Advertisement

“ದೈವೀಶಕ್ತಿಯ ಆರಾಧನೆಯಿಂದ ಸತ್ಕಾರ್ಯಗಳಿಗೆ ಪ್ರೇರಣೆ’

11:41 PM May 19, 2019 | Sriram |

ಶಿರ್ವ: ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಶಕ್ತಿಯ ಆರಾಧನೆಯು ಪರಂಪರೆಯಲ್ಲಿ ಬೆಳೆದುಬಂದಿದೆ. ಸರ್ವರ ಕಲ್ಯಾಣಕ್ಕೆ ಪ್ರೇರಣಾಶಕ್ತಿಯಾದ ಆದಿಶಕ್ತಿ ಶ್ರೀ ದುರ್ಗೆಯನ್ನು ಸಗುಣ ರೂಪದಲ್ಲಿ ಉಪಾಸನೆ,ಆರಾಧನೆ ಮಾಡುವುದರಿಂದ ಅಭಯಹಸ್ತ ನೀಡಿ ರಕ್ಷಣೆ ನೀಡುತ್ತಾಳೆ.

Advertisement

ಶಿವಸ್ತುತಿಯಿಂದ ಆತ್ಮಜ್ಞಾನದ ವೃದ್ಧಿ, ದೈವೀಶಕ್ತಿಯ ಆರಾಧನೆಯಿಂದ ಸಮಾಜ ದಲ್ಲಿ ಬಲಿಷ್ಠಶಕ್ತಿಯ ಸಂಚಲನ, ಅಂತರ್ಗತ ಶಕ್ತಿ ವೃದ್ಧಿಯಾಗಿ ಸತ್ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಶ್ರೀಮದ್‌ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್‌ ಹೇಳಿದರು.

ಅವರು ಶನಿವಾರ ಬಂಟಕಲ್ಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ಹನ್ನೆರಡು ದಿನಗಳ ಪರ್ಯಂತ ಜರಗಿದ ಶ್ರೀ ದುರ್ಗಾಪರಮೇಶ್ವರೀ, ಸಪರಿವಾರ ಗಣಪತಿ, ಸುಬ್ರಹ್ಮಣ್ಯ ದೇವರ ಅಷ್ಠಬಂಧ ಪುನಃಪ್ರತಿಷ್ಠೆ, ಸಹಸ್ರ ಕುಂಭಾಭಿಷೇಕ ನಡೆದು ವರ್ಷಾವಧಿ ರಥೋತ್ಸವ, ಜಾತ್ರಾ ಮಹೋತ್ಸವದ ಸಮಾರೋಪ ಹಾಗೂ ಫಲಮಂತ್ರಾಕ್ಷತೆ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕ್ಷೇತ್ರದ ಸಮಗ್ರ ಕಾರ್ಯಗಳಲ್ಲಿ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡ ಸ್ವಯಂಸೇವಕರು/ಸೇವಕಿಯರು, ವಿವಿಧ ಸಂಘಟನೆಗಳು ಹಾಗೂ ದೇವಾಲಯಗಳ ಪ್ರತಿನಿಧಿಗಳಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವಚಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್‌ ದಂಪತಿ ಕ್ಷೇತ್ರದ ಹತ್ತು ಸಮಸ್ತರ ವತಿಯಿಂದ ಶ್ರೀಗಳವರಿಗೆ ಪಾದಪೂಜೆ ಸಲ್ಲಿಸಿದರು. ಶ್ರೀಮಠದ ಅರ್ಚಕ ಮಹೇಶ್‌ ಭಟ್‌ ಧಾರ್ಮಿಕ ಅನುಷ್ಠಾನ ನೆರವೇರಿಸಿದರು.

ಶ್ರೀಕ್ಷೇತ್ರದ ಭಕ್ತರ ವತಿಯಿಂದ ಬಂಟಕಲ್ಲು-ಮಣಿಪಾಲ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ.ಗೋಕುಲ್‌ದಾಸ್‌ ನಾಯಕ್‌, ನರಸಿಂಗೆ ದೇಗುಲದ ಆಡಳಿತ ಮೊಕ್ತೇಸರ ರಮೇಶ್‌ ಸಾಲ್ವಣ್‌ಕಾರ್‌, ಅಶೋಕ್‌ ನಾಯಕ್‌ ಹಿರ್ಗಾನ, ಬಿ. ಪುಂಡಲೀಕ ಮರಾಠೆ, ಬಂಟ್ವಾಳ ಮೋಂತಿಮಾರು ದೇವಸ್ಥಾನದ ವಿಕಾಸ್‌ ನಾಯಕ್‌ ಮಾತನಾಡಿದರು.

Advertisement

ದೇವಸ್ಥಾನ‌ದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ಜೀಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ್‌ ವೈ, ನಾಯಕ್‌, ಪ್ರಧಾನ ಕಾರ್ಯದರ್ಶಿ ಸಡಂಬೈಲು ಶಶಿಧರ ವಾಗ್ಲೆ, ಕೋಶಾಧಿಕಾರಿ ಸುರೇಶ್‌ ಕೆ. ಪ್ರಭು, ರಾಜಾಪುರ ಸಾರಸ್ವತ ಯುವ ವೃಂದದ ಗೌರವಾಧ್ಯಕ್ಷ ಕೆ.ಆರ್‌,
ಪಾಟ್ಕರ್‌, ಹಿರ್ಗಾನದ ಲಕೀÒ$¾ಪುರ, ಕಾಸರಗೋಡು ಮೊಗೇರು ದೇವಸ್ಥಾನದ ಧರ್ಮದರ್ಶಿಗಳು, ಸಮಾಜದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಮಹಿಳಾ ಪ್ರತಿನಿಧಿಗಳು, ದೇವಸ್ಥಾನದ ಆಡಳಿತ ಮತ್ತು ಜೀರ್ಣೋದ್ದಾರ ಸಮಿತಿಗಳ ಪದಾಧಿಕಾರಿಗಳು, ಭಗವದ್ಭಕ್ತರು ಉಪಸ್ಥಿತರಿದ್ದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಗಣಪತಿ ನಾಯಕ್‌ ಸ್ವಾಗತಿಸಿದರು. ಉಮೇಶ ನಾಯಕ್‌ ಪೆರ್ಣಂಕಿಲ, ರಾಮಚಂದ್ರ ಕಾಮತ್‌ ಕೊಡಿಬೆಟ್ಟು ಸಹಕರಿಸಿದರು. ನರಸಿಂಹ ನಾಯಕ್‌ ಮಣಿಪಾಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next