Advertisement

ಚಲ ಮತ್ತು ಛಲ

08:15 AM Mar 16, 2018 | |

“ಈ ಚಿತ್ರವನ್ನು ಯೋಗಿ ಮಾಡಬೇಕಿತ್ತು. ಕಥೆ ಹೇಳಿದ್ದೆ, ಟೈಟಲ್ಲೂ ಫಿಕ್ಸ್‌ ಆಗಿತ್ತು. ಆದರೆ, ಅವರು ಮಾಡಲ್ಲ ಅಂತ ಹೇಳಿ, ನನ್ನ
ಟೈಟಲ್ಲನ್ನೇ ಇಟ್ಟುಕೊಂಡು ಬೇರೆ ಚಿತ್ರ ಮಾಡೋಕೆ ಮುಂದಾದರು.

Advertisement

ಮೊದಲೇ ಕೇಳಿದ್ದರೆ, ನಾನೇ ಕೊಡುತ್ತಿದ್ದೆ, ಟೈಟಲ್‌ಗಾಗಿ ಕೋರ್ಟ್‌ಗೆ ಹೋಗುತ್ತಿರಲಿಲ್ಲ. ನನ್ನ ಕಾನ್ಸೆಪ್ಟ್ಗೆ ಈ ಟೈಟಲ್‌ ಬೇಕಿತ್ತು. ಹಾಗಾಗಿ ನಾನು ಇದಕ್ಕಾಗಿಯೇ ವರ್ಷಗಟ್ಟಲೆ ಕಾದೆ…’ – ಹೀಗೆ ಒಂದೇ ಸಮನೆ ಹೇಳುತ್ತಾ ಹೋದರು ನಿರ್ದೇಶಕ ಚಲ. ಅವರು
ಹೇಳಿದ್ದು, “ದುನಿಯಾ 2′ ಶೀರ್ಷಿಕೆ ವಿವಾದ ಕುರಿತು. ಯೋಗಿ ಮಾಡುವ ಚಿತ್ರಕ್ಕೆ ಇದೇ ಶೀರ್ಷಿಕೆ ಇತ್ತು. ಚಲ ಅವರು ತಮ್ಮ ಛಲ ಬಿಡದೆ ಶೀರ್ಷಿಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಚಿತ್ರದ ಪೋಸ್ಟರ್‌ ಬಿಡುಗಡೆಯೂ ಆಗಿದೆ. ಮೊದಲ ಪತ್ರಿಕಾಗೋಷ್ಠಿಗೆ ತಮ್ಮ ತಂಡದ ಜತೆ ಆಗಮಿಸಿದ್ದರು ಚಲ. ಅಂದು ಅವರು ಹೇಳಿದ್ದಿಷ್ಟು.

“ನನಗಿದು ಮೂರನೇ ಚಿತ್ರ. “ಅಂದವಾದ’, “ನಾನು ನಮ್‌ ಹುಡುಗಿ ಖರ್ಚಿಗೊಂದ್‌ ಮಾvಯಾ’ ಚಿತ್ರ ಬಳಿಕ “ದುನಿಯಾ
2′ ಮಾಡುತ್ತಿದ್ದೇನೆ. ಈ ಹಿಂದೆ ಯೋಗಿ ಆವರಿಗೆ “ಝಂಡ’ ಎಂಬ ಚಿತ್ರ ಶುರುಮಾಡಿದ್ದೆ. ಆ ನಿರ್ಮಾಪಕರು ನಿಧನರಾದ ಹಿನ್ನೆಲೆಯಲ್ಲಿ, ಯೋಗಿ ಅವರಿಗೆ ಈ ಕಥೆ ಹೇಳಿದ್ದೆ. ಅವರೂ ಒಪ್ಪಿದ್ದರು. ಆದರೆ, ಮಾಡಲಿಲ್ಲ. ನಾನು ಇದನ್ನು ಬೇರೆಯವರಿಗೆ ಮಾಡಲು ಮುಂದಾದೆ. ನನ್ನ ಕಥೆಗೆ ಈ ಟೈಟಲ್‌ ಸೂಕ್ತವಾಗಿತ್ತು ಎಂಬ ಕಾರಣಕ್ಕೆ ಇಟ್ಟುಕೊಂಡೆ. ಈ ಚಿತ್ರಕ್ಕೆ ನಾಲ್ಕು ದಿನಗಳ ಕಾಲ ಚಿತ್ರೀಕರಣವಾಗಿದೆ. ಯುಗಾದಿ ಬಳಿಕ ಪುನಃ ಶುರುವಾಗಲಿದೆ. ಇದು ಪಕ್ಕಾ ಲವ್‌ಸ್ಟೋರಿ. ಒಬ್ಬ ಗ್ಯಾರೇಜ್‌ ಹುಡುಗ, ಒಬ್ಬ ಗಾರ್ಮೆಂಟ್ಸ್‌ ಹುಡುಗಿ ನಡುವಿನ ಲವ್‌ಸ್ಟೋರಿ ಇಲ್ಲಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಅಂಶಗಳು ಚಿತ್ರದ ಹೈಲೆಟ್‌. ಇದು “ದುನಿಯಾ’ ಚಿತ್ರದ ಶೇಡ್‌ ಇರುವ ಚಿತ್ರವಲ್ಲ. ಮೇಕಿಂಗ್‌ ಆ ರೀತಿ ಇರಲಿದೆಯಷ್ಟೇ. ರಾಜಕೀಯ, ರೌಡಿಸಂ, ಅಂಡರ್‌ವರ್ಲ್ಡ್ ಇವೆಲ್ಲವೂ ಇದೆ.

ಕಳೆದ ಒಂದುವರೆ ವರ್ಷದ ತಯಾರಿ ಮಾಡಿಕೊಂಡಿದ್ದೇನೆ’ ಎಂದರು ಚಲ. ಈ ಚಿತ್ರಕ್ಕೆ ರಾಜಯ್‌ ಹೀರೋ. ಈ ಹಿಂದೆ ಕೆಲ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದು ಬಿಟ್ಟರೆ, ಈ ಚಿತ್ರಕ್ಕೆ ಈಗ ಹೀರೋ ಆಗಿದ್ದಾರೆ. “ಒಂದು ದಿನ ನಿರ್ದೇಶಕರು ಬಂದು, ಫೈಟ್‌
ಬರುತ್ತಾ ಅಂದ್ರು. ಸ್ವಲ್ಪ ಬರುತ್ತೆ ಅಂದೆ. ಪೂರ್ಣ ಕಲಿತುಕೋ ಅಂದ್ರು, ರವಿ ಜಮಖಂಡಿ, ಹರಿ ಮಾಸ್ಟರ್‌ ಬಳಿ ಜಿಮ್ನಾಸ್ಟಿಕ್‌, ಕುಂಫ‌ು ಕಲಿತೆ. ಒಂದುವರೆ ವರ್ಷ ಬಳಿಕ ನಿರ್ದೇಶಕರು ನೀನೇ ಹೀರೋ ಅಂದ್ರು. ಕಥೆ ಕೇಳಿಲ್ಲ. ಒಳ್ಳೆಯ ಚಿತ್ರ ಆಗುವ ನಂಬಿಕೆ ಇದೆ’
ಎಂದರು ರಾಜಯ್‌.

ಹರಿಣಿ ಇಲ್ಲಿ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅವರದು ತುಂಬ ಎಮೋಷನಲ್‌ ಪಾತ್ರವಂತೆ. ಶುರುವಿನಿಂದ, ಕೊನೆಯವರೆಗೂ ಅವರು ಇರಲಿದ್ದಾರಂತೆ. ಅದು ಹೇಗೆ ಎಂಬುದು ಚಿತ್ರ ನೋಡಬೇಕು ಅಂದರು ಹರಿಣಿ. ಚಿತ್ರಕ್ಕೆ ನಾಯಕಿ ಆಯ್ಕೆ ಆಗಿಲ್ಲ. ಉತ್ಪಲ್‌ ಕುಮಾರ್‌ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಉಳಿದಂತೆ ಇನ್ನಷ್ಟು ಪಾತ್ರಗಳ ಆಯ್ಕೆ ಆಗಬೇಕಿದೆ.
ನಿರ್ಮಾಪಕ ಕೃಷ್ಣರಾಜ್‌ ಅವರಿಗೆ ಮೊದಲ ಚಿತ್ರ. ಒಳ್ಳೆಯ ಕಥೆಗೆ ಹುಡುಕಾಟ ನಡೆಸಿದ್ದರಂತೆ. ಚಲ ಅವರ ಕಥೆ ಕೇಳಿ, ಫಿಕ್ಸ್‌ ಆದರಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next