ಮಯೂರಿ, ಬಾಲಾಜಿ ಶರ್ಮಾ ಅಭಿನಯದ ‘ಮೌನಂ’ ಚಿತ್ರ ಇದೇ ತಿಂಗಳ 21ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಚಿತ್ರದ ಒಂದೊಂದೇ ಹಾಡುಗಳ ಹಂಗಾಮ ಶುರುವಿಟ್ಟುಕೊಂಡಿರೋ ಈ ಚಿತ್ರತಂಡ ಮತ್ತೊಂದು ಮೋಸ್ಟ್ ಎಕ್ಸ್ಪೆಕ್ಟೆಡ್ ಸಾಂಗ್ವೊಂದನ್ನು ಗಾನಪ್ರಿಯರಿಗೆ ಉಣಬಡಿಸಿದೆ.
ಅಪ್ಪ-ಮಗನ ಮಧುರ ಬಾಂದವ್ಯ ಇರೋ ‘ಕಂದ ನಿನ್ನ ಕನಸಿಗೆ’ ವಿಡಿಯೋ ಸಾಂಗ್ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಪಡೆದುಕೊಂಡಿದೆ. ಆಕಾಶ್ ಎಸ್ ಬರೆದಿರೋ ಅರ್ಥಗರ್ಭಿತ ಸಾಹಿತ್ಯಕ್ಕೆ ಸ್ವರ ಮಾಂತ್ರಿಕ ವಿಜಯ್ ಪ್ರಕಾಶ್ ಜೀವ ತುಂಬಿದ್ದು, ಆರವ್ ರಿಶಿಕ್ ಮಧುರ ಸಂಗೀತ ಮುದ ನೀಡುತ್ತಿದೆ.
ಈ ಹಾಡು ಟ್ರೆಂಡ್ ಸೃಷ್ಟಿಸಿದ್ದು ವರ್ಷದ ಹಿಟ್ ಸಾಂಗ್ಆ ಗೋದ್ರಲ್ಲಿ ಡೌಟೇ ಇಲ್ಲ. ‘ಮೌನಂ’ ಚಿತ್ರ ಫೆಬ್ರವರಿ 21ಕ್ಕೆ ಥ್ರಿಯೇಟರ್ ಅಂಗಳಕ್ಕೆ ಬರಲು ರೆಡಿಯಾಗಿದೆ. ನಟಿ ಮಯೂರಿ ಈ ಚಿತ್ರದಲ್ಲಿ ಎರಡು ಶೇಡ್ನಲ್ಲಿ ಬಣ್ಣಹಚ್ಚಿದ್ದು, ರಗಡ್ ಹಾಗೂ ಹೋಂಮ್ಲಿ ಪಾತ್ರದಲ್ಲಿ ಮಿಂಚಿದ್ದಾರೆ. ಹಿರಿಯ ನಟ ಅವಿನಾಶ್ ಆರು ಶೇಡ್ ನಲ್ಲಿ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಇವರಿಬ್ಬರ ಪಾತ್ರಗಳು ಸಖತ್ ಕ್ಯೂರಿಯಾಟಿಸಿ ಬಿಲ್ಡ್ ಮಾಡಿವೆ. ಕಥೆ, ಚಿತ್ರಕತೆ, ಸಂಭಾಷಣೆ ಜವಾಬ್ದಾರಿಯನ್ನು ನವ ನಿರ್ದೇಶಕ ರಾಜ್ ಪಂಡಿತ್ ಹೊತ್ತುಕೊಂಡಿದ್ದಾರೆ. ಶ್ರೀಹರಿ ಚಿತ್ರಕ್ಕೆ ಬಂಡವಾಳ ಹಾಕಿದ್ದು, ರಿತೇಶ್, ನಯನ, ಕೆಂಪೇಗೌಡ, ಹನುಮಂತೇಗೌಡ, ಚಿತ್ರದ ತಾರಾಬಳಗದಲ್ಲಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಇರೋ ‘ಮೌನಂ’ ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಚಿತ್ರ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ ಸಿನಿರಸಿಕರು.