Advertisement

ಅಹಂ ನಿರಸನ ಸಾರ್ಥಕ ಬದುಕಿಗೆ ಪ್ರೇರಣೆ: ಶಿವಕುಮಾರ

02:51 PM Dec 09, 2021 | Team Udayavani |

ಔರಾದ: ಅಹಂಕಾರ ಪ್ರಕೃತಿಗೆ ಇರುವುದಿಲ್ಲ, ಮನುಷ್ಯರಿಗೆ ಮಾತ್ರ ಇರುತ್ತದೆ. ಆದ್ದರಿಂದ ಅಹಂ ನಿರಸನ ಜೀವನವೇ ಸಾರ್ಥಕ ಬದುಕಿಗೆ ಪ್ರೇರಣೆ ಆಗುತ್ತದೆ ಎಂದು ಸಾಹಿತಿ ಶಿವಕುಮಾರ ಕಟ್ಟೆ ನುಡಿದರು.

Advertisement

ತಾಲೂಕಿನ ಬಲ್ಲೂರ ಗ್ರಾಮದಲ್ಲಿ ಮಲ್ಲಶೆಟ್ಟೆಪ್ಪ ಉದಗಿರೆಯವರ ಎರಡನೇ ಸ್ಮರಣೋತ್ಸವ ಹಾಗೂ ಸಾಹಿತ್ಯ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಜೀವಿಯ ಬದುಕಿಗೂ ಒಂದು ಅರ್ಥವಿರುತ್ತದೆ. ಆದರೆ ಜೀವನಕ್ಕೆ ಅರ್ಥಬರುವಂತೆ ಬದುಕುವವರು ವಿರಳ. ಪರೋಪಕಾರಿಯಾಗಿ ಸಾಮಾಜಿಕ ಮೌಲ್ಯಗಳನ್ನು ಬದುಕಿದ ಮಲ್ಲಶೆಟ್ಟೆಪ್ಪ ಜೀವನ ಮುಂದಿನ ಜನಾಂಗಕ್ಕೆ ಮಾದರಿಯಾಗಿದೆ ಎಂದರು.

ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಕೆಲವರು ಸಾವಿಗೂ ಒಂದು ಅರ್ಥ ತಂದು ಕೊಡುವುದರ ಮೂಲಕ ಸಾವಿನಾಚೇಗೂ ಬದುಕುಳಿಯುತ್ತಾರೆ. ಅಂಥ ಹಿರಿಯರ ಸ್ಮರಣೆ ನಮ್ಮ ಬದುಕಿಗೆ ಸತ್ಪ್ರೇರಣೆಯಾಗಬೇಕು. ಜತೆಗೆ ಸಾಮಾಜಿಕ ಸೇವೆ ನಮ್ಮ ಬದುಕಿನ ಭಾಗವಾಗಬೇಕು ಅಂದಾಗ ನಮ್ಮ ಜೀವನಕ್ಕೂ ಅರ್ಥಬರುತ್ತದೆಂದು ಅಭಿಪ್ರಾಯಪಟ್ಟರು.

ಮಲ್ಲಿಕಾರ್ಜುನ ಬಂಬುಳಗೆ ಅವರು ಅನುಭಾವ ನುಡಿ ನುಡಿಯುತ್ತ ಮಲ್ಲಶೆಟ್ಟೆಪ್ಪ ಅವರ ಜೀವನ ಆದರ್ಶಮಯವಾಗಿದ್ದು ಅನೇಕರ ಬದುಕಿಗೆ ನೆರವಾಗುವ ಮೂಲಕ ಸಾರ್ಥಕ ಜೀವನ ನಡೆಸಿ ನಮಗೆಲ್ಲ ಆದರ್ಶಪ್ರಾಯ ಆಗಿದ್ದರು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ಅಭಿವೃದ್ಧಿ ಅಧಿಕಾರಿ ಶರಣಬಸವ ಚಲುವಾ, ಉದ್ಯಮಿ ಬಸವರಾಜ ಪಾಟೀಲ ಮಾತನಾಡಿದರು. ಎನ್‌ಜಿಒ ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಸಿದ್ದಾರೆಡ್ಡಿ ನಾಗೋರಾ, ಹಿರಿಯ ಮುಖಂಡ ಕಲ್ಯಾಣರಾವ್‌ ಸಂಗಾಪಾಟೀಲ, ಗ್ರಾಪಂ ಸದಸ್ಯರಾದ ಶಿವರಾಜ ಪಾಟೀಲ, ಪ್ರಭು ಬಳತೆ, ಶಿಲ್ಪಾ ರೇವಣಪ್ಪ, ಪಂಡಿತ ಮಾಣಿಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿವಕುಮಾರ ತರನಾಳೆ ಮತ್ತು ದೇವೇಂದ್ರ ಕರಂಜೆ ಅವರನ್ನು ಸನ್ಮಾನಿಸಲಾಯಿತು.

Advertisement

ಕಸ್ತೂರಿ ಪಟಪಳ್ಳಿ, ವಿದ್ಯಾವತಿ ಬಲ್ಲೂರ, ಡಾ| ಬಂಡಯ್ಯ ಸ್ವಾಮಿ, ಡಾ| ರಾಜಕುಮಾರ ಅಲ್ಲೂರೆ, ಡಾ| ಈಶ್ವರಯ್ಯ ಕೊಡಂಬಲ್‌, ಡಾ| ಶಿವರಾಜ ಪಾಟೀಲ, ಡಾ| ಮನ್ಮಥ ಡೋಳೆ, ಜಗನ್ನಾಥ ಮೂಲಗೆ, ಓಂಪ್ರಕಾಶ ದಡ್ಡೆ, ಶರಣಬಸವಪ್ಪ ಕಾರೆಮುಂಗೆ, ಶರಣಪ್ಪ ಬಿರಾದಾರ ಮುಸ್ತಾಪುರ, ಶಿವಪುತ್ರ ಪಟಪಳ್ಳಿ, ರಾಜಕುಮಾರ ಉದ್ಗೀರೆ, ಗಂಗಶೆಟ್ಟಿ ಪಾಟೀಲ, ಸಂಗಶೆಟ್ಟಿ ಉದ್ಗಿರೆ, ಶಿವರಾಜ ಚಿಲ್ಲಾಳೆ, ಪ್ರಭಾಕರ ದೇಸಾಯಿ, ಅಮರೇಶ ನಿಡೋದೆ ಇನ್ನಿತರರಿದ್ದರು. ಡಾ| ಬಸವರಾಜ ಬಲ್ಲೂರ ಪ್ರಾಸ್ತಾವಿಕ ನುಡಿದರು. ಶಿವಶಂಕರ ಟೋಕರೆ ಸ್ವಾಗತಿಸಿದರು. ಜಗನ್ನಾಥ ಕಮಲಾಪುರೆ ನಿರೂಪಿಸಿದರು. ಟಿ.ಎಂ. ಮಚ್ಚೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next