Advertisement

ಇತರ ಆಟಗಾರರ ಸಹಕಾರದಿಂದ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು: ನಟರಾಜನ್

04:37 PM Jan 24, 2021 | Team Udayavani |

ಚೆನ್ನೈ: ಆಸೀಸ್ ಸರಣಿಯಲ್ಲಿ ತಂಡದ ಇತರ ಆಟಗಾರರು ನೀಡಿದ ಪ್ರೋತ್ಸಾಹ ಮತ್ತು ಸಹಕಾರದಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ವೇಗಿ ಟಿ. ನಟರಾಜನ್ ಹೇಳಿದ್ದಾರೆ.

Advertisement

ತನ್ನ ಸ್ವಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಟರಾಜನ್, ನನಗೆ ಮೊದಲ ಬಾರಿಗೆ ಅವಕಾಶ ನೀಡಿದಾಗ ಒತ್ತಡ ಅನುಭವಿಸಿದ್ದೆ. ಆದರೆ ಸಹ ಆಟಗಾರರು ಉತ್ತಮ ಪ್ರೋತ್ಸಾಹ ನೀಡಿದರು ಎಂದು ಹೇಳಿದರು.

ಇದನ್ನೂ ಓದಿ:ಬೆದರಿಸುವ ಆಸ್ಟ್ರೇಲಿಯಾವನ್ನು ಬೆಚ್ಚಿಬೀಳಿಸಿದ ಭಾರತ!

ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ನಟರಾಜನ್ ಆಸೀಸ್ ಸರಣಿಗೆ ಆಯ್ಕೆಯಾಗಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ನಟರಾಜನ್, ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಕಿತ್ತರು.

ಟಿ20 ಸರಣಿಯಲ್ಲಿ ನಟರಾಜನ್ ಆರು ವಿಕೆಟ್ ಪಡೆದು ಗಮನ ಸೆಳೆದಿದ್ದರು. ಟೆಸ್ಟ್ ಸರಣಿಯಲ್ಲಿ ನೆಟ್ ಬೌಲರ್ ಆಗಿ ಉಳಿದಿದ್ದ ನಟರಾಜನ್, ತಂಡದಲ್ಲಿನ ಗಾಯಾಳುಗಳ ಸಮಸ್ಯೆಯ ಕಾರಣದಿಂದ ನಾಲ್ಕನೇ ಟೆಸ್ಟ್ ಆಡುವ ಅವಕಾಶ ಪಡೆದಿದ್ದರು. ಬ್ರಿಸ್ಬೇನ್ ಟೆಸ್ಟ್ ನಲ್ಲಿ ಮೂರು ವಿಕೆಟ್ ಕಿತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next