Advertisement

ಮೋಟೋ ಜಿ9 ಪವರ್‌…ಮೋಟೋದಿಂದ ಭಾರತದ ಮಾರುಕಟ್ಟೆಗೆ ಹೊಸ ಫೋನ್ ಗಳು

06:51 PM Dec 16, 2020 | Nagendra Trasi |

ಸರಿ ಸುಮಾರು ಒಂದು ವರ್ಷದಿಂದ ಅಷ್ಟೇನೂ ಸಕ್ರಿಯವಾಗಿರದ ಮೋಟೊರೊಲಾಕಂಪನಿ ಇತ್ತೀಚಿಗೆ ಎರಡು ಹೊಸ ಮೊಬೈಲ್‌ಗ‌ಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎರಡು ಮಾಡೆಲ್‌ಗ‌ಳ ಸ್ಪೆಸಿಫಿಕೇಷನ್‌ ಗ್ರಾಹಕ ನೀಡುವ ದರಕ್ಕೆ ಮೌಲ್ಯ ನೀಡುವಂಥದ್ದಾಗಿದೆ. ಆ2 ಮಾಡೆಲ್‌ಗ‌ಳ ಕಿರುಪರಿಚಯ ಇಲ್ಲಿದೆ.

Advertisement

ಮೋಟೋ ಜಿ 5ಜಿ: ಈ ಮೊಬೈಲನ್ನು ಭಾರತದಲ್ಲಿ ಈಗ ಲಭ್ಯವಿರುವ5ಜಿ ಫೋನ್‌ ಗಳಲ್ಲೇ ಅತ್ಯಂತ ಅಗ್ಗದ್ದು ಎಂದು ಕಂಪನಿ ಹೇಳಿಕೊಂಡಿದೆ. (ಸದ್ಯಕ್ಕೆ ಭಾರತದಲ್ಲಿ 5ಜಿ ಇಲ್ಲ. 2021ರ ಮಧ್ಯಭಾಗದಲ್ಲಿ 5ಜಿ ಸೇವೆ ಒದಗಿಸುವುದಾಗಿ ಜಿಯೋ ಸಂಸ್ಥಾಪಕ ಮುಖೇಶ್‌ ಅಂಬಾನಿ ತಿಳಿಸಿದ್ದಾರೆ) ಈ ಮಾಡೆಲ್‌ ಒಂದೇ ಆವೃತ್ತಿಯನ್ನು ಹೊಂದಿದೆ.

128 ಜಿಬಿ ಆಂತರಿಕ ಸಂಗ್ರಹ ಮತ್ತು6 ಜಿಬಿ RAM ಇದರ ದರ 21,000 ರೂ. ಫ್ಲಿಪ್‌ ಕಾರ್ಟ್‌ನಲ್ಲಿ ಮಾತ್ರ ಲಭ್ಯ. ಇದರಲ್ಲಿ ಗ್ರಾಹಕರ ನೆಚ್ಚಿನ ಸ್ನಾಪ್‌ಡ್ರಾಗನ್‌ ಕಂಪನಿಯ750ಜಿ ಪ್ರೊಸೆಸರ್‌ ಇದೆ. ಈ ಪ್ರೊಸೆಸರನ್ನು ಹೊಂದಿರುವ ಮೊದಲ ಫೋನ್‌ ಇದು. ಮಧ್ಯಮ ದರ್ಜೆಯ ಫೋನ್‌ಗಳಲ್ಲಿ ಇದು ಬಲಶಾಲಿ ಪೊ›ಸೆಸರ್‌ ಎನ್ನಲಡ್ಡಿಯಿಲ್ಲ.

ಸ್ಟಾಕ್‌ ಅಂಡ್ರಾಯ್ಡ್ ಕಾರ್ಯಾಚರಣೆ ಇದ್ದು, ಅಂಡ್ರಾಯ್ಡ್ 10 ಹೊಂದಿದೆ.6.7 ಇಂಚಿನ ಫ‌ುಲ್‌ ಎಚ್ಡಿ ಪ್ಲಸ್‌ (1080x2400) ರೆಸ್ಯೂಲೇಷನ್‌ ಇದೆ. ಎಲ್ಟಿಪಿಎಸ್‌ ಡಿಸ್‌ಪ್ಲೇ  ಹೊಂದಿದೆ. ಈ ಡಿಸ್‌ಪ್ಲೇ ಮಾಮೂಲಿ ಐಪಿಎಸ್‌  ಡಿಸ್‌ಪ್ಲೇಗಿಂತ ಹೆಚ್ಚಿನ ಗುಣಮಟ್ಟದ್ದಾಗಿದೆ. ಇದರಲ್ಲಿ 5000 ಎಂಎಎಚ್‌ ಬ್ಯಾಟರಿಯಿದೆ. ಇದಕ್ಕೆ20
ವ್ಯಾಟ್ಸ ವೇಗದ ಚಾರ್ಜರ್‌ ನೀಡಲಾಗಿದೆ.

Advertisement

ಈ ಮೊಬೈಲ್‌48 ಮೆ.ಪಿ.,8 ಮೆ.ಪಿ. ಮತ್ತು2 ಮೆ.ಪಿ.ನ ಮೂರು ಲೆನ್ಸಿನ ಹಿಂಬದಿ ಕ್ಯಾಮರಾ ಹೊಂದಿದೆ. ಸೆಲ್ಫಿಗೆ16 ಮೆ.ಪಿ.ಕ್ಯಾಮರಾ ಅಳವಡಿಸಲಾಗಿದೆ. ಈ ಮೇಲಿನ ಸ್ಪೆಸಿಫಿಕೇಷನ್‌ ಇರುವ ಫೋನ್‌ಗಳು15 ಸಾವಿರ ದರಪಟ್ಟಿಯಲ್ಲಿ ದೊರಕುತ್ತಿವೆ.

ಆದರೆ ಇದಕ್ಕೆ21 ಸಾವಿರ ರೂ. ಏಕೆ? ಎಂದರೆ ಇದರಲ್ಲಿ5ಜಿ ಸೌಲಭ್ಯ ನೀಡಲಾಗಿದೆ ಹಾಗಾಗಿ.5ಜಿ ಬಂದ ನಂತರ ಇನ್ನೂ ಎಂತೆಂಥಾ ಫೋನ್‌ಗಳು ಬರಬಹುದಲ್ಲ? ಎಂದರೆ ಖಂಡಿತ ಆಗ ಇನ್ನೂ ಹೆಚ್ಚಿನ ವಿಶೇಷಣಗಳುಳ್ಳ ಫೋನ್‌ಗಳು ಇದೇ ದರಪಟ್ಟಿಯೊಳಗೆ ಬರಬಹುದು.5ಜಿ ಹೊರತುಪಡಿಸಿದರೆ ಇಷ್ಟೇ ವಿಶೇಷಣಗಳುಳ್ಳ, ಆದರೆಕಡಿಮೆ ಬೆಲೆಯ ಇನ್ನೊಂದು ಫೋನನ್ನು ಮೋಟೋಜಿ ಬಿಡುಗಡೆ ಮಾಡಿದೆ. ಅದೆಂದರೆ ಮೋಟೋ ಜಿ9 ಪವರ್‌.

 

ಮೋಟೋ ಜಿ9 ಪವರ್‌: ಇದು4 ಜಿಬಿ RAM ಹಾಗೂ 64 ಜಿಬಿ ಆಂತರಿಕ ಸಂಗ್ರಹ ಹೊಂದಿದೆ. ಇದರ ದರ 12,000 ರೂ. ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಡಿ.15ರಿಂದ ಲಭ್ಯ.  ಸ್ನಾಪ್‌ಡ್ರಾಗನ್‌ 662 ಪೊ›ಸೆಸರ್‌ ಹೊಂದಿದೆ. ಎಂದಿನಂತೆ ಸ್ಟಾಕ್‌ ಅಂಡ್ರಾಯ್ಡ್ 10 ಆವೃತ್ತಿ ಹೊಂದಿದೆ. ಅಂಡ್ರಾಯ್ಡ್ 11ಗೆ ಖಚಿತ ಅಪ್ಡೆಟ್‌ ಇದ್ದುಕನಿಷ್ಠ 2 ವರ್ಷ ಅಪ್‌ಡೇಟ್‌ಗಳನ್ನು ನೀಡುವುದಾಗಿ ಕಂಪನಿ ತಿಳಿಸಿದೆ. (ಇದು ಮೋಟೋ ಜಿ 5ಜಿಗೂ ಅನ್ವಯ). ಇದರಲ್ಲಿ 6.8 ಇಂಚಿನ, ಎಚ್‌ಡಿ ಪ್ಲಸ್‌
(7201600) ಡಿಸ್‌ಪ್ಲೇ ಇದೆ.

ಫ‌ುಲ್‌ ಎಚ್‌ಡಿ ಪ್ಲಸ್‌ ಇಲ್ಲ.6000 ಎಂಎಎಚ್‌ ಭರ್ಜರಿ ಬ್ಯಾಟರಿ ಇದ್ದು,20 ವ್ಯಾಟ್‌ನ ಟರ್ಬೊ ಚಾರ್ಜರ್‌ ಇದೆ. 64 ಮೆ.ಪಿ.ಕ್ಯಾಮೆರಾ: ಈ ಮಾಡೆಲ್‌ನಲ್ಲಿ 64 ಮೆ.ಪಿ. 2 ಮೆ.ಪಿ. ಮತ್ತು 2 ಮೆ.ಪಿ. ಸೇರಿ ಮೂರು ಲೆನ್ಸಿನ ಕ್ಯಾಮೆರಾ ಇದೆ. ಸೆಲ್ಫಿಗೆ16 ಮೆ.ಪಿ.ಕ್ಯಾಮೆರಾ ನೀಡಲಾಗಿದೆ.21000 ರೂ. ದರದ ಮೊದಲು ತಿಳಿಸಿದ ಮಾಡೆಲ್‌ಗೆ48 ಮೆ.ಪಿ. ಕ್ಯಾಮೆರಾ ಅಳವಡಿಸಿ,12000 ರೂ. ದರದ ಈ ಫೋನಿಗೆ 64 ಮೆ.ಪಿ.ಕ್ಯಾಮೆರಾ ನೀಡಲಾಗಿದೆ! ಮೆಗಾಪಿಕ್ಸಲ್‌ ಮುಖ್ಯವಲ್ಲ, ಕ್ಯಾಮೆರಾದಲ್ಲಿರುವ ಲೆನ್ಸ್ ನ ಗುಣಮಟ್ಟ ಮುಖ್ಯ ಎನ್ನುತ್ತೇವೆ. ಹಾಗೆ ಇದರಲ್ಲಿ 64 ಮೆ.ಪಿ.ಗಿಂತ48 ಮೆ.ಪಿ. ಗುಣಮಟ್ಟ ಚೆನ್ನಾಗಿದೆಯೋ ಏನೋ ಗೊತ್ತಿಲ್ಲ!

*ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next