Advertisement

ಮೌಂಟೆನ್‌ ಬೈಕ್‌ ಸೈಕ್ಲಿಂಗ್ ಗೆ ಸಿದ್ಧತೆ

07:36 PM Feb 06, 2021 | Team Udayavani |

ಗದಗ: 17ನೇ ರಾಷ್ಟ್ರೀಯ ಸೀನಿಯರ್‌ ಜ್ಯೂನಿಯರ್‌ ಮತ್ತು ಸಬ್‌ ಜ್ಯೂನಿಯರ್‌ ಮೌಂಟೆನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌  ಸ್ಪರ್ಧೆಯನ್ನು ಫೆ. 18ರಿಂದ 21ರ ವರೆಗೆ ಸಮೀಪದ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿರುವ ಮೌಂಟೆನ್‌ ಬೈಕ್‌ ಟ್ರ್ಯಾಕ್‌ನಲ್ಲಿ ಆಯೋಜಿಸಲಾಗಿದೆ.

Advertisement

ಕಾರ್ಯಕ್ರಮ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಸೂಚಿಸಿದರು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜರುಗಿದ 17ನೇ ರಾಷ್ಟ್ರೀಯ ಸೀನಿಯರ್‌, ಜ್ಯೂನಿಯರ್‌ ಮತ್ತು ಸಬ್‌ ಜ್ಯೂನಿಯರ್‌ ಮೌಂಟೆನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ ಪೂರ್ವಬಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಯಶಸ್ಸಿಗೆ ಸ್ವಾಗತ ಸಮಿತಿ, ಕಾರ್ಯಕ್ರಮ ಸಂಘಟನಾ ಸಮಿತಿ, ಹಣಕಾಸು ಸಮಿತಿ, ಪ್ರಚಾರ ಸಮಿತಿ ಸೇರಿದಂತೆ ಒಟ್ಟು 13 ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳು ಸವಹಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಹೊರ ರಾಜ್ಯಗಳಿಂದ 600 ಸ್ಪರ್ಧಿಗಳು ಆಗಮಿಸುವುದರಿಂದ ಸ್ಪರ್ಧಿಗಳಿಗೆ ಊಟ, ವಸತಿ, ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ನಿಗಾ ವಹಿಸಬೇಕು. ಕೋವಿಡ್‌-19 ಹಿನ್ನೆಲೆಯಲ್ಲಿ ವಸತಿ ಸ್ಥಳಗಳು, ಸ್ನಾನದ ಗೃಹ, ಶೌಚಾಲಯಗಳು ಸೂಕ್ತ ರೀತಿಯಲ್ಲಿ ಇರುವಂತೆ ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಡಾ| ಆನಂದ ಕೆ.ಮಾತನಾಡಿ, ಹೊರ ರಾಜ್ಯಗಳಿಂದ ಬರುವ ಸ್ಪರ್ಧಿಗಳಿಗೆ ಕುಂದುಕೊರತೆ ಉಂಟಾಗದಂತೆ ಮೂಲ ಸೌಕರ್ಯಗಳಾದ ಆಹಾರ, ವಸತಿ,ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸುವ್ಯವಸ್ಥಿತವಾಗಿ ಕಲ್ಪಿಸಿಕೊಡಬೇಕು ಎಂದರು.

Advertisement

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಜಿ. ವಿಶ್ವನಾಥ ಸಭೆಗೆ ಕ್ರೀಡಾ ಸ್ಪರ್ಧೆಗಳ ವಿವರದ ಮಾಹಿತಿ ನೀಡಿ, ಪುರುಷರ ವಿಭಾಗದಲ್ಲಿ 19 ವರ್ಷದೊಳಗಿನವರಿಗೆ 30 ಕಿ.ಮೀ, 40 ಕಿ.ಮೀ. ಇಳಿಜಾರು ಪ್ರದೇಶ ಮತ್ತು ಮಹಿಳಾ ವಿಭಾಗದಲ್ಲಿ 19  ವರ್ಷದೊಳಗಿನವರಿಗೆ 20 ಕಿ.ಮೀ,40 ಕಿ.ಮೀ. ಹಾಗೂ ಪುರುಷ ಮತ್ತು ಮಹಿಳೆಯರ ಮಿಶ್ರಿತ ರಿಲೇ ವಿಭಾಗದಲ್ಲಿ ಎರಡು ಪುರಷ ಮತ್ತು ಎರಡು ಮಹಿಳಾ ಸ್ಪರ್ಧಿಗಳನ್ನು ಬಿಡಲಾಗುವುದು. ಪುರಷರ ಜ್ಯೂನಿಯರ್‌ ವಿಭಾಗದಲ್ಲಿ (2002-03 ರೊಳಗೆ ಜನಿಸಿದ್ದು) 17ರಿಂದ 18 ವರ್ಷದೊಳಗಿನವರಿಗೆ 20 ಕಿ.ಮೀ ಮತ್ತು 30 ಕಿಮೀ. ಮಹಿಳಾ ಜ್ಯೂನಿಯರ್‌ ವಿಭಾಗದಲ್ಲಿ (2002-03 ರೊಳಗೆ ಜನಿಸಿದ್ದು) 17ರಿಂದ 18 ವರ್ಷದೊಳಗಿನವರಿಗೆ 15 ಕಿಮೀ, 20 ಕಿಮೀ ಮತ್ತು ರಿಲೇ ಪುರುಷ ಮತ್ತು ಮಹಿಳೆ ಮಿಶ್ರ ವಿಭಾಗದ ಸ್ಪರ್ಧೆಯಲ್ಲಿ ಆಯೋಜಿಸಿದೆ.

ಇದನ್ನೂ ಓದಿ : ಹನ್ನೊಂದು ತಿಂಗಳ ನಂತರ ಚಲನಚಿತ್ರ ಮಂದಿರ ಓಪನ್‌

ಸಬ್‌ ಜ್ಯೂನಿಯರ್‌ ಪುರುಷರ ವಿಭಾಗದಲ್ಲಿ(2004-05 ರೊಳಗೆ ಜನಿಸಿದ್ದು)15ರಿಂದ 16 ವರ್ಷದೊಳಗಿನವರಿಗೆ 10 ಕಿಮೀ, 20  .ಮೀ ಮತ್ತು ಸಬ್‌ ಜ್ಯೂನಿಯರ್‌ ಮಹಿಳಾ ವಿಭಾಗದಲ್ಲಿ  (2004-05 ರೊಳಗೆ ಜನಿಸಿದ್ದು) 15ರಿಂದ 16 ವರ್ಷದೊಳಗಿನವರಿಗೆ 10 ಕಿ.ಮೀ,15 ಕಿ.ಮೀ. ಬಾಲಕರ ವಿಭಾಗದಲ್ಲಿ (2006-08 ರೊಳಗೆ ಜನಿಸಿದ್ದು) 14 ವರ್ಷದೊಳಗಿನವರಿಗೆ 10 ಕಿ.ಮೀ, 15 ಕಿ.ಮೀ,  ಬಾಲಕಿಯರ ವಿಭಾಗದಲ್ಲಿ (2006-08 ರೊಳಗೆ ಜನಿಸಿದ್ದು) 14  ವರ್ಷದೊಳಗಿನವರಿಗೆ 10 ಕಿ.ಮೀ, 15 ಕಿಮೀ. ಸ್ಪರ್ಧೆಗಳು ಜರುಗಲಿವೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್‌ ಎ.,  ರಾಜ್ಯ ಸೈಕ್ಲಿಂಗ್‌ ಸಂಸ್ಥೆ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next