Advertisement

ಲವ್‌ ಜೆಹಾದ್‌ ವಿರುದ್ಧ ಪಾಕ್‌ ನಲ್ಲಿ ಚಳವಳಿ

07:12 AM Mar 12, 2021 | Team Udayavani |

ಇಸ್ಲಾಮಾಬಾದ್‌: “ನಮ್ಮ ಮಗಳನ್ನು ರಕ್ಷಿಸಿ’, “ನಮ್ಮನ್ನು ಕಾಪಾಡಿ’- ಮಾ.8ರ ಮಹಿಳಾ ದಿನದಂದು ಇಂಥ ಫ‌ಲಕಗಳನ್ನು ಹಿಡಿದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಸಿಕ್ಖ್  ಜನಾಂಗದ ನೂರಾರು ಮಂದಿ ಪಾಕಿಸ್ಥಾನದ ಲಾಹೋರ್‌ ಪ್ರಸ್‌ಕ್ಲಬ್‌ ಮುಂದೆ ಜಮಾಯಿಸಿದ್ದರು. ಅವರೆಲ್ಲರ ಧ್ವನಿ ಒಂದೇ… “ಮದುವೆಗಾಗಿ ಲವ್‌ ಜೆಹಾದಿ ನಿಲ್ಲಿಸಿ’! ಇದು ಪಾಕ್‌ನಲ್ಲಿ ತೀವ್ರಗೊಂಡಿರುವ “ಸಹಿಷ್ಣುತೆಗಾಗಿ ಹೋರಾಟ’ದ (ರಾದಾರಿ ಟೆಹ್ರಿಕ್‌) ಒಂದು ಝಲಕ್‌. ಈ ಚಳವಳಿಗೆ ರಾಷ್ಟ್ರೀಯ ಶಾಂತಿ ಸಮಿತಿ ಸೇರಿದಂತೆ ಹತ್ತು ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ. “ಮುಸ್ಲಿಮ್‌ ಯುವಕರು, ಮುಸ್ಲಿಮೇತರ ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಮೋಸದಿಂದ ವಂಚಿಸಿ, ಮತಾಂತರ ಮಾಡುತ್ತಿದ್ದಾರೆ. ಪೋಷಕರ ಒಪ್ಪಿಗೆ ಪಡೆಯದೇ ವಿವಾಹಕ್ಕಾಗಿ ಇಂಥ ದುಷ್ಕೃತ್ಯಗಳು ನಡೆಯುತ್ತಿವೆ’ ಎಂದು ಚಳವಳಿ ನೇತಾರ ಸ್ಯಾಮ್ಸನ್‌ ಸಲಾಮತ್‌ ತಿಳಿಸಿದ್ದಾರೆ.

Advertisement

ಶೇ.54 ಹಿಂದೂ ಧರ್ಮೀಯರು!: ಲಾಹೋರ್‌ನ ಸಾಮಾಜಿಕ ನ್ಯಾಯ ಕೇಂದ್ರದ ಮಾಹಿತಿಯಂತೆ, 2013-2020ರ ನಡುವೆ 162 ಅಪ್ರಾಪ್ತೆಯರ ಮತಾಂತರ ಪ್ರಶ್ನಾರ್ಹವೆನ್ನಿಸಿದೆ. ಇದರಲ್ಲಿ ಶೇ.54 ಸಂತ್ರಸ್ತೆಯರು ಹಿಂದೂ, ಶೇ.44 ಮಂದಿ ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿದವರಾಗಿದ್ದಾರೆ.   ಸಂತ್ರಸ್ತೆಯರ ಪೈಕಿ ಶೇ.46 ಮಂದಿ ಅಪ್ರಾಪ್ತೆಯರು, ಅದರಲ್ಲೂ ಶೇ.33 ಮಂದಿ 11-15 ವಯಸ್ಸಿನವರಾಗಿದ್ದಾರೆ. ಶೇ.17 ಮಂದಿ ಮಾತ್ರವೇ 18 ವರ್ಷಕ್ಕಿಂತ  ಮೇಲ್ಪಟ್ಟವರಾಗಿದ್ದಾರೆ.

13 ವರ್ಷದ ಬಾಲಕಿ ಕಿಡ್ನ್ಯಾಪ್‌ :

ಅಪ್ಪನ ಕಣ್ಣೆದುರೇ 13 ವರ್ಷದ ಬಾಲಕಿಯನ್ನು ಅಪಹರಿಸಿ, ವಿವಾಹಕ್ಕಾಗಿ ಬಲವಂತದಿಂದ ಮತಾಂತರಿಸಿದ ಪ್ರಕರಣ ಮಹಿಳಾ ದಿನದಂದೇ ಪಾಕ್‌ನಲ್ಲಿ ಜರಗಿದೆ. ಸಿಂಧ್‌ ಪ್ರಾಂತ್ಯದ ಬಹಲ್ರಾನಿ ಬುಡಕಟ್ಟು ಜನಾಂಗದ ಬಾಲಕಿ ಕವಿತಾ ಬಾಯಿಯನ್ನು ಇಸ್ಲಾಂ ಮೌಲ್ವಿಯೊಬ್ಬ ಮತಾಂತರಿಸುತ್ತಿರುವ ದೃಶ್ಯದ ವೀಡಿಯೋ ವೈರಲ್‌ ಆಗಿದೆ. ಈಕೆಯನ್ನು ಅಪಹರಣಕಾರನಿಗೇ ಕೊಟ್ಟು ಮದುವೆ ಮಾಡಲಾಗಿದೆ. ಮಾ.8ರಂದು ಐವರು ಶಸ್ತ್ರಧಾರಿಗಳು, ಬಾಲಕಿ ಮನೆಗೆ ನುಗ್ಗಿ, ಅಪಹರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next