Advertisement

ದಾನಿಗಳ ಸಹಕಾರ ಸಂಘದ ಅಭಿವೃದ್ಧಿಗೆ ಪ್ರೇರಕ: ಹರೀಶ್‌ ಎನ್‌. ಶೆಟ್ಟಿ

11:19 AM Aug 13, 2019 | Team Udayavani |

ಮುಂಬಯಿ, ಆ. 12: ಕಾರ್ಯಕರ್ತರ ನಿರಂತರ ಸೇವೆ ಕಳೆದ ಹದಿನೆಂಟು ವರ್ಷಗಳಿಂದ ನಾಡು-ನುಡಿಯ ಪರಂಪರೆ, ವೈಭವವನ್ನು ಮಹಾನಗರದಲ್ಲಿ ಕಂಗೊಳಿಸುವುದರ ಜತೆಗೆ ಮಲಾಡ್‌ ಕನ್ನಡ ಸಂಘ ಉಪನಗರದಲ್ಲಿ ಹೆಸರುವಾಸಿಯಾಗಲು ಕಾರಣವಾಯಿತು. ನಿಷ್ಠಾವಂತ ಸದಸ್ಯ ಸುಂದರ ಪೂಜಾರಿ ಅವರ ನೇತೃತ್ವದಲ್ಲಿ ಕನ್ನಡ ಕಲಿಕಾ ಶಿಬಿರವು ಯಶಸ್ವಿಯಾಗಿ ನಡೆಯುತ್ತಿದ್ದು, ಪಾಲಕರ ಸಹಾಯದಿಂದ ಹಲವಾರು ಮಕ್ಕಳು ಕನ್ನಡ ಕಲಿತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಮಲಾಡ್‌ ಕನ್ನಡ ಸಂಘದ ಅಧ್ಯಕ್ಷ ಹರೀಶ್‌ ಎನ್‌. ಶೆಟ್ಟಿ ಅವರು ನುಡಿದರು.

Advertisement

ಆ. 11ರಂದು ಮಲಾಡ್‌ ಮಾರ್ವೇರೋಡ್‌ನ‌ಲ್ಲಿರುವ ದೀಪ್‌ಮಾಲಾ ಕೋ. ಆಪರೇಟಿವ್‌ ಸೊಸೈಟಿಯಲ್ಲಿರುವ ಮಲಾಡ್‌ ಕನ್ನಡ ಸಂಘದಲ್ಲಿ ನಡೆದ ಸಂಘದ 18ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳಾ ವಿಭಾಗ, ಯುವ ವಿಭಾಗದ ನಿರಂತರ ಕಾರ್ಯಕ್ರಮಗಳು ಸಂಘವನ್ನು ಪರಿಸರದಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಜತೆಗೆ ಉಪ ನಗರದ ತುಳು-ಕನ್ನಡಿಗರು, ಕೊಡುಗೈದಾನಿಗಳ ಸಹಕಾರ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ. ಸಂಸ್ಥೆಯ ನಾಡು-ನುಡಿಪರ ಕಾರ್ಯಕ್ರಮಗಳಲ್ಲಿ ತುಳು-ಕನ್ನಡಿಗರು ಸಹಕಾರ ಸದಾಯಿರಲಿ ಎಂದು ನುಡಿದು ಶುಭಹಾರೈಸಿದರು.

ಪ್ರಾರಂಭದಲ್ಲಿ ರಶ್ಮಿ ಸುಂದರ ಪೂಜಾರಿ ಅವರ ಪ್ರಾರ್ಥನೆಯೊಂದಿಗೆ, ಪದಾಧಿಕಾರಿಗಳು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಗೌರವ ಕಾರ್ಯದರ್ಶಿ ಶಂಕರ ಡಿ. ಪೂಜಾರಿ, ಸದಸ್ಯರು, ಸಂಘದ ಕಾರ್ಯಕಲಾಪದಲ್ಲಿ ತೋರುವ ಉತ್ಸಾಹ ಈ ಸಂಘ ಬೆಳೆಯಲು ಕಾರಣವಾಗಿದೆ. ಸಂಘ ಬಲಾಡ್ಯವಾಗಲು ಎಲ್ಲಾ ತುಳು-ಕನ್ನಡಿಗರು ಸಂಘದ ಸದಸ್ಯತನ ಹೊಂದಬೇಕು ಎಂದು ನುಡಿದು, ಸ್ವಾಗತಿಸಿದರು.

2018-2019ನೇ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. 2022ರ ವರೆಗೆ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಹೆಸರನ್ನು ಸಭೆಯಲ್ಲಿ ಗೌರವ ಕಾರ್ಯದರ್ಶಿ ಶಂಕರ ಡಿ. ಪೂಜಾರಿ ಅವರು ಓದಿದರು. ಆಂತರಿಕ ಲೆಕ್ಕ ಪರಿಶೋಧಕರಾಗಿ ರಘುನಾಥ ಪೂಜಾರಿ ಮತ್ತು ಲೆಕ್ಕ ಪರಿಶೋಧಕರಾಗಿ ಎಸ್‌. ಕೆ. ಶೆಟ್ಟಿ ಆ್ಯಂಡ್‌ ಕಂಪೆನಿ ಚಾರ್ಟರ್ಡ್‌ ಅಕೌಂಟೆಂಟ್ನ್ನು ನೇಮಿಸಲಾಯಿತು.

ಸದಸ್ಯರ ಪರವಾಗಿ ಎಂ. ಎಸ್‌. ರಾವ್‌, ಕಾನೂನು ಸಲಹೆಗಾರ ಜಗದೀಶ್‌ ಹೆಗ್ಡೆ, ಶ್ಯಾಮ್‌ ಶೆಟ್ಟಿ, ದಿನೇಶ್‌ ಕುಲಾಲ್ ಅವರು ಸಂಸ್ಥೆಯ ಭವಿಷ್ಯದ ಕಾರ್ಯಯೋಜನೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಕನ್ನಡ ಕಲಿಕಾ ಶಿಬಿರದಲ್ಲಿ ಕನ್ನಡವನ್ನು ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಪರಿಸರದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ವಿಧವೆಯರಿಗೆ ಆರ್ಥಿಕ ಧನ ಸಹಾಯ ವಿತರಿಸಲಾಯಿತು. ಗತ ವಾರ್ಷಿಕ ವರದಿಯನ್ನು ಮಂಡಿಸಿದ ಜತೆ ಕಾರ್ಯದರ್ಶಿ ಅನಿಲ್ ಎಸ್‌. ಪೂಜಾರಿ ಅವರು ವಂದಿಸಿದರು.

Advertisement

ವೇದಿಕೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ಎಸ್‌. ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರಕಾಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಶಂಕರ್‌ ಆರ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್‌ ಕೆ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತಿ ಬಾಲಚಂದ್ರ ರಾವ್‌ ಅವರು ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಂಘದ ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next