ಮಲ್ಪೆ: ಇಲ್ಲಿಯ ಹೂಡೆ ಸಾಲಿಹತ್ ಕಾಲೇಜಿನಲ್ಲಿ ಅಪರೂಪದ ಇಲಿಯೊಂದು ಪತ್ತೆಯಾಗಿದೆ. ಕಾಲೇಜಿನ ಕೊಠಡಿಯೊಳಗೆ ಆಚೀಚೆ ಓಡಾಡುತ್ತಿದ್ದ ಮೂಷಿಕನನ್ನು ಕಂಡು ಶಿಕ್ಷಕರು, ಮಕ್ಕಳು ಅಚ್ಚರಿಗೊಂಡರು.
ಪ್ರಸ್ತುತ ಕಾಲೇಜಿನ ಕೊಠಡಿಯೊಂದರಲ್ಲಿ ಈ ವಿಶೇಷ ಇಲಿ ಎಲ್ಲರ ಆಕರ್ಷಣೀಯ ಕೇಂದ್ರಬಿಂದುವಾಗಿದೆ.
ಅಪರೂಪದ ಹಳದಿ, ಬಿಳಿ ಬಣ್ಣದಲ್ಲಿರುವ ಹೈಬ್ರೀಡ್ ತಳಿಯಂತಿರುವ ಇಲಿಯು ಸುತ್ತಮುತ್ತಲಿನ ತಾನಿದ್ದ ಸ್ಥಳದಿಂದ ತಪ್ಪಿಸಿಕೊಂಡು ಶಾಲೆಯ ಕೊಠಡಿಗೆ ಬಂದಿರುವ ಸಾಧ್ಯತೆ ಇದೆ. ಇದೊಂದು (ಡೊಮೆಸ್ಟಿಕೇಟೆಡ್) ಸಾಕು ತಳಿಯಾಗಿದ್ದು, ವನ್ಯಜೀವಿಯಲ್ಲ.
ಬೆಂಗಳೂರಿನಂತ ಮಹಾನಗರದ ಪೆಟ್‌ಶಾಪ್ಸ್ ಗಳಲ್ಲಿ ಪಕ್ಷಿ, ಬೆಕ್ಕು, ಗಿನ್ನಿ ಪಿಗ್ಸ್ ಮತ್ತು ಈ ರೀತಿಯ ತಳಿಗಳನ್ನು ಸಾಕಾಣಿಕೆ ದೃಷ್ಟಿಯಿಂದ ಮಾರಲಾಗುತ್ತದೆ. ಅದೇ ರೀತಿ ತಳಿ ಇದಾಗಿರಬಹುದು ಎಂದು ಪ್ರಾಣಿ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.