂಡಾ.ಪಾತ್ರದ ಗಂಭೀರತೆಗೆ ತಕ್ಕಂತಹ ಅವರ ಮ್ಯಾನರೀಸಂ ಇಷ್ಟವಾಗುತ್ತದೆ. ನಾಯಕಿಯರಾದ ಅಪೂರ್ವ, ಸಿಂಧು ಲೋಕನಾಥ್‌ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಪ್ರಮೋದ್‌ ಶೆಟ್ಟಿ,ಪ್ರಕಾಶ್‌ ತುಮ್ಮಿನಾಡು, ಚಿಕ್ಕಣ್ಣ, ಶೋಭರಾಜ್‌, ಯಶ್‌ ಶೆಟ್ಟಿಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಖಳನಾಗಿನಟಿಸಿರುವ ನಿರಂತ್‌ ಗಮನ ಸೆಳೆಯುವ ಮೂಲಕ ಭರವಸೆ ಮೂಡಿಸಿದ್ದಾರೆ. ಶ್ರೀಧರ್‌ ಸಂಭ್ರಮ್‌ ಅವರ ಸಂಗೀತ ಹಾಗೂ ಅಭಿಷೇಕ್‌ ಛಾಯಾಗ್ರಹಣ ಕಥೆಗೆ ಪೂರಕ.

Advertisement

 

ಚಿತ್ರ: ಕೃಷ್ಣ ಟಾಕೀಸ್‌

ರೇಟಿಂಗ್‌: ****

ನಿರ್ಮಾಣ: ಗೋವಿಂದ ರಾಜು ಆಲೂರು

ನಿರ್ದೇಶನ: ವಿಜಯಾನಂದ್‌

ತಾರಾಗಣ: ಅಜೇಯ್‌ ರಾವ್‌, ಅಪೂರ್ವ,

ಸಿಂಧು, ಚಿಕ್ಕಣ್ಣ, ನಿರಂತ್‌, ಯಶ್‌ ಶೆಟ್ಟಿ,

ಪ್ರಮೋದ್‌ ಶೆಟ್ಟಿ ಮತ್ತಿತರರು.

 

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next