ಮೂಡಿಗೆರೆ : ತಾಲೂಕಿನ ಮರ್ಕಲ್ ಗ್ರಾಮದಲ್ಲಿ ಯುವಕನೊಬ್ಬ ತಮ್ಮ ಕೃಷಿ ಪ್ರದೇಶದ ಬೆಳೆಗಳಿಗೆ ಇಲಿಗಳಿಂದ ಆಗುತ್ತಿರುವ ಬೆಳೆಹಾನಿಯಿಂದ ಬೇಸತ್ತು ಗಣೇಶನಿಗೆ ಇಲಿ ಅರ್ಪಿಸಿ ಬೆಳೆಹಾನಿ ತಪ್ಪಿಸುವಂತೆ ಬೇಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಗಣೇಶನ ಹಬ್ಬವಾದ ಶುಕ್ರವಾರ ಮರ್ಕಲ್ ಗ್ರಾಮದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು ಮರ್ಕಲ್ ಗ್ರಾಮದ ಯುವಕ ನಿತಿನ್ ಇಲಿಗಳಿಂದ ಬೆಳೆಗಳನ್ನು ರಕ್ಷಿಸುವಂತೆ ಇಲಿಯೊಂದನ್ನು ಹಿಡಿದು ತಂದು ಗಣೇಶನಿಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದಾನೆ.
ಇಲಿಯನ್ನು ಗಣೇಶನ ವಿಗ್ರಹದ ಬಳಿ ಬಿಡುತ್ತಿದ್ದಂತೆ ಇಲಿ ಬದುಕಿದೆ ಬಡ ಜೀವ ಎಂದು ಕಾಲಿಗೆ ಬುದ್ದಿ ಹೇಳಿದೆ.
ಇದನ್ನೂ ಓದಿ :ಕೋವಿಡ್ ಭೀತಿ ಹಿನ್ನೆಲೆ : ಭಾರತ – ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ರದ್ದು