Advertisement

ಆ.26ಕ್ಕೆ ಸಿನಿಮಾ ರಿಲೀಸ್‌; ಮಾಯಾ ನಗರಿಯಲ್ಲಿ ಡೊಳ್ಳು ಸದ್ದು

12:27 PM Aug 19, 2022 | Team Udayavani |

ಪವನ್‌ ಒಡೆಯರ್‌ ನಿರ್ಮಾಣದ “ಡೊಳ್ಳು’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಅದು “ಮಾಯಾನಗರಿ… ’ ಈ ಹಾಡನ್ನು ಇತ್ತೀಚೆಗೆ ನಟ ಧನಂಜಯ್‌ ಬಿಡುಗಡೆ ಮಾಡಿದ್ದಾರೆ.

Advertisement

ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ನಾಯಕನ ಕಣ್ಣಲ್ಲಿ ಮಯಾನಗರಿ ಸೊಬಗನ್ನು ತೆರೆದಿಡುವ ಈ ಹಾಡಿಗೆ ಪ್ರದ್ಯುಮ್ನ ನರಹಳ್ಳಿ ಸಾಹಿತ್ಯ ಬರೆದಿದ್ದು, ಆನಂತ್‌ ಸಂಗೀತವಿದೆ. ಈ ಹಾಡಿಗೆ ನಿರ್ದೇಶಕ ಸಾಗರ್‌ ಪುರಾಣಿಕ್‌ ಧ್ವನಿಯಾಗಿದ್ದಾರೆ. ಈ ಮೂಲಕ ಸಾಗರ್‌ ಗಾಯಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ.

ಜನಪದ ಕಲೆ ಡೊಳ್ಳಿನ ಸುತ್ತ ಸಾಗುವ ಚಿತ್ರಕ್ಕೆ ಸಾಗರ್‌ ಪುರಾಣಿಕ್‌ ನಿರ್ದೇಶನ ಮಾಡಿದ್ದು, ಒಡೆಯರ್‌ ಮೂವೀಸ್‌ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಕ್‌ ಮಹೇಶ್‌ ನಾಯಕನಾಗಿ ನಟಿಸಿದ್ದು, ನಿಧಿ ಹೆಗ್ಡೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಉಳಿದಂತೆ ಬಾಬು ಹಿರಣಯ್ಯ, ಚಂದ್ರ ಮಯೂರ್‌, ಶರತ್‌ ಮುಂತಾದ ಕಲಾವಿದರು ನಟಿಸಿದ್ದಾರೆ. ಶ್ರೀನಿಧಿ ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಅನಂತ್‌ ಸಂಗೀತ, ಅಭಿಲಾಷ್‌ ಕಲಾಥಿ ಕ್ಯಾಮೆರಾ ಚಿತ್ರಕ್ಕಿದೆ. ಚಿತ್ರ ಆ.26ರಂದು ತೆರೆ ಕಾಣುತ್ತಿದೆ. ಇನ್ನು, ಈ ಚಿತ್ರ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಹಲವು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನದಲ್ಲಿಕೊಂಡು ಮೆಚ್ಚುಗೆ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next