Advertisement

ಬಾನುಲಿ ಕೇಂದ್ರಕ್ಕಾಗಿ ಸೈಕಲ್‌ ಜಾಥಾ

12:39 PM Mar 25, 2017 | |

ದಾವಣಗೆರೆ: ನಗರದಲ್ಲಿ ಬಾನುಲಿ ಕೇಂದ್ರ ಆರಂಭಿಸಲು ಶುಕ್ರವಾರ ಕರ್ನಾಟಕ ಜನಮನ ವೇದಿಕೆ ಕಾರ್ಯಕರ್ತರು ನಗರದಲ್ಲಿ ಸೈಕಲ್‌ ಜಾಥಾ ನಡೆಸಿ, ಒತ್ತಾಯಿಸಿದ್ದಾರೆ. ಶಿವಪ್ಪಯ್ಯ ವೃತ್ತದಿಂದ ಜಾಥ ಆರಂಭಿಸಿದ ಕಾರ್ಯಕರ್ತರು, ಸಂಸದರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. 

Advertisement

ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್‌, ದಾವಣಗೆರೆ ಕಲೆ, ಸಾಹಿತ್ಯ, ಸಾಂಸ್ಕೃತಿಕ, ವಾಣಿಜ್ಯ, ವಿದ್ಯಾನಗರಿ ಎಂಬುದಾಗಿ ಹೆಸರುವಾಸಿಯಾಗಿದೆ. ಇದೀಗ ಸ್ಮಾರ್ಟ್‌ ಸಿಟಿ, ಅಮೃತ ನಗರ ಯೋಜನೆಗೂ ಆಯ್ಕೆಯಾಗಿದೆ. ಇಂತಹ ನಗರದಲ್ಲಿ ಬಾನುಲಿ ಇಲ್ಲದೇ ಇರುವುದು ನಿಜಕ್ಕೂ ಬೇಸರ ಎಂದರು. 

ಹಾಲಿ ಭದ್ರಾವತಿ, ಚಿತ್ರದುರ್ಗ ಕೇಂದ್ರದಿಂದ ಪ್ರಸಾರವಾಗುವ ಕಾರ್ಯಕ್ರಮಗಳನ್ನೇ ಆಲಿಸಬೇಕಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಜಿ.ಎಂ. ಸಿದ್ದೇಶ್ವರ್‌ ಗೆದ್ದ ನಂತರ ಬಾನುಲಿ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದರು. ಆದರೆ, ಚುನಾವಣೆ ಮುಗಿದು ಮೂರು ವರ್ಷ ಕಳೆಯುತ್ತಾ ಬಂದರೂ ಇದುವರೆಗೆ ಬಾನುಲಿ ಕೇಂದ್ರ ಆರಂಭವಾಗಿಲ್ಲ.

ಇನ್ನಾದರೂ ಬಾನುಲಿ ಆರಂಭಕ್ಕೆ ಕ್ರಮ ವಹಿಸಿ ಎಂದು ಅವರು ಹೇಳಿದರು. ವೇದಿಕೆಯ ಉಪಾಧ್ಯಕ್ಷ ವಿಜಯಕುಮಾರ್‌, ಪ್ರಧಾನ ಕಾರ್ಯದರ್ಶಿ ಪಿ. ಶಿವಕುಮಾರ್‌, ಎಸ್‌. ವಿಷ್ಣು, ಬಿ.ಎಸ್‌. ಪ್ರವೀಣ್‌, ಎಂ. ತಿಪ್ಪೇಶ್‌, ಆರ್‌.ಸಿ. ಮಂಜುನಾಥ, ಕೆ. ಆನಂದ, ಮನ್ಸೂರ್‌ ಜಾಥದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next