Advertisement

ಕಾಯ್ದೆ ರದ್ದತಿಗೆ ಆಗ್ರಹಿಸಿ ಚಳವಳಿ: ನಾಗೇಂದ್ರ

02:32 PM Feb 15, 2022 | Team Udayavani |

ಸಿಂಧನೂರು: ಜನ ವಿರೋಧಿ ತಿದ್ದುಪಡಿ ಕಾಯಿದೆಗಳನ್ನು ವಾಪಸ್‌ ಪಡೆಯಲು ಒತ್ತಾಯಿಸಿ ಮುಂದಿನ ಬಜೆಟ್‌ ಅಧಿವೇಶನ ಸಂದರ್ಭ ಬೆಂಗಳೂರಿನಲ್ಲಿ ಪರ್ಯಾಯ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಾಪುರ ನಾಗೇಂದ್ರ ಹೇಳಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಎಂಎಸ್‌ಪಿ ಖಾತ್ರಿ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರೂ ಕೇಂದ್ರ ಸರಕಾರ ಸ್ಪಂದಿಸಿಲ್ಲ. ಆದರೆ. ಪರೋಕ್ಷವಾಗಿ ಹಿಂಬಾಗಿಲಿನ ಮೂಲಕ ಕೃಷಿಯನ್ನು ಕಾರ್ಪೂರೇಟ್‌ ಶಕ್ತಿಗಳ ಕೈಗೆ ಒಪ್ಪಿಸುವ ತಿದ್ದುಪಡಿ ಕಾಯಿದೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಸಂಬಂಧಿತ ಯೋಜನೆಯಲ್ಲಿ ಬೃಹತ್‌ ಕಂಪನಿಗಳನ್ನು ಲಿಂಕ್‌ ಮಾಡಲಾಗುತ್ತಿದೆ. ಈ ಹಿಂದೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ಅವರಿಗೆ ಜನ ಬುದ್ಧಿ ಕಲಿಸಿದ್ದರು. ಎರಡು ಕ್ಷೇತ್ರದಲ್ಲಿ ಅವರನ್ನು ಸೋಲಿಸಿದ್ದರು. ನರೇಂದ್ರ ಮೋದಿ ಅವರಿಗೂ ಜನ ಬುದ್ಧಿ ಕಲಿಸುವ ದಿನ ದೂರವಿಲ್ಲ ಎಂದರು.

ಕಾರ್ಯಾಧ್ಯಕ್ಷ ಜಿ.ಎಂ. ವೀರಸಂಗಯ್ಯ, ಪ್ರಧಾನ ಕಾರ್ಯದರ್ಶಿ ಶಂಕಪ್ಪ ಮಾತನಾಡಿದರು. ಸಂಘದ ಮುಖಂಡರಾದ ನಾಗಪ್ಪ ಹುಂಡಿ, ಗೋಣಿ ಬಸಪ್ಪ, ರವಿಕುಮಾರ್‌, ಸುರೇಶ್‌ ಬಾಬು, ಶರಣಪ್ಪ.ಎ. ರೆಡಿ, ಮಲ್ಕನಗೌಡ, ಬಸನಗೌಡ ಪಾಟೀಲ್‌, ಜೆ.ಸಿದ್ದರಾಮನಗೌಡ, ರವಿಕುಮಾರ್‌ ಪೂಣಚ್ಚ ಸೇರಿದಂತೆ ಅನಕೇರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next