ಚೆನ್ನೈ: ಕಾಲಿವುಡ್ ಸಿನಿಮಾರಂಗದಲ್ಲಿ ಪ್ರೇಕ್ಷಕರ ಮನಗೆದ್ದ “ಮಾಮಣ್ಣನ್” ಥಿಯೇಟರ್ ಬಳಿಕ ಓಟಿಟಿಯಲ್ಲೂ ಗಮನ ಸೆಳೆಯುತ್ತಿದೆ. ಮಾರಿ ಸೆಲ್ವರಾಜ್ ನಿರ್ದೇಶನದ “ಮಾಮಣ್ಣನ್” ಒಂದು ಪೊಲಿಟಿಕಲ್ ಥ್ರಿಲ್ಲರ್ ಡ್ರಾಮಾ ಸಿನಿಮಾವಾಗಿದ್ದು, ಜೂ.29 ರಂದು ಥಿಯೇಟರ್ ನಲ್ಲಿ ರಿಲೀಸ್ ಆಗಿತ್ತು. ವಡಿವೇಲು ,ಉದಯನಿಧಿ ಸ್ಟಾಲಿನ್ ಹಾಗೂ ಫಾಹದ್ ಫಾಸಿಲ್ ಪ್ರಮುಖವಾಗಿ ಚಿತ್ರದಲ್ಲಿ ಗಮನ ಸೆಳೆದಿದ್ದರು.
ಮಾಲಿವುಡ್ ಸೇರಿದಂತೆ ಇತರ ಸಿನಿಮಾರಂಗದಲ್ಲಿ ಫಾಹದ್ ಅವರಿಗೆ ಪ್ರತ್ಯೇಕ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳಲ್ಲಿ ಅವರ ಅಭಿನಯವನ್ನು ನೋಡಿ ಮೆಚ್ಚದವರಿಲ್ಲ.
“ಮಾಮಣ್ಣನ್” ಕೆಳ ಜಾತಿಯ ಒಬ್ಬ ಎಂಎಲ್ ಎ(ವಡಿವೇಲು) ಅವರ ಮಗ ಅತಿವೀರನ್ (ಉದಯನಿಧಿ ಸ್ಟಾಲಿನ್) ಹಾಗೂ ಉನ್ನತ ಜಾತಿಯ ಒಬ್ಬ ರಗಡ್ ರಾಜಕಾರಣಿ ರತ್ನವೇಲು (ಫಾಹದ್ ಫಾಸಿಲ್) ನಡುವೆ ಸಿನಿಮಾದ ಕಥೆ ಸಾಗುತ್ತದೆ. ಒಬ್ಬ ಎಂಎಲ್ ಎ ಆಗಿಯೂ ಉನ್ನತ ಜಾತಿಯವರ ಮುಂದೆ ಕೈಕಟ್ಟಿ ತಲೆಬಾಗಿ ನಿಂತುಕೊಂಡೇ ಇರುವ ನಿಯಮದ ವಿರುದ್ಧ ರಾಜಕೀಯವಾಗಿಯೇ ಹೋರಾಟ ಮಾಡುವ ಕಥೆಯನ್ನು ಹೇಳಲಾಗಿದೆ.
ಇಡೀ ಸಿನಿಮಾ ಒಂದು ಹಳ್ಳಿಯ ಹಿಂದಿನ ಕಾಲದ ಕಥೆ, ಪ್ರಸ್ತುತ ರಾಜಕೀಯ ಪ್ರತಿಷ್ಠೆ ಹಾಗೂ ಜಾತಿ ವ್ಯವಸ್ಥೆಯ ಸ್ಥಿತಿಯನ್ನು ತೋರಿಸುತ್ತದೆ. ವಡಿವೇಲು, ಫಾಹದ್ ಹಾಗೂ ಉದಯನಿಧಿ ಸ್ಟಾಲಿನ್ ಈ ಮೂರು ಜನರ ಪಾತ್ರಗಳು ಪ್ರೇಕ್ಷಕರ ಮನಗೆಲ್ಲುತ್ತದೆ.
ಸಿನಿಮಾ ಮುಗಿದ ಬಳಿಕ ಪ್ರೇಕ್ಷಕರ ಮನದಲ್ಲಿ ಉಳಿಯುವುದವರಲ್ಲಿ ಫಾಹದ್ ಫಾಸಿಲ್ ಅವರ ರತ್ನವೇಲು ಪಾತ್ರವೂ ಒಂದು. ಅನೇಕರು ಫಾಹದ್ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನೆಟ್ಟಿಗರು ಅವರ ಪಾತ್ರವನ್ನು ಸೆಲೆಬ್ರೆಟ್ ಮಾಡಿದ್ದರು.
ತಮ್ಮ ಪಾತ್ರಕ್ಕೆ ಸಿಕ್ಕ ಅಭಿಮಾನಿಗಳ ಪ್ರೀತಿಗೆ ಫಾಹದ್ ಫಾಸಿಲ್ ಫೇಸ್ಬುಕ್ ಕವರ್ ಫೋಟೋವನ್ನು ಬದಲಾಯಿಸಿದ್ದಾರೆ. ರತ್ನವೇಲು ಪಾತ್ರದ ವಿವಿಧ ಫೋಟೋಗಳನ್ನು ಕಲೇಜ್ ಮಾಡಿಕೊಂಡು ಪೋಸ್ಟ್ ಮಾಡಿದ್ದಾರೆ.
ಜುಲೈ 27 ರಂದು ನೆಟ್ ಫ್ಲಿಕ್ಸ್ ನಲ್ಲಿಓಟಿಟಿಯಲ್ಲಿ ಸ್ಟ್ರೀಮ್ ಆಗಿದೆ.