Advertisement
ಬುಧವಾರ ತಾಲೂಕಿನ ವೇಮಗಲ್ ಎಸ್‌ಎಫ್ ಸಿಎಸ್ ಆಶ್ರಯದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳ ಫಲಾನುಭವಿಗಳಿಗೆ ಸಾಲದ ಚೆಕ್‌ಗಳನ್ನು ವಿತರಿಸಿ ಮಾತನಾಡುತ್ತಿದ್ದರು.
Related Articles
Advertisement
ದಿವಾಳಿಯಾಗಿದ್ದ ಬ್ಯಾಂಕ್ ಕೇವಲ 3 ವರ್ಷಗಳಲ್ಲಿ ಈ ಸಾಧನೆ ಮಾಡಿರುವುದನ್ನು ಬೆರಗುಗಣ್ಣಿನಿಂದ ಗಮನಿಸುತ್ತಿದ್ದಾರೆ. ಸಾಲ ಪಡೆದವರು ಸಮರ್ಪಕ ಮರುಪಾವತಿ ಮೂಲಕ ಬ್ಯಾಂಕನ್ನು ರಕ್ಷಿಸಬೇಕೆಂದರು.
ಬ್ಯಾಂಕಿನ ಬದ್ಧತೆ ಶ್ಲಾಘನೀಯ: ಸಾಲಕ್ಕಾಗಿ ಅಲೆದಾಟ, ದಾಖಲೆಗಳಿಗಾಗಿ ಓಡಾಟ ರೈತರು, ಮಹಿಳೆಯರ ದುಸ್ಥಿತಿಗೆ ಸಾಕ್ಷಿ ಎಂದ ಅವರು, ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಿ ರೈತರ, ತಾಯಂದಿರ ಮನೆ ಬಾಗಿಲಿಗೇ ಸಾಲ ತಲುಪಿಸುವ ಬ್ಯಾಂಕಿನ ಬದ್ಧತೆ ಶ್ಲಾಘನೀಯ ಎಂದರು.
ಪ್ರತಿ ಕುಟುಂಬಕ್ಕೂ ಸಾಲದ ನೆರವು: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, 15ವರ್ಷಗಳ ನಂತರ ಜಿಲ್ಲೆಯಲ್ಲಿ ಮಳೆಯಾಗಿದೆ. ಎಲ್ಲಿ ನೋಡಿದರೂ ಹಸಿರೇ ಕಾಣುತ್ತಿದೆ. ಆದರೆ, ಈ ಹಸಿರನ್ನು ಬೆಳೆಯಾಗಿಸಲು ರೈತರಿಗೆ ಹಣದ ತೊಂದರೆ ಇದೆ. ರೈತರು, ಮಹಿಳೆಯರು ಕೃಷಿ ಚಟುವಟಿಕೆ, ಹೈನುಗಾರಿಕೆಗೆ ಬಡ್ಡಿದಾರರ ಶೋಷಣೆಗೆ ಒಳಗಾಗಬಾರದು ಎಂಬುದೇ ಬ್ಯಾಂಕಿನ ಧ್ಯೇಯವಾಗಿದೆ. ಎರಡೂ ಜಿಲ್ಲೆಗಳ ಪ್ರತಿ ಕುಟುಂಬಕ್ಕೂ ಸಾಲದ ನೆರವು ಸಿಗುವಂತೆ ಮಾಡುವುದೇ ನಮ್ಮ ಆಡಳಿತ ಮಂಡಳಿ ಮುಖ್ಯ ಗುರಿ ಎಂದು ತಿಳಿಸಿದರು. ಬದ್ಧತೆಯಿಂದ ಕೆಲಸ ಮಾಡಿ: ಎಸ್‌ಎಫ್ಸಿಎಸ್‌ನ ಕಾರ್ಯದರ್ಶಿ ಮತ್ತು ಸಿಬ್ಬಂದಿ ಪ್ರಾಮಾಣಿಕತೆ ಯಿಂದ ಕಾರ್ಯನಿರ್ವಹಿಸಿ, ಸೊಸೈಟಿ ಎಂದರೆ ಪಡಿತರ ವ್ಯವಸ್ಥೆಗೆ ಸೀಮಿತವೆಂಬ ಭಾವನೆ ಹೋಗಲಾಡಿಸಿ, ಸಾಲ ನೀಡುವ ಮತ್ತು ವಸೂಲಿಗೆ ಬದ್ಧತೆಯಿಂದ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು. ಬ್ಯಾಂಕಿನ ನಿರ್ದೇಶಕ ನಾಗನಾಳ ಸೋಮಣ್ಣ, ವೇಮಗಲ್ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಿದ್ದು, ಮಹಿಳಾ ಸಂಘಗಳು, ರೈತರಿಗೆ ಹೆಚ್ಚಿನ ಸಾಲದ ನೆರವು ನೀಡುವ ಮೂಲಕ ಆರ್ಥಿಕ ವಹಿವಾಟು ಹೆಚ್ಚಿಸಿಕೊಳ್ಳಬೇಕು. ಕೇವಲ ಪಡಿತರ ವಿತರಣೆಗೆ ಸೀಮಿತವಾಗಆರದೆಂದು ಕಿವಿಮಾತು ಹೇಳಿದರು. ನಿರ್ದೇಶಕ ಕೆ.ವಿ.ದಯಾನಂದ್, ಸಹಕಾರ ವ್ಯವಸ್ಥೆ ಗಟ್ಟಿಗೊಳ್ಳಲು ಎರಡೂ ಜಿಲ್ಲೆಗಳ ಎಲ್ಲಾ ಎಸ್‌ಎಫ್ ಸಿಎಸ್‌ಗಳೂ ಡಿಸಿಸಿ ಬ್ಯಾಂಕ್‌ಗೆ ಸಹಕಾರ ನೀಡಬೇಕು, ಕಾರ್ಯದರ್ಶಿಗಳಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಪ್ರಾಮಾಣಿಕತೆ, ಪಾರದರ್ಶಕತೆಗೆ ಒತ್ತು ನೀಡಬೇಕೆಂದರು. ನಿರ್ದೇಶಕ ಹೊಳಲಿ ಪ್ರಕಾಶ್, ನಾವು ಸಾಲ ನೀಡಲು ಸಿದ್ದರಿದ್ದೇವೆ, ಅಷ್ಟೇ ಬದ್ಧತೆಯಿಂದ ಮಹಿಳೆಯರು ಸಾಲ ಮರುಪಾವತಿ ಮಾಡಿ ನಂಬಿಗೆ ಉಳಿಸಿಕೊಳ್ಳಬೇಕೆಂದು ಕೋರಿದರು. ಎಸ್‌ಎಫ್ಸಿಎಸ್ ಅಧ್ಯಕ್ಷೆ ಶೈಲಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಮೂರಾಂಡಹಳ್ಳಿ ಗೋಪಾಲ್, ಟಿಎಪಿಸಿಎಂಎಸ್ ನಿರ್ದೇಶಕ ನಾಗೇಶ್, ಸೊಸೈಟಿ ಉಪಾಧ್ಯಕ್ಷ ವೆಂಕಟರಾಯಪ್ಪ, ನಿರ್ದೇಶಕರಾದ ಶಂಕರಪ್ಪ, ವೆಂಕಟರಾಂ, ಮಂಜುನಾಥ್, ಕಾರ್ಯದರ್ಶಿ ಶಂಕರಪ್ಪಮತ್ತಿತರರು ಉಪಸ್ಥಿತರಿದ್ದರು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸಾಧನೆ ಇನ್ನೂ ಕಡಿಮೆಯೇ. ನಮ್ಮ ಗುರಿ ಇನ್ನೂ ಎತ್ತರದಲ್ಲಿದೆ. ಇದನ್ನು
ಸಾಕಾರಗೊಳಿಸಲು ಇಡೀ ಆಡಳಿತ ಮಂಡಳಿ ಪರಿಶ್ರಮದಿಂದ ಕೆಲಸ ಮಾಡುತ್ತಿದೆ. ಪ್ರತಿ ಮಹಿಳೆ ಹಾಗೂ ರೈತರಿಗೆ ನೆರವಾದಾಗ ಮಾತ್ರ ಸಾರ್ಥಕತೆ ಕಾಣುತ್ತೇವೆ.
●ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷರು, ಡಿಸಿಸಿ ಬ್ಯಾಂಕ್